ಕುಂದಾಪುರ ಪ್ರವಾಸಿಗರಿಗೆ ಯೋಗ್ಯ ತಾಣ: ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಸಿ. ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲಾ ಪ್ರವಾಸೋಧ್ಯಮ ಇಲಾಖೆ ನೇತೃತ್ವದಲ್ಲಿ ನಡೆಯುತ್ತಿರುವ ಉಡುಪಿ ಪರ್ಬ ಅಂಗವಾಗಿ ಕುಂದಾಪುರದ ಕೋಟೇಶ್ವರ ಕಿನಾರ ಬೀಚ್‌ನಲ್ಲಿ ಕೋಟೇಶ್ವರ ಕಿನರಾ ಬೀಚ್ ಉತ್ಸವ ಸಮಿತಿ ಆಯೋಜಿಸಿರುವ ಊರ್‌ಮನಿ ಹಬ್ಬದ ಪೂರ್ವಭಾವಿ ಸಭೆ ಕುಂದಾಪುರದ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶುಕ್ರವಾರ ಉಪವಿಭಾಗಾಧಿಕಾರಿಗಳ ಕೋರ್ಟ್ ಸಭಾಂಗಣದಲ್ಲಿ ಜರುಗಿತು.

ಸಭೆಯಲ್ಲಿ ಉತ್ಸವ ಸಮಿತಿ ಹಾಗೂ ಸ್ಥಳೀಯ ಆಡಳಿತ ವ್ಯವಸ್ಥೆಯ ಲೋಕೋಪಯೋಗಿ ಇಲಾಖೆ, ಪುರಸಭೆ, ಪೊಲೀಸ್, ಗ್ರಾಮ ಪಂಚಾಯತ್ ಬೀಜಾಡಿ ಪಿ.ಡಿ.ಓ, ಕೊಲ್ಲೂರು ದೇವಳ ಅಧಿಕಾರಿ, ಅಗ್ನಿ ಶಾಮಕ ಠಾಣಾಧಿಕಾರಿ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ತಹಸೀಲ್ದಾರ್ ಇವರನ್ನು ಉದ್ದೇಶಿಸಿ ಮಾತನ್ನಾಡಿದ ಉಪವಿಭಾಗಧಿಕಾರಿ ಶಿಲ್ಪಾ ನಾಗ್ ಸಿ.ಟಿ ಅವರು ಕುಂದಾಪುರ ಪ್ರವಾಸೋಧ್ಯಮಕ್ಕೆ ಅತ್ಯಂತ ಸೂಕ್ತವಾದ ಪ್ರದೇಶ. ಇಲ್ಲಿ ನಿಸರ್ಗ ಸೌಂದರ್ಯ ಹಾಗೂ ಭಕ್ತಿ ಕೇಂದ್ರಗಳು ಜಗತ್ತಿನ ಜನರನ್ನು ಆಕರ್ಷಿಸುವಂತಾಗಬೇಕು. ಈ ಹಿನ್ನಲೆಯಲ್ಲಿ ಜಿಲ್ಲಾಡಿಳಿತ ಪ್ರವಾಸೋಧ್ಯಮಕ್ಕೆ ಪೂರಕವಾದ ಕಾರ್ಯಕ್ರಮಕ್ಕೆ ಸಹಕರಿಸುತ್ತಿದೆ ಎಂದರು. ಈ ಭಾಗದ ಸರ್ವರೂ ಇದೆ ಡಿ.29 ಮತ್ತು ಡಿ.30 ರಂದು ಕೋಟೇಶ್ವರ ಕಿನಾರ ಬೀಚ್‌ನಲ್ಲಿ ಪ್ರವಾಸೋಧ್ಯಮ ಇಲಾಖೆ ನೇತೃತ್ವದಲ್ಲಿ ಹಾಗೂ ಬೀಚ್ ಉತ್ಸವ ಸಮಿತಿ ಆಶ್ರಯದಲ್ಲಿ ನಡೆಯುವ ಕ್ರೀಡೆ, ವಿವಿಧ ಸ್ಪರ್ಧೆ, ಮನೋರಂಜನ ಪಾರ್ಕ್, ಸಾಂಸ್ಕೃತಿಕ ಕಾರ್ಯಕ್ರಮ, ವಸ್ತು ಪ್ರದರ್ಶನ ಯಶಸ್ವಿಗೊಳಿಸಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕುಂದಾಪುರ-ಬ

ಕಾಣಿ ಸ್ಟುಡೀಯೋದ ಸಂತೋಷ ಬಳ್ಕೂರು, ಪ್ರವೀಣ್ ಮಾರ್ಕೋಡು ತಯಾರಿಸಿದ ವರ್ನರಂಜಿತ ಲೋಗೋ ಬಿಡುಗಡೆಗೊಳಿಸಿದರು. ಉದ್ಯಮಿ ವಿನಯಕುಮಾರ್ ಶೆಟ್ಟಿ, ಬೀಚ್ ಉತ್ಸವ ಸಮಿತಿಯ ಗೌರವಧ್ಯಕ್ಷ ಆನಂದ ಸಿ. ಕುಂದರ್, ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಬೈಲೂರ್, ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಸಂಚಾಲಕ ನರೇಂದ್ರಕುಮಾರ್ ಕೋಟ, ಖಂಜಾಚಿ ರಾಘವೇಂಧ್ರ ಎಸ್. ಬೀಜಾಡಿ, ಉತ್ಸವ ಸಮಿತಿ ಸದಸ್ಯರಾದ ಭರತ್ ಬಂಗೇರ, ಸತ್ಯನಾರಾಯಣ ಮಂಜ, ಶಶಾಂಕ ಮಂಜ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿದರು. ನರೇಂದ್ರಕುಮಾರ್ ಕೋಟ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

 

 

Leave a Reply

Your email address will not be published. Required fields are marked *

12 − ten =