ಪ್ರೇರಣಾ ಯುವ ವೇದಿಕೆ ನೈಕಂಬ್ಳಿ : ಆರನೇ ವಾರ್ಷಿಕೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆಡಂಬರವಿಲ್ಲದೇ, ಸರಳವಾಗಿ ಸಾಮಾಜದೊಂದಿಗೆ ತೊಡಗಿಸಿಕೊಳ್ಳುತ್ತ ಗ್ರಾಮೀಣ ಭಾಗದ ಧ್ವನಿಯಾಗುವಲ್ಲಿ ಪ್ರೇರಣಾ ವೇದಿಕೆ ಕಾರ್ಯ ಶ್ಲಾಘನೀಯ ಎಂದು ತಾಲೂಕು ಪಂಚಾಯತ್ ಸದಸ್ಯ ಉದಯ ಜಿ ಪೂಜಾರಿಯವರು ಹೇಳಿದರು. ಅವರು ಪ್ರೇರಣಾ ಯುವ ವೇದಿಕೆಯ ಆರನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ಉದ್ಘಾಟಕರಾಗಿ ಉಪಸ್ಥಿತರಿದ್ದ ಆಜ್ರಿ ಚೋನಮನೆ ಅಶೋಕ್ ಶೆಟ್ಟಿ, ಧಾರ್ಮಿಕ ವೈಜ್ಞಾನಿಕತೆಯ ಜೊತೆಗೆ ವೇದಿಕೆಯ ಉದ್ಧೇಶಗಳನ್ನು ಸಮಿಕರಿಸಿ ಶುಭ ಹಾರೈಸಿದರು. ರಾಜ್ಯಮಟ್ಟದ ಕ್ರೀಡಾ ಪ್ರತಿನಿಧಿಗಳಾದ ಪ್ರತಿಭಾ ಚೇತನ ಸ್ವಾತಿ, ಸಿಂಚನ, ರಾಜೇಶ ಇವರಿಗೆ ಪ್ರೇರಣಾ ಸಾಧಕ ಮಾಣಿಕ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು .

ವಾರ್ಷಿಕೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಅಗಲಿದ ಮಿತ್ರ ಸುರೇಶ ಸವಿನೆನಪಿನಲ್ಲಿ ವಂಡ್ಸೆ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಡಶಾಲಾ ಮಕ್ಕಳಿಗೆ ಆಯೋಜಿಸಿದ್ದ ಕೆಸರು ಗದ್ದೆ ಕ್ರೀಡೋತ್ಸವದಲ್ಲಿ ಹತ್ತಕ್ಕೂ ಹೆಚ್ಚು ಶಾಲೆಗಳು ಭಾಗವಹಿಸಿದ್ದವು. ಪ್ರಾಥಮಿಕ ವಿಭಾಗದಲ್ಲಿ ಆಲೂರು ಶಾಲೆ ಸತತ ಮೂರನೇ ವರ್ಷ ಪ್ರಥಮ ಪ್ರಶಸ್ತಿ, ಚಿತ್ತೂರು ಶಾಲೆ ದ್ವಿತೀಯ . ಪ್ರೌಡಶಾಲಾ ವಿಭಾಗದಲ್ಲಿ ಚಿತ್ತೂರು ಹೈಸ್ಕೂಲ್ ಪ್ರಥಮ, ಆಲೂರು ಹೈಸ್ಕೂಲ್ ದ್ವಿತಿಯ ಪ್ರಶಸ್ತಿ ಬಾಚಿಕೊಂಡವು, ಅದರ ಸಮಗ್ರ ಪ್ರಶಸ್ತಿ ಫಲಕವನ್ನು ನೀಡಲಾಯಿತು.

ವೇದಿಕೆ ಅಧ್ಯಕ್ಷರಾದ ಉದಯ ಆಚಾರ್ಯ ಪ್ರೇರಣಾ ಸಾಗಿಬಂದ ಸಾಧನೆಯ ಹಾದಿಯನ್ನು ಪ್ರಾಸ್ತಾವಿಕವಾಗಿ ತಿಳಿಸಿದರು. ವೇದಿಕೆಯಲ್ಲಿ ಹಿರಿಯರಾದ ಮಹಾಬಲ ಶೆಟ್ಟಿ ದೇವಲ್ಕುಂದ, ಅಂಗನವಾಡಿ ಕಾರ್ಯಕರ್ತೆಯಾದ ನಾಗರತ್ನ ಮೊದಲಾದವರು ಇದ್ದರು.

ವಾರ್ಷಿಕೋತ್ಸವ ದಿನ ಗ್ರಾಮ ಪಂಚಾಯತ್ ಚಿತ್ತೂರು, ಸಂತ ಅಲೋಷಿಯಸ್ ಕಾಲೇಜು ಮಂಗಳೂರು ಸಹಯೋಗದೊಂದಿಗೆ ಬೆಳಿಗ್ಗೆ ವರ್ಷಂಪ್ರತಿಯಂತೆ ಮಾರಣಕಟ್ಟೆಯಿಂದ ಚಿತ್ತೂರಿನ ತನಕ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಪತ್ರಕರ್ತರಾದ ವಸಂತ್ ಗಿಳಿಯಾರ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ ಮಡಿವಾಳ, ಉದ್ಯಮಿಗಳಾದ ರಾಜೀವ ಶೆಟ್ಟಿ ಬೆಟ್ಟಿನಮನೆ, ಗೋಪಾಲ್ ಶೆಟ್ಟಿ ಮುಲ್ಲಿಮನೆ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಊರ ಪ್ರತಿಭಾವಂತರ ಸಾಂಸ್ಕ್ರತಿಕ ಕಲರವ ಹಾಗೂ ಪ್ರೇರಣಾ ಸದಸ್ಯರಿಂದ “ಗದಾಯುದ್ದ” ಯಕ್ಷಗಾನ ನಡೆಯಿತು. ವೇದಿಕೆಯ ಸಂಸ್ಥಾಪಕ ಸದಸ್ಯ ನಾಗರಾಜ್ ಶೆಟ್ಟಿ ನೈಕಂಬ್ಳಿ ಸ್ವಾಗತಿಸಿ, ನಾಗೇಂದ್ರ ಆಚಾರ್ಯ ಧನ್ಯವಾದ ತಿಳಿಸಿ, ದಿನೇಶ ಶೆಟ್ಟಿ ದೊಡ್ಡಜೆಡ್ಡು ನಿರೂಪಿಸಿದರು.

 

Leave a Reply

Your email address will not be published. Required fields are marked *

1 × two =