ಬೈಂದೂರಿನಲ್ಲಿ ಪೂನಾ – ಎರ್ನಾಕುಲಂ ಪೂರ್ಣಾ ಎಕ್ಸ್‌ಪ್ರೆಸ್‌ಗೆ ನಿಲುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪೂನಾ – ಎರ್ನಾಕುಲಂ – ಪುನಾ ಮಾರ್ಗದ ಪೂರ್ಣಾ ಎಕ್ಸ್‌ಪ್ರೆಸ್ ರೈಲಿಗೆ (11097 / 11098) ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣ ಬೈಂದೂರಿನಲ್ಲಿ ನಿಲುಗಡೆ ನೀಡಲಾಗಿದೆ. ಈ ರೈಲು ಪ್ರತಿ ಶನಿವಾರ ರಾತ್ರಿ 23:30ಕ್ಕೆ ಪೂನಾದಿಂದ ಹೊರಟು ಮರುದಿನ ರಾತ್ರಿ 8:45ಕ್ಕೆ ಬೈಂದೂರು ತಲುಪುತ್ತದೆ. ಮತ್ತು ಪ್ರತಿ ಸೋಮವಾರ ರಾತ್ರಿ 23:25ಕ್ಕೆ ಎರ್ನಾಕುಲಂನಿಂದ ಹೊರಟು ಬೆಳಿಗ್ಗೆ 9:20ಕ್ಕೆ ಬೈಂದೂರು ತಲುಪಲಿದೆ.

ಬೈಂದೂರಿನಲ್ಲಿ ರೈಲು ನಿಲುಗಡೆಗೆ ಕೋರಿ ಕೇಂದ್ರ ರೈಲ್ವೆ ಸಚಿವರು ಹಾಗೂ ರೈಲ್ವೆ ಬೋರ್ಡ್ ಮೇಲೆ ಒತ್ತಡ ತಂದ ಶಿವಮೊಗ್ಗ ಕ್ಷೇತ್ರದ ಲೋಕಸಭಾ ಸದಸ್ಯ ಬಿ. ವೈ. ರಾಘವೇಂದ್ರ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ರಾಷ್ಟ್ರೀಯ ರೈಲ್ವೆ ಪ್ರಯಾಣಿಕರ ಪರಾಮರ್ಷಕ ಸಮಿತಿ ಸದಸ್ಯ ಕೆ. ವೆಂಕಟೇಶ ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

one + fourteen =