ಕಾರ್ಟೂನು ಸ್ಪರ್ಧೆ: ಪಿಯು ನಂತರದ ವಿಭಾಗದಲ್ಲಿ ಪ್ರದೀಶ್‌ಗೆ ಪ್ರಥಮ ಸ್ಥಾನ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರದಲ್ಲಿ ನಡೆದ ಅವಿಭಜಿತ ದಕ್ಷಿಣಕನ್ನಡ ಜಿಲ್ಲಾ ಮಟ್ಟದ ಕಾರ್ಟೂನ್ ಹಬ್ಬದ ”ಕಾರ್ಟೂನ್ ಚಿತ್ರ” ಸ್ಪರ್ಧೆ ಪಿಯು ನಂತರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಬಿವಿಎ ವಿದ್ಯಾರ್ಥಿ ಪ್ರದೀಶ್ ಕೆ. ಪ್ರಥಮ ಸ್ಥಾನ ಪಡೆದಿದ್ದಾರೆ.

Call us

Call us

ಸ್ಪರ್ಧೆಯ ನಿಯಮದಂತೆ ಹೆತ್ತವರ ಪರಿಕಲ್ಪನೆ ಹಾಗೂ ವಿದ್ಯಾರ್ಥಿಗಳು ಕಾರ್ಟೂನ್‌ಗಳನ್ನು ಚಿತ್ರಿಸುವ ಹಿನ್ನಲೆಯಲ್ಲಿ, ಪ್ರದೀಶ್ ಸಂಗೀತ ಪರಿಕರಗಳ ಮೂಲಕ ಕೋಮು ಸೌಹಾರ್ದತೆ ಬಿಂಬಿಸುವ ಚಿತ್ರವನ್ನು ಬಿಡಿಸಿದರು. ಆ ಮೂಲಕ ಪ್ರಥಮ ಬಹುಮಾನವಾಗಿ ರೂ 10,000 ನಗದು ಹಾಗೂ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು. ಪ್ರದೀಶ್‌ ಪೇತ್ರಿಯ ಕೆ. ಶ್ಯಾಮ್‌ಪ್ರಸಾದ್ ಹಾಗೂ ಪ್ರಸನ್ನ ಪಿ. ಭಟ್ ಅವರ ಪುತ್ರ. ವಿದ್ಯಾರ್ಥಿಯ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ ಆಳ್ವ, ಪ್ರಾಚಾರ‍್ಯ ಕುರಿಯನ್ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

fifteen − one =