ಎ.15: ಉಪ್ಪುಂದದಲ್ಲಿ ‘ಪ್ರಗತಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್’ ಲೋಕಾರ್ಪಣೆ

Call us

Call us

ಸಕಲ ಸೌಲಭ್ಯಗಳ ನೂತನ ಸೌಹಾರ್ದದ ಉದ್ಘಾಟನೆಗೆ ವೀರಪ್ಪ ಮೊಯ್ಲಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮಾಜದಲ್ಲಿ ಆರ್ಥಿಕ ಸಂಕಷ್ಟ ಎದುರಿಸುವವರಿಗೆ ನೆರವಾಗುವ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸ್ಕಾಲರ್‌ಶಿಪ್ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸುವ ಹಾಗೂ ಸಮಾಜದ ಏಳಿಗೆಯಲ್ಲಿ ಸಹಭಾಗಿಗಳಾಗುವ ನಿಟ್ಟಿನಲ್ಲಿ ಸಹಕಾರಿ ತತ್ವದಡಿಯಲ್ಲಿ ನೂತನ ಸೌಹಾರ್ದ ಸಹಕಾರಿಯನ್ನು ಆರಂಭಿಸಲು ನಿರ್ಧರಿಸಿದ್ದು ‘ಪ್ರಗತಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿ’ ಇದರ ಉದ್ಘಾಟನಾ ಸಮಾರಂಭ ಎ.15ರ ಶುಕ್ರವಾರ ಬೆಳಿಗ್ಗೆ ನಡೆಯಲಿದೆ ಎಂದು ಸೌಹಾರ್ದದ ಉಪಾಧ್ಯಕ್ಷ ಸತೀಶ್ ಎಂ. ತಿಳಿಸಿದ್ದಾರೆ.

Call us

Call us

ಅವರು ಬೈಂದೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉಪ್ಪುಂದ ಶಾಲೆಬಾಗಿಲು ನವಮಿ ಕಾಂಪ್ಲೆಕ್ಸ್ ಮೊದಲ ಮಹಡಿಯಲ್ಲಿ ನೂತನ ಕಟ್ಟಡದಲ್ಲಿ ಸಕಲ ಸೌಲಭ್ಯದೊಂದಿಗೆ ಆರಂಭಗೊಳ್ಳಲಿರುವ ಪ್ರಗತಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ನಿ. ಉದ್ಘಾಟನೆಯನ್ನು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ನೆರವೇರಿಸಲಿದ್ದಾರೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಭದ್ರತಾ ಕೊಠಡಿ ಉದ್ಘಾಟನೆಗೊಳಿಸಲಿದ್ದು, ವಿಶ್ರಾಂತ ಕುಲಪತಿ ಪ್ರೊ. ಬಿ.ಎಸ್. ಶೇರಿಗಾರ್ ವೆಬ್‌ಸೈಟ್ ಲೋಕಾರ್ಪಣೆಗೊಳಿಸಿದಾರೆ. ಉಡುಪಿ ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಠೇವಣಿ ಪತ್ರ ಬಿಡುಗಡೆಗೊಳಿಸಿದರೇ, ರಾಜ್ಯ ಸಂಯುಕ್ತ ಸಹಕಾರಿ ಯುನಿಯನ್ ಅಧ್ಯಕ್ಷ ಶೇರುಪತ್ರವನ್ನು, ಚಿತ್ತಾರಿ ಕನ್‌ಸ್ಟ್ರಕ್ಷನ್‌ನ ಸುಖಾನಂದ ಶೆಟ್ಟಿ ಲಾಂಛನ ಬಿಡುಗಡೆಗೊಳಿಸಲಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ಗೌರಿ ದೇವಾಡಿಗ, ಸುರೇಶ್ ಬಟವಾಡಿ, ತಾಪಂ ಸದಸ್ಯ ರಾಜು ದೇವಾಡಿಗ, ಮಾಜಿ ಜಿಪಂ ಉಪಾಧ್ಯಕ್ಷೆ ಶಾರದಾ ಎಂ.ಡಿ, ರಾಜ್ಯ ದೇವಾಡಿಗ ಸುಧಾರಕ ಸಂಘದ ಅಧ್ಯಕ್ಷ ವಾಮನ್ ಮುರೋಳಿ, ಬಿ.ಜಿ ಮೋಹನ್‌ದಾಸ್, ಬಿ. ಹೊನ್ನ ದೇವಾಡಿಗ, ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ಚಂದ್ರಪ್ರತಿಮ ಎಂ.ಜೆ, ಜಿಲ್ಲಾ ಸೌಹಾರ್ದ ಸಹಕಾರಿ ಯೂನಿಯನ್ ಅಧ್ಯಕ್ಷ ಮಂಜುನಾಥ್ ಎಸ್. ಕೆ., ಚಂದ್ರಶೇಖರ್ ದೇವಾಡಿಗ ಅರೆಹಾಡಿ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ದೇವಾಡಿಗ ಸಂಘಟನೆಯ ಯುವ ಮುಂದಾಳು ಚರಣ ಬೈಂದೂರು ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

Leave a Reply

Your email address will not be published. Required fields are marked *

1 − 1 =