ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶದ ಮೀನುಗಾರರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ 20 ಸಾವಿರ ಕೋಟಿ ರೂ. ಅನುದಾನ ನೀಡಿರುವುದು ಐತಿಹಾಸಿಕ ನಿರ್ಧಾರವಾಗಿದೆ. ರಾಜ್ಯದ ಮೀನುಗಾರಿಕಾ ಸಚಿವನಾಗಿ ಅದನ್ನು ಯೋಜನಾಬದ್ಧವಾಗಿ ವಿನಿಯೋಗಿಸಿ ಮೀನುಗಾರಿಕೆಯನ್ನು ಶ್ರೇಷ್ಠ ಉದ್ಯಮವಾಗಿ ಪರಿವರ್ತಿಸಲು ಚಿಂತನೆ ನಡೆಸಲಾಗುವುದು ಎಂದು ಮೀನುಗಾರಿಕಾ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಸುದ್ದಿಗಾರರೊಂದಿಗೆ ಅವರು ಮಾತನಾಡಿ ಮೀನುಗಾರಿಕೆಗೆ ಮುಂದಿನ ಐದು-ಹತ್ತು ವರ್ಷಗಳಲ್ಲಿ ಮಾಡಬಹುದಾದ ಕಾರ್ಯದ ಬಗ್ಗೆ ತಜ್ಞರು, ಹಿರಿಯ ಮೀನುಗಾರರ ಸಭೆ ಕರೆದು ಯೋಜನೆ ರೂಪಿಸಲಾಗುವುದು ಎಂದರು. ದೇಶದ ಇತಿಹಾಸದಲ್ಲಿಯೇ ಯಾವುದೇ ಸರ್ಕಾರ ತನ್ನ ಜಿಡಿಪಿಯ ಶೇ. 10ರಷ್ಟನ್ನು ಅಭಿವೃದ್ಧಿಗಾಗಿ ಹಾಗೂ ಜನರ ಸಮಸ್ಯೆಗಳನ್ನು ಬಗೆಹರಿಸಲು ಅನುದಾನ ಒದಗಿಸಿರುವುದು ಇದೇ ಮೊದಲು. 20 ಲಕ್ಷ ಕೋಟಿ ಅನುದಾನದಲ್ಲಿ ದೇಶದ ಕೈಗಾರಿಕೆ, ಕೃಷಿ, ಬೆಳವಣೆಗೆಗೆ ಪೂರಕವಾಗಲಿದೆ ಎಚಿದರು.
ದೇವಳಗಳಲ್ಲಿ ನಿತ್ಯ ಪೂಜೆ ನಡೆಯುತ್ತಿದೆ:
ರಾಜ್ಯದಲ್ಲಿರುವ 34 ಸಾವಿರ ದೇವಾಲಯಗಳಲ್ಲಿಯೂ ಕೂಡಾ ನಿತ್ಯ ಪೂಜೆ ನಡೆಯುತ್ತಿದ್ದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯಿರುವುದರಿಂದ ಸದ್ಯ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿಲ್ಲ, ಈ ಬಗ್ಗೆ ಇಲಾಖೆ ಹಾಗೂ ಧಾರ್ಮಿಕ ಪರಿಷತ್ ಚಿಂತನೆ ನಡೆಸುತ್ತಿದ್ದು, ಶೀಘ್ರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು
ಗ್ರಾಮ ಸಮಿತಿಗೆ ಸರಕಾರದ ಒಲವು:
ಮುಂದಿನ ತಿಂಗಳು ಗ್ರಾಮ ಪಂಚಾಯತ್ ಸದಸ್ಯರ ಅಧಿಕಾರದವಧಿ ಪೂರ್ಣಗೊಳ್ಳಲಿದ್ದು, ಕೊರೊನಾ ಹಿನ್ನೆಲೆಯಲ್ಲಿ ಚುನಾವಣೆ ನಡೆಯುವುದು ವಿಳಂಬವಾಗುವ ಸಾಧ್ಯತೆಯಿರುವುದರಿಂದ ತಾತ್ಕಲಿಕವಾಗಿ ಅದೇ ಸದಸ್ಯರನ್ನು ಮುಂದುವರೆಸಬೇಕೆ?, ಆಡಳಿತಾಧಿಕಾರಿಯನ್ನು ನೇಮಿಸಬೇಕೆ, ಅಥವಾ ಸಮಿತಿಯನ್ನು ರಚಿಸಬೇಕೆ ಎನ್ನುವುದರ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಸಮಿತಿ ನೇಮಿಸುವ ಬಗ್ಗೆ ಸರಕಾರ ಒಲವು ತೋರಿದೆ. ಶೀಘ್ರ ಮುಖ್ಯಮಂತ್ರಿಗಳು ಹಾಗೂ ಪಂಚಾಯತ್ ರಾಜ್ ಸಚಿವರು ನಿರ್ಧರ ತೆಗೆದುಕೊಳ್ಳಲಿದ್ದಾರೆ ಎಂದರು.
ಇದನ್ನೂ ಓದಿ:
► ಸರ್ಕಾರಿ ಕ್ವಾರೈಂಟಿನ್ & ಶಿರೂರು ತಪಾಸಣಾ ಕೇಂದ್ರಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ – https://kundapraa.com/?p=37638 .