‘ಅಪರೇಷನ್ ಸಾರಂಗ್’: ಗಲ್ಫ್ ಕನ್ನಡಿಗರ ಒಕ್ಕೂಟದಿಂದ ಮಾನವೀಯತೆಯ ಕಾರ್ಯಾಚರಣೆ

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ/ಸೌದಿ ಅರೇಬಿಯಾ: ಕಳೆದ 3 ತಿಂಗಳಿನಿಂದ ಪಾರ್ಶ್ವವಾಯು ಪೀಡಿತರಾಗಿ ಸೌದಿ ಅರೇಬಿಯಾದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಎಸಿ ಟೆಕ್ನೀಷಿಯನ್, ಕುಂದಾಪುರದ ಖಾರ್ವಿಕೇರಿ ನಿವಾಸಿ ಚಂದ್ರಶೇಖರ ಪಾಂಡುರಂಗ ಸಾರಂಗ ಅವರನ್ನು ಸುರೇಶ್ ರಾವ್ ನೇರಂಬಳ್ಳಿ ಹಾಗೂ ಗಲ್ಫ್ ಕನ್ನಡಿಗರ ಒಕ್ಕೂಟದಿಂದ ಮಾನವೀಯತೆಯ ಕಾರ್ಯಾಚರಣೆಯಿಂದಾಗಿ ಹುಟ್ಟೂರಿಗೆ ಕರೆತರಲು ಸಾಧ್ಯವಾಗಿದೆ.

Click Here

Call us

Call us

ಸುರೇಶ್ ರಾವ್

ಕಳೆದ 30 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಎಸ್ ಟೆಕ್ನೀಷಿಯನ್ ಆಗಿ ದುಡಿಯುತ್ತಿರುವ ನಿವಾಸಿ ಚಂದ್ರಶೇಖರ ಪಾಂಡುರಂಗ ಸಾರಂಗ ಅವರು ರಿಯಾದ್’ನ ಆಸ್ಪತ್ರೆಯಲ್ಲಿ ಪಾರ್ಶ್ವವಾಯುವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಭಾರತೀಯ ಸ್ನೇಹಿತರ ಸಹಕಾರದಿಂದ ಕುಂದಾಪುರದಲ್ಲಿರುವ ಕುಟುಂಬಿಕರಿಗೆ ವಿಷಯ ತಲುಪಿಸಲಾಗಿತ್ತು. ಕೊರೋನಾ ಮಹಾಮಾರಿ ಕಾರಣದಿಂದ ಆಸ್ಪತ್ರೆಗೆ ಸಂದರ್ಶಕರನ್ನು ಬಿಡುತ್ತಿರಲ್ಲಿಲ್ಲ ಅವರ ಆರೋಗ್ಯ ಸ್ಥಿತಿಯನ್ನು ತಿಳಿಯದೇ ಆತಂಕಗೊಂಡು ಅವರ ಮಗನು ಮೂಲತ: ಕೋಟೇಶ್ವರದವರಾದ ಪ್ರಸ್ತುತ ಕುವೈತ್ ನಲ್ಲಿರುವ ಸುರೇಶ್ ರಾವ್ ನೇರಂಬಳ್ಳಿಯವರನ್ನು ಸಂಪರ್ಕಿಸಿ ಅವರನ್ನು ಭಾರತಕ್ಕೆ ಕರೆತರುವ ಬಗ್ಗೆ ಸಹಾಯಕ್ಕಾಗಿ ಕೇಳಿಕೊಂಡಿದ್ದರು. ಸುರೇಶ್ ರಾವ್ ಅವರು ಚಂದ್ರಶೇಖರ್ ಅವರ ಕಂಪೆನಿ ಮತ್ತು ಮಾಲೀಕರ ಬಗ್ಗೆ ಎಲ್ಲಾ ವಿವರಗಳನ್ನೆಲ್ಲಾ ಪಡೆದುಕೊಂಡು, ಮೊತ್ತಮೊದಲು ಅವರ ಪರಿಸ್ಥಿತಿಯ ಬಗ್ಗೆ ತಿಳಿಯಲಿಕೋಸ್ಕರ ಸೌದಿಯಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯ ನರ್ಸ್ ಬಬ್ಬರ ಸಹಾಯದಿಂದ ಅವರದೆ ಮೊಬೈಲ್ ನಿಂದ ವಿಡಿಯೋ ಕಾಲ್ ಮೂಲಕ ಕುಟುಂಬದವರ ಸಂಪರ್ಕ ಸಾಧಿಸಿದರು.

Click here

Click Here

Call us

Visit Now

ಬಳಿಕ ಗಲ್ಫ್ ಕನ್ನಡಿಗರ ಒಕ್ಕೂಟದ ಪ್ರತಿನಿಧಿಗಳಾದ ಅಬುಧಾಬಿಯ ಸರ್ವೋತ್ತಮ ಶೆಟ್ಟಿ ಹಾಗೂ ದುಬೈನ ಪ್ರವೀಣ್ ಕುಮಾರ್ ಶೆಟ್ಟಿ, ದೀಪಕ್ ಸೋಮಶೇಖರ್ ಅವರ ಜೊತೆ ಸಮಾಲೋಚಿಸಿದ ಸುರೇಶ್ ರಾವ್ ಅವರು, ಸಂಘದ ಸೌದಿ ಅರೇಬಿಯಾದ ಪ್ರತಿನಿಧಿಗಳಾದ ಸೌದಿಯಲ್ಲಿ ಭಾರತೀಯ ರಾಯಭಾರಿ ಕಚೇರಿಯ ಅಂಗೀಕೃತ ಸಮಾಜ ಸೇವಕರೂ ಆದ ಮಂಗಳೂರಿನ ಗಣೇಶಪುರ ಪ್ರಸನ್ನ ರಾವ್ ಮತ್ತು ಸೌದಿಯಲ್ಲಿ ಕೆ.ಎಮ್.ಸಿ. ಆಸ್ಪತ್ರೆಯನ್ನು ನೆಡೆಸುತ್ತಿರುವ ಆರ್ಡಿ ಸಂತೋಷ ಕುಮಾರ್ ಶೆಟ್ಟಿ ಹಾಗೂ ಅವರ ಪತ್ನಿ ಡಾ| ವಾಣಿಶ್ರೀ ಶೆಟ್ಟಿಯವರನ್ನು ಸಂಪರ್ಕಿಸಿದರು. ಹಾಗೆಯೆ ಭಟ್ಕಳದಲ್ಲಿರುವ ಡಾ|ಜಹೀರ್ ರವರ ಮೂಲಕ ಸೌದಿಯಲ್ಲಿರುವ ಫೌಜನ್ಬಿಡ್ಚೋಲು ಮುರ್ಡೇಶ್ವರ ಅವರನ್ನುಸಂಪರ್ಕಿಸಿ ಸಹಾಯ ಪಡೆದು ಆಸ್ಪತ್ರೆಗೆಯಲ್ಲಿ ಸಾರಂಗ್ ಅವರನ್ನು ಭೇಟಿ ಮಾಡಿದರು. ಸಾರಂಗರವರು ತನ್ನ ನಡುಗುವ ಕೈಯಿಂದ ಇವರ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು, ನನ್ನನ್ನು ಊರಿಗೆ ಕಳುಹಿಸುತ್ತೀರಾ ಎಂದು ಸಂಜ್ಞೆಯಿಂದಲೆ ದೈನ್ಯರಾಗಿ ಕೇಳಿಕೊಂಡಿದ್ದನ್ನು ಅವರು ನೆನಪಿಸಿಕೊಂಡರು.

ಈ ಮಧ್ಯೆ ಅವರ ಸೌದಿಯ ಮಾಲೀಕರಾದ ಅಬ್ದುಲ್ಲಾರವರನ್ನು ಸಂಪರ್ಕಿಸಿ ವಿನಂತಿಸಿಕೊಳ್ಳುವಾಗ, ತಾವೇ ಸ್ವತಹ: ಎರೆಡೆರೆಡು ಬಾರಿ ಟಿಕೇಟ್ ಮಾಡಿಸಿದ್ದರೂ, ಭಾರತೀಯ ರಾಯಭಾರಿ ಕಚೇರಿಯಿಂದ ಕೆಲವು ಕಾಗದ ಪತ್ರಗಳು ಬೇಕಿದ್ದು ಮತ್ತು ರೋಗಿಯು ಮಲಗಿರುವ ಸ್ಥಿತಿಯಲ್ಲೆ ಇರುವುದರಿಂದ ಈಗಿರುವ ಚಾರ್ಟಡ್ ವಿಮಾನಗಳು ಹಾಗೂ ವಂದೇ ಭಾರತ್ ಮಿಷನ್ ಅಡಿಯಲ್ಲಿರುವ ವಿಮಾನಗಳು ಚಿಕ್ಕದಾಗಿದ್ದು ಸ್ಟ್ರೆಚರ್ ನ ವ್ಯವಸ್ಥೆ ಇಲ್ಲದೆ ಎರಡು ಭಾರಿ ಟಿಕೇಟ್ ಮಾಡಿಸಿ ರದ್ದಾಗಿರುವ ಬಗ್ಗೆ ತಿಳಿಸಿ ತಮ್ಮ ಅಸಹಾಯಕತೆಯನ್ನು ವ್ಯಕ್ತ ಪಡಿಸಿದರು. ಪ್ರಸನ್ನ ರಾವ್ ಅವರ ಮೂಲಕ ರಾಯಭಾರಿ ಕಚೇರಿಯಿಂದ ಕಾಗದ ಪತ್ರಗಳನ್ನು ಮಾಡಿಸಿಕೊಂಡು, ಸಾರಂಗರವರ 2 ತಿಂಗಳ ಹಿಂದೆಯೆ ಅವಧಿ ಮೀರಿದ ಪಾಸ್ಫೋರ್ಟ್ ಅನ್ನು ಉರ್ಜಿತಗೊಳಿಸಿಕೊಳ್ಳಲಾಯಿತು.

Call us

ಸಾರಂಗರವರು ಸ್ವಲ್ಪ ಮಟ್ಟಿಗೆ ಎದ್ದು ಕುಳಿತುಕೊಳ್ಳಲು ಪ್ರಾರಂಭ ಮಾಡಿದ್ದರಿಂದ ಮೂರನೆಯ ಬಾರಿಗೆ ಮಾರ್ಚ್ 16ರ ದಮಾಮ್-ಮಂಗಳೂರು ಟಿಕೇಟ್ ಮಾಡಲಾಯಿತಾದರೂ ಆಸ್ಪತ್ರೆಯವರು ರೋಗಿಯ ಜೊತೆ ಸಹ ಪ್ರಯಾಣಿಕರಾಗಿ ಒರ್ವ ದಾದಿ ಅಥವಾ ಡಾಕ್ಟರ್ ರವರ ವ್ಯವಸ್ಥೆ ಮಾಡುವುದಾದರೆ ಮಾತ್ರ ಅನುಮತಿ ಪತ್ರ ನೀಡಿ ಡಿಸ್ಚಾರ್ಜ್ ಮಾಡುವುದಾಗಿ ಹೇಳಿದ್ದರಿಂದ ಮತ್ತೊಮ್ಮೆ ಪ್ರಯಾಣಕ್ಕೆ ಅಡ್ಡಿಯಾಗಿ ಕಾರ್ಯಾಚರಣೆಯಲ್ಲಿ ಹಿನ್ನಡೆ ಉಂಟಾಯಿತು. ಹೀಗೆ ಅವರನ್ನು ತಾಯ್ನಾಡಿಗೆ ಕರೆತರುವ ಕಾರ್ಯಾಚರಣೆಯ ಹಲವಾರು ಪ್ರಯತ್ನಗಳು ವಿಫಲವಾಗಿ ಕಳೆದ 15 ದಿನಗಳಿಂದ ಛಲ ಬಿಡದೆ ಪ್ರಯತ್ನಿಸಿ, ನಾಲ್ಕನೆಯ ಬಾರಿಗೆ ಮಾರ್ಚ್ 24ರ ದಮಾಮ್-ಮಂಗಳೂರು ವಿಮಾನದ ಟಿಕೇಟ್ ಮಾಡಿಸಿ, ರೋಗಿಯನ್ನು ಆಂಬ್ಯುಲೆನ್ಸ್ ಮೂಲಕ ದಮಾಮ್ ಕರೆತರಲಾಯಿತು. ಅಡ್ಡಿ-ಆತಂಕಗಳನ್ನು ನಿವಾರಿಸಿಕೊಂಡು ದಮಾಮ್ ಸಾರಂಗ್ ಅವರು ಪ್ರಯಾಣಿಸುವ ಎರ್ ಇಂಡಿಯಾ ಎಕ್ಸ್‌ಪ್ರೆಸ್ ಸಿಬ್ಬಂದಿಗಳಿಂದ ಇವರಿಗೆ ಪ್ರಯಾಣಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂಬ ಕಿರಿಕಿರಿ. ಡಾ| ಶೈಲೇಂದ್ರನಾಥ್ ಬೇಕಲ್ ಅವರು ರೋಗಿಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತೇನೆಂದು ಹೇಳಿದ ನಂತರ ಅನುಮತಿ ದೊರೆಯಿತು. ಕಾರ್ಯಾಚರಣೆಯ ಅಂಗವಾಗಿ ಅವರು ಬಂದಿಳಿದ ನಂತರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಾವುದೇ ತೊಂದರೆ, ಅಡಚಣೆಯಿಲ್ಲದೆ ಶೀಘ್ರವಾಗಿ ಹೊರಬರಲು ಸುರೇಶ್ ರಾವ್ ರವರು ಸಂಬಂಧಪಟ್ಟ ಅಧಿಕಾರಿಗಳಿಗೆ, ಶಾಸಕರು-ಸಂಸದರಿಗೆ ಪೋನ್ ಮೂಲಕ ಹಾಗೂ ಪ್ರಧಾನಮಂತ್ರಿಯವರಿಗೆ ಕೂಡಾ ಟ್ವಿಟರ್ ಮೂಲಕ ವಿನಂತಿಸಿಕೊಂಡಿದ್ದರು. ಸಾರಂಗರವರ ಕ್ಷೇಮವಾಗಿ ತಲುಪುವಿಕೆಗೋಸ್ಕರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾರ್ಥನೆಗಾಗಿ ವಿನಂತಿಸಿಕೊಳ್ಳಲಾಗಿತ್ತು.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗಡೆ ಗಲ್ಫ್ ಕನ್ನಡಿಗರ ಒಕ್ಕೂಟದ ವತಿಯಿಂದ ತಮ್ಮ ಗ.ಕ.ಒಕ್ಕೂಟದ ದುಬೈ ಪ್ರತಿನಿಧಿಯಾದ ಸಾಧನದಾಸ್ ಶಿರೂರು ಅವರು ಅಂಬ್ಯುಲೆನ್ಸ್ ಕಾದಿರಿಸುವ ವ್ಯವಸ್ಥೆ ಮಾಡಿಸಿದ್ದು, ಸಾರಂಗ್ ಅವರು ದಮಾಮ್ ಮೂಲಕ ಸುಖಕರವಾಗಿ ಪ್ರಯಾಣಿಸಿ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾರ್ಚ್ 25ರ ಬೆಳಗಿನಜಾವ 2:30ಕ್ಕೆ ಕ್ಷೇಮವಾಗಿ ತಲುಪಿ, ಅಲ್ಲಿಂದ ಆಂಬ್ಯುಲೆನ್ಸ್ ನಲ್ಲಿ ಪ್ರಯಾಣಿಸಿ ಪ್ರಾಥಮಿಕ ತಪಾಸಣೆಯನ್ನುಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಮುಗಿಸಿಕೊಂಡು ಸಂಜೆ 4:00ಕ್ಕೆ ಮನೆ ತಲುಪಿ ಕುಟುಂಬದವರನ್ನುಕೂಡಿಕೊಂಡಿದ್ದಾರೆ.

ಕೊನೆಗೂ ಫಲಪ್ರದವಾದ ಈ ಸಂಪೂರ್ಣ ಕಾರ್ಯಾಚರಣೆಯ ಬಗ್ಗೆ ಕುವೈತ್’ನಿಂದ ಸುರೇಶ್ ರಾವ್ ನೇರಂಬಳ್ಳಿಯವರು ಇದು ನಮ್ಮೆಲ್ಲರ ಅಳಿಲುಸೇವೆ, ನಿಮ್ಮೆಲ್ಲರ ಪ್ರಾರ್ಥನೆ, ಆ ಭಗವಂತನ ಅನುಗ್ರಹ ಅವರನ್ನು ಕಾಪಾಡಿದೆ. ಈ ಕಾರ್ಯದಲ್ಲಿ ಭಾಗಿಯಾದ ಗಲ್ಫ್ ಕನ್ನಡಿಗರ ಒಕ್ಕೂಟದ ಎಲ್ಲಾ ಗಲ್ಫ್ ರಾಷ್ಟ್ರಗಳ ಪ್ರತಿನಿಧಿಗಳು, ಸಲಹೆ ಸಹಕಾರ ನೀಡಿದ ಸರ್ವೋತ್ತಮ ಶೆಟ್ಟಿ ಅಬುಧಾಬಿ, ಪ್ರವೀಣ ಕುಮಾರ್ ಶೆಟ್ಟಿ, ದೀಪಕ್ ಸೋಮಶೇಖರ್ ದುಬೈ ಹಾಗೂ ಪ್ರತ್ಯಕ್ಷ ಪರೋಕ್ಷವಾಗಿ ಕಾರ್ಯಾಚರಣೆಯಲ್ಲಿ ಭಾಗಿಯಾದವರು, ಸೌದಿ ಅರೇಬಿಯಾದ ರಾಜಾಡಳಿತ, ಸಾರಂಗ್ ಅವರ ಮಾಲೀಕರಾದ ಅಬ್ದುಲ್ಲಾರವರು, ಸಹೋದ್ಯೋಗಿಗಳು, ರಿಯಾದ್ನ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು, ಸೌದಿಯ ಭಾರತೀಯ ರಾಯಭಾರಿ ಮತ್ತು ರಾಯಭಾರಿ ಕಛೇರಿ ಸಿಬ್ಬಂದಿಗಳು, ಸೌದಿಯಲ್ಲಿ ಆಂಬ್ಯುಲೆಸ್ಸ್ ಸಿಬ್ಬಂದಿಗಳು, ಸೌದಿ ಗಲ್ಫ್ ಕನ್ನಡಿಗರ ಒಕ್ಕೂಟದ ಸದಸ್ಯರಾದ ಆರ್ಡಿ ಸಂತೋಷ್ ಶೆಟ್ಟಿ, ಡಾ। ವಾಣಿಶ್ರೀ ಎಸ್. ಶೆಟ್ಟಿ, ಗಣೇಶಪುರ ಪ್ರಸನ್ನ ರಾವ್, ಮಂಗಳೂರು ಇವರುಗಳ ಜೊತೆಯಲ್ಲಿ ಸೌದಿಯಲ್ಲಿರುವ ಫೌಜನ್ಬಿಡ್ಚೋಲು ಮುರ್ಡೇಶ್ವರ, ಡಾ। ವಾಸೀಮ್, ಡಾ। ಉದಯ್ ನಾಯಕ್, ಡಾ। ಜಹೀರ್ ಬೆಂಗಳೂರು, ಡಾ। ಶೈಲೇಂದ್ರನಾಥ್ ಬೆಕಲ್, ಟೀಮ್ ಹೆಲ್ತ್‌ಕೇರ್ ಪೊಲಿಕ್ಲಿನಿಕ್ಹಾಗೂ ಕುಂದಾಪುರ-ಮಂಗಳೂರು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ ಗ.ಕ.ಒಕ್ಕೂಟದ ದುಬೈ ಸದಸ್ಯರಾದ ಸಾಧನದಾಸ್ ಶಿರೂರು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

 

Leave a Reply

Your email address will not be published. Required fields are marked *

eight + 18 =