ಷರತ್ತುಗಳಿಗೆ ಒಳಪಟ್ಟು ಅಂಗಡಿ ತೆರೆಯಲು ಅನುಮತಿ: ಜಿಲ್ಲಾಧಿಕಾರಿ ಜಿ. ಜಗದೀಶ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕೋವಿಡ್-19 ಕುರಿತಂತೆ ತಾತ್ಕಾಲಿಕ ನಿಯಮಾವಳಿಗಳನ್ನು ಹೊರಡಿಸಿ ಸರ್ಕಾರದ ಆದೇಶದಂತೆ ಕೆಲವೊಂದು ವಿನಾಯಿತಿ ನೀಡಲಾಗಿರುತ್ತದೆ. ಈಗಾಗಲೇ ಸಿನಿಮಾ ಹಾಲ್‌ಗಳು, ಮಲ್ಟಿಪ್ಲೇಕ್ಸ್ ಶಾಪಿಂಗ್ ಮಾಲ್, ಎಸಿ, ಸೆಂಟ್ರಲ್ ಎಸಿ, ಸಿಂಗಲ್ ಬ್ರ್ಯಾಂಡ್, ಮಲ್ಟಿ ಬ್ರ್ಯಾಂಡ್, ಸ್ಪೋರ್ಟ್ಸ್ ಕಾಂಪೆಕ್ಸ್ ಮುಂತಾದವುಗಳನ್ನು ಹೊರತ್ತುಪಡಿಸಿ ಉಳಿದ ಅಂಗಡಿಗಳನ್ನು ತೆರೆಯಲು ಅನುಮತಿಸಲಾಗಿದೆ. ಮುಂದುವರಿದು ಎಸಿ, ಸೆಂಟ್ರಲ್ ಎಸಿ, ಸಿಂಗಲ್ ಬ್ರ್ಯಾಂಡ್, ಮಲ್ಟಿ ಬ್ರ್ಯಾಂಡ್ ಅಂಗಡಿಗಳಿಗೆ ಸಂಬಂದಿಸಿದಂತೆ ನಿಬಂಧನೆಗಳನ್ನು ವಿಧಿಸಿ ಪ್ರಾರಂಭಿಸಲು ಅನುಮತಿ ನೀಡುವುದು ಸೂಕ್ತವೆಂದು ನಿರ್ಧರಿಸಿ ಈ ಕೆಳಗಿನ ಷರತ್ತಿಗೊಳಪಟ್ಟು ಈ ಅಂಗಡಿಗಳನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿ ಜಿ.ಜಗದೀಶ್ ಅನುಮತಿ ನೀಡಿದ್ದಾರೆ.

Click Here

Call us

Call us

ಷರತ್ತುಗಳು:
1) ಚಿನ್ನಾಭರಣ ಮಳಿಗೆಗಳು, ಬಟ್ಟೆ ಅಂಗಡಿಗಳು, ಸಿಂಗಲ್ ಬ್ರ್ಯಾಂಡ್, ಮಲ್ಟಿ ಬ್ರ್ಯಾಂಡ್ ಸೇರಿದಂತೆ ಇತಂಹ ಮಳಿಗೆಗಳಲ್ಲಿ ಎಲ್ಲಾ ಮಹಡಿಗಳಲ್ಲಿ ಸೇರಿ ಒಟ್ಟು ೨೫ ಜನ ಸಿಬ್ಬಂದಿಗಳು ಹಾಗೂ ೨೫ ಜನ ಗ್ರಾಹಕರು ಹಾಗೂ ಮಲ್ಟಿ ಬ್ರಾಂಡ್ ಎಲೆಕ್ರ್ಟಾನಿಕ್ಸ್ ಮಳಿಗೆಗಳಲ್ಲಿ (ಪೈ ಸೇಲ್ಸ್, ಹರ್ಷಮುಂತಾದ) ಒಟ್ಟು 100 ಜನ ಸಿಬ್ಬಂದಿಗಳು ಹಾಗೂ 10 ಜನ ಗ್ರಾಹಕರಿಗೆ ಅವಕಾಶವನ್ನು ನೀಡಲಾಗಿದೆ.

Click here

Click Here

Call us

Visit Now

2) ಮಳಿಗೆ ತೆರೆಯುವ ಮುನ್ನಾ ನಿಯೋಜಿಸಲಾಗುವ ಸಿಬ್ಬಂದಿಗಳ ಆರೋಗ್ಯ ತಪಾಸಣೆಯನ್ನು ವೈದ್ಯರಿಂದ ಮಾಡಿಸುವುದು, ಅದೇ ಸಿಬ್ಬಂದಿಗಳನ್ನು ಮುಂದುವರಿಸುವುದು. ಸಿಬ್ಬಂದಿಗಳಲ್ಲಿ ರೋಗ ಲಕ್ಷಣಗಳು ಕಂಡುಬದಲ್ಲಿ ಅವರನ್ನು ಕರ್ತವ್ಯಕ್ಕೆ ನಿಯೋಜಿಸತಕ್ಕದಲ್ಲ.

3) ಮಳಿಗೆಗಳಲ್ಲಿ ಎ.ಸಿ ಯನ್ನು ಕಡ್ಡಾಯವಾಗಿ ಬಳಸುವಂತಿಲ್ಲ.

4) ಮಾಸ್ಕ್, ಗ್ಲೌಸ್ ಮತ್ತು ಸ್ಯಾನಿಟೈಸರ್ ಗಳನ್ನು ಸಿಬ್ಬಂದಿಗಳು ಕಡ್ಡಾಯವಾಗಿ ಬಳಸತಕ್ಕದ್ದು ಮತ್ತು ಗ್ರಾಹಕರು ಮಾಸ್ಕ್ ಕಡ್ಡಾಯವಾಗಿ ಬಳಸತಕ್ಕದ್ದು.

Call us

5) ಪ್ರತಿ ದಿನ ವ್ಯವಹಾರ ಪ್ರಾರಂಭಿಸುವ ಮೊದಲು ಮತ್ತು ಮುಕ್ತಾಯದ ನಂತರ ಶಾಪ್ ಗಳನ್ನು ಸ್ಯಾನಿಟೈಸ್ ಮಾಡುವುದು.

6) ಮಳಿಗೆಯನ್ನು ಪ್ರವೇಶಿಸುವ ಮುನ್ನಾ ಗ್ರಾಹಕರು ಸ್ಯಾನಿಟೈಸರ್ ಬಳಸಿ ಒಳ ಪ್ರವೇಶಿಸುವುದಕ್ಕೆ ಮಳಿಗೆ ಮಾಲಿಕರು/ ವ್ಯವಸ್ಥಾಪಕರು ಏರ್ಪಾಡು ಮಾಡಿಕೊಳ್ಳುವುದು ಹಾಗೂ ಖಾತ್ರಿ ಪಡಿಸಿಕೊಳ್ಳುವುದು, ಅದೇ ರೀತಿ ಪ್ರತಿಯೊಂದು ಸಿಬ್ಬಂದಿ/ ಗ್ರಾಹಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಯೇ ಮಳಿಗೆಗಳನ್ನು ಪ್ರವೇಶಿಸಲು ಅವಕಾಶ ನೀಡುವುದು.

7) 60 ವರ್ಷ ಜಾಸ್ತಿ ಪ್ರಾಯದ ವ್ಯಕ್ತಿಗಳು ಹಾಗೂ 10 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳು ಮತ್ತು ಗರ್ಭಿಣಿಯರು ಮಳಿಗೆಗಳಿಗೆ ಬರುವುದನ್ನು ನಿಬಂಧಿಸಲಾಗಿದೆ.

8) ಸದರಿ ಮಳಿಗೆಗಳಿಗೆ ಆಗಮಿಸುವ ಶೀತ, ಕೆಮ್ಮು ಮತ್ತು ಜ್ವರದ ಲಕ್ಷಣ ಇರುವ ಗ್ರಾಹಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಇದನ್ನು ಮಳಿಗೆಗಳ ಮಾಲಿಕರು/ವ್ಯವಸ್ಥಾಪಕರು ಖಚಿತ ಪಡಿಸಿಕೊಳ್ಳುವುದು

9) ಸರದಿಯಲ್ಲಿರುವ ಇತರ ಗ್ರಾಹಕರಿಗೆ ಮಳಿಗೆಯ ಹೊರಗಡೆ ಸಾಮಾಜಿಕ ಅಂತರ ಕಾಪಾಡಿ ಕುಳಿತು ಕೊಳ್ಳಲು ವ್ಯವಸ್ಥೆ ಮಾಡುವುದು./ಕುಂದಾಪ್ರ ಡಾಟ್ ಕಾಂ ಸುದ್ದಿ/

Leave a Reply

Your email address will not be published. Required fields are marked *

four × three =