ಬೈಂದೂರಿನಲ್ಲಿ ‘ವಿವೇಕ ಪರ್ವ’ ಬೃಹತ್ ಸಾರ್ವಜನಿಕ ಸಮಾರಂಭಕ್ಕೆ ಸಕಲ ಸಿದ್ಧತೆ

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು: ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ೧೫೪ನೇ ಜನ್ಮದಿನಾಚರಣೆಯ ಅಂಗವಾಗಿ ಜನವರಿ ೨೮ರಂದು ಸಮರ್ಥ ಭಾರತ ಬೈಂದೂರು ವತಿಯಿಂದ ಆಯೋಜಿಸಲಾಗಿರುವ ‘ವಿವೇಕ ಪರ್ವ’ ಬೃಹತ್ ಸಾರ್ವಜನಿಕ ಸಮಾರಂಭಕ್ಕೆ ಸಕಲ ಸಿದ್ಧತೆಗಳು ಭರದಿಂದ ನಡೆದಿದೆ.

Click Here

Call us

Call us

ಕಾರ್ಯಕ್ರಮಕ್ಕಾಗಿ ಬೈಂದೂರು ಪೇಟೆಯೇ ಅಲಂಕೃತಗೊಂಡಿದ್ದು, ನಗರದ ತುಂಬೆಲ್ಲಾ ಭಗವಧ್ವಜ ಹಾಗೂ ವಿವೇಕಪರ್ವದ ಸಂದೇಶಗಳು ರಾರಾಜಿಸುತ್ತಿದೆ. ಬೈಂದೂರಿನ ಕೇಂದ್ರಭಾಗದಲ್ಲಿರುವ ಗಾಂಧಿ ಮೈದಾನದಲ್ಲಿ ಕಾರ್ಯಕ್ರಮ ಜರುಗಲಿದೆ. ಬೈಂದೂರಿನ ಏಳು ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಪ್ರತಿ ಮನೆ ಮನೆಗೂ ಆಮಂತ್ರಣ ತಲುಪಿದ್ದು, ಸಾವಿರ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವ ನಿರೀಕ್ಷೆ ಇದೆ.

Click here

Click Here

Call us

Visit Now

ಭವ್ಯ ಮೆರವಣಿಗೆ:
ಸಮಾರಂಭಕ್ಕೂ ಮುನ್ನ ಮಧ್ಯಾಹ್ನ 2:30ಕ್ಕೆ ಬೈಂದೂರು ಯಡ್ತರೆ ವೃತ್ತದಿಂದ ಗಾಂಧಿ ಮೈದಾನದ ವರೆಗೆ ಸ್ವಾಮಿ ವಿವೇಕಾನಂದರ ದಿವ್ಯಮೂರ್ತಿಯೊಂದಿಗೆ ಬೃಹತ್ ಮೆರವಣಿಗೆ ಜರುಗಲಿದೆ. ಮಾತೆಯರು ಪೂರ್ಣಕುಂಭದೊಂದಿಗೆ ಸಾಗಿದರೇ, ವಿವಿಧ ಭಾಗಗಳಿಂದ ಆಗಮಿಸುವ ೫೦ಕ್ಕೂ ಹೆಚ್ಚು ಭಜನಾ ತಂಡಗಳು ಹಾಗೂ ಕಲಾತಂಡಗಳು ಮೆರವಣಿಗೆಗೆ ಮೆರಗು ತುಂಬಲಿವೆ. ವಿವಿಧ ಭಾಗಗಳಿಂದ ಆಗಮಿಸುವ ಸಾರ್ವಜನಿಕರು ಹಾಗೂ ಪ್ರಮುಖರು ಮೆರವಣಿಗೆಯಲ್ಲಿ ಸಾಗಿ ಬರಲಿದೆ.

ಬೃಹತ್ ಸಮಾರಂಭ:
ಬೈಂದೂರಿನ ಗಾಂಧಿ ಮೈದಾನದಲ್ಲಿ  ಮೆರವಣಿಗೆಯ ಬಳಿಕ ನಡೆಯಲಿರುವ ಬೃಹತ್ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ದಕ್ಷಿಣದ ಪ್ರಾಂತ ಸಹಸಂಘಚಾಲಕ ಡಾ. ವಾಮನ ಶೆಣೈ ಉಪಸ್ಥಿತರಿರಲಿದ್ದು, ಚಿತ್ರನಟ ಉಪೇಂದ್ರ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಪ್ರಧಾನ ಭಾಷಣ ಮಾಡಲಿದ್ದಾರೆ. ವೇದಿಕೆಯಲ್ಲಿ ಎಲ್ಲಾ ಸಮಾಜದ ಪ್ರಮುಖರು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ೧೫ಸಾವಿರ ಮಂದಿ ಸೇರುವ ನಿರೀಕ್ಷೆ ಇದ್ದು, ಆಸನ ವ್ಯವಸ್ಥೆ ಮಾಡಲಾಗಿದೆ.

ಸಮರ್ಥ ಭಾರತ:
ರಾಷ್ಟ್ರೀಯ ಹಾಗೂ ಸೇವಾ ಮನೋಭಾವದ ಸಂಸ್ಥೆಯಾದ ಸಮರ್ಥ ಭಾರತ 60 ಕ್ಕೂ ಹೆಚ್ಚು ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಸ್ವಾಮಿ ವಿವೇನಂದರ ಜನ್ಮದಿನರಣೆಯಂದು ‘ಉತ್ತಮನಾಗು ಉಪಕಾರಿಯಾಗಿ’ ಎಂಬ ವಿವೇಕ ಬ್ಯಾಂಡ್ ಅಭಿಯಾನ ಹಮ್ಮಿಕೊಳ್ಳುತ್ತಿದೆ. ದೇಶದ ಏಳಿಗೆಗಾಗಿ ಯುವಕರನ್ನು ಹೆಚ್ಚೆಚ್ಚು ತೊಡಗಿಸಿಕೊಳ್ಳುವಂತೆ ಮಾಡುವ ಸಮರ್ಥ ಭಾರತದ್ದು. ಈ ಭಾರಿ ಸಮರ್ಥ ಭಾರತ ಬೈಂದೂರು ಘಟಕದ ವತಿಯಿಂದ ವಿವೇಕಾನಂದರು ಪ್ರಪಂಚಕ್ಕೆ ಕೊಟ್ಟುಹೊದ ಆದರ್ಶಗಳನ್ನು ನೆನೆಯುವ ದೃಷ್ಠಿಯಿಂದ ವಿವೇಕ ಪರ್ವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Call us

ಸ್ವಾಮಿ ವಿವೇಕಾನಂದರು ದೇಶ ಪರ್ಯಟನೆಯಲ್ಲಿದ್ದಾಗ ಬೈಂದೂರಿನಲ್ಲಿ ವಿರಮಿಸಿ ಮುಂದೆ ಸಾಗಿದ್ದರು ಎಂದು ನಮ್ಮೂರಿನ ಹಿರಿಯರೋರ್ವರು ಹೇಳಿದ್ದನ್ನು ಕೇಳಿದ್ದೆ. ಅವರು ನಡೆದಾಡಿದ ನೆಲದಲ್ಲಿ ಅವರ ಚಿಂತನೆಯನ್ನು ಮೆಲುಕು ಹಾಕಿ, ಯುವ ಜನಾಂಗದಲ್ಲೊಂದು ಸ್ಥೂರ್ತಿ ತುಂಬಬೇಕು, ಚಿಂತನೆಗಳು ಮನನ ಆಗಬೇಕು ಎಂಬುದು ನಮ್ಮ ಮನದಾಳದ ಆಸೆಯೂ ಆಗಿತ್ತು. ಅದಕ್ಕೆ ಸರಿಯಾಗಿ ಸಮಾನ ಮನಸ್ಕರೊಡಗೂಡಿ ಸಮರ್ಥ ಭಾರತ ಬೈಂದೂರು ಸಂಸ್ಥೆಯ ಮೂಲಕ ವಿವೇಕ ಪರ್ವ ಕಾರ್ಯಕ್ರಮನ್ನು ಆಯೋಜಿಸಿದ್ದೇವೆ. -ಜಯಾನಂದ ಹೋಬಳಿದಾರ್ ಕಾರ್ಯಾಧ್ಯಕ್ಷರು, ಸಮರ್ಥ ಭಾರತ ಬೈಂದೂರು

Leave a Reply

Your email address will not be published. Required fields are marked *

2 + ten =