ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಯಡ್ತರೆ ಶ್ರೀ ಪಾಣ್ತಿಗರಡಿ ಹಾಗುಳಿ ಮತ್ತು ಪರಿವಾರ ದೈವಸ್ಥಾನದಲ್ಲಿ ಬುಧವಾರ ಶ್ರೀ ನಾಗ ದೇವರ ಪ್ರತಿಷ್ಠಾ ಕಾರ್ಯಕ್ರಮ ಜರುಗಿತು.
ಶ್ರೀ ಪಾಣ್ತಿಗರಡಿ ಹಾಗುಳಿ ಮತ್ತು ಪರಿವಾರ ದೈವಗಳ ಪುನರ್ಪ್ರತಿಷ್ಠಾ ಬ್ರಹ್ಮಕಶಾಭಿಷೇಕ ಮಹೋತ್ಸವ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ವೇ. ಮೂ. ಜ್ಯೋತಿಷಿ ಭಟ್ಕಳ ರಮೇಶ ಭಟ್ಟರ ನೇತೃತ್ವದಲ್ಲಿ ಬೆಳಿಗ್ಗೆ ಶ್ರೀ ನಾಗ ದೇವರ ಬಿಂಬ ಪ್ರತಿಷ್ಠೆ, ಜೀವ ಕುಂಬಾಭಿಷೇಕ, ಪ್ರಾಣ ಪ್ರತಿಷ್ಠೆ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಪೂಜೆ ಹಾಗೂ ಹೋಮಗಳು ನಡೆಯಲಿದೆ. ಕೊನೆಯಲ್ಲಿ ನಾಗದರ್ಶನ ಸೇವೆ ನಡೆಯಿತು.
ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಮೋಹನ ಪೂಜಾರಿ ಉಪ್ಪುಂದ, ಸೇವಾರ್ಥಿ ಮುತ್ತಯ್ಯ ಪೂಜಾರಿ, ಸಮಿತಿಯ ಕಾರ್ಯದರ್ಶಿ, ಆಡಳಿತ ಮೊಕ್ತೇಸರರು ಹಾಗೂ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು. ಬಳಿಕ ದೈವಸ್ಥಾನದಲ್ಲಿ ಅನ್ನಸಂತರ್ಪಣೆ ನಡೆಯಿತು.