ಇಂದು-ನಾಳೆ ಶುಭ ಮುಹೂರ್ತದ ಹಿನ್ನೆಲೆ: ಕೋವಿಡ್ ಮಾರ್ಗಸೂಚಿಯಂತೆ ನಡೆಯುತ್ತಿವೆ ನೂರಾರು ಸಮಾರಂಭ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯದಲ್ಲಿ ಕೊರೋನಾ ಅಬ್ಬರದಿಂದ ಕಾನೂನು ಬಿಗಿಗೊಳಿಸಿರುವ ಹೊತ್ತಲ್ಲೇ ಹಲವು ತಿಂಗಳ ಹಿಂದೆ ನಿಗದಿಯಾಗಿದ್ದ ಮದುವೆ ಮುಂತಾದ ಖಾಸಗಿ ಕಾರ್ಯಕ್ರಮಗಳು ಕೊರೋನಾ ಮಾರ್ಗಸೂಚಿಯಂತೆ ನಡೆಯುತ್ತಿವೆ. ವಾರದ ಕರ್ಪ್ಯೂ ನಡುವೆಯೂ ಇಂದು ಹಾಗೂ ನಾಳೆ ಶುಭ ಮುಹೂರ್ತವಿರುವುದರಿಂದ ಕೋವಿಡ್ ನಿಯಮ ಪಾಲಿಸಿಕೊಂಡು, ಅನುಮತಿ ಪಡೆದ ನೂರಾರು ಕಾರ್ಯಕ್ರಮಗಳು ಕರಾವಳಿ ಭಾಗದಲ್ಲಿ ನಡೆಯುತ್ತಿದೆ.

Call us

Call us

ಎ.25ರಂದು ಕುಂದಾಪುರ ತಾಲೂಕಿನಲ್ಲಿ ಮದುವೆ ಮೊದಲಾದ 91 ಖಾಸಗಿ ಕಾರ್ಯಕ್ರಮಗಳಿಗೆ  ಅನುಮತಿ ನೀಡಲಾಗಿದ್ದರೇ, ಬೈಂದೂರು ತಾಲೂಕಿನಲ್ಲಿ 54 ಹಾಗೂ ಬ್ರಹ್ಮಾವರ ತಾಲೂಕಿನ 55 ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ. ಕಾರ್ಕಳದಲ್ಲಿ 41, ಹೆಬ್ರಿಯಲ್ಲಿ 12, ಉಡುಪಿಯಲ್ಲಿ 71, ಕಾಪುವಿನಲ್ಲಿ 55 ಕಾರ್ಯಕ್ರಗಳಿಗೆ ಅನುಮತಿ ನೀಡಲಾಗಿದೆ.

Call us

Call us

ಎ.26ರಂದು ಕುಂದಾಪುರದಲ್ಲಿ ಗರಿಷ್ಠ ಕಾರ್ಯಕ್ರಮಗಳು ನಡೆಯಲಿದ್ದು ತಾಲೂಕಿನಲ್ಲಿ ಒಟ್ಟು 152 ಮದುವೆ ಮೊದಲಾದ ಸಮಾರಂಭಗಳು, ಬೈಂದೂರು ತಾಲೂಕಿನಲ್ಲಿ 25, ಬ್ರಹ್ಮಾವರ ತಾಲೂಕಿನ್ಲಲಿ 24, ಕಾರ್ಕಳದಲ್ಲಿ 17, ಹೆಬ್ರಿಯಲ್ಲಿ 4, ಉಡುಪಿಯಲ್ಲಿ 51 ಹಾಗೂ ಕಾಪುವಿನಲ್ಲಿ 17 ಸಮಾರಂಭಗಳಿಗೆ ಅನುಮತಿ ನೀಡಲಾಗಿದೆ.

ಇಂದು ನಡೆದ ಬಹುಪಾಲು ಸಮಾರಂಭಗಳಲ್ಲಿ ಹೆಚ್ಚಿನ ಜನರು ಸೇರಿರಲಿಲ್ಲ. ಮಾಸ್ಕ್ ಧರಿಸಿರುವುದು, ಸ್ಯಾನಿಟೈಸರ್ ಬಳಸುತ್ತಿರುವುದು ಕಂಡುಬಂತು. ಪ್ಲೈಯಿಂಗ್ ಸ್ವ್ಯಾಡ್ ಕೂಡ ಅಲ್ಲಲ್ಲಿ ಸಂಚರಿಸಿ ಕೋವಿಡ್ ಮಾರ್ಗಸೂಚಿ ಪಾಲನೆಯಾಗುತ್ತಿರುವ ಬಗ್ಗೆ ಪರಿಶೀಲಿಸಿತು.

Leave a Reply

Your email address will not be published. Required fields are marked *

fifteen + nine =