ಜ 19-20: ಪ್ರೇರಣಾ ಯುವ ವೇದಿಕೆ ನೈಕಂಬ್ಳಿಯ ಪ್ರೇರಣಾ ಪ್ರಣಮ್ಯ 2017

Click Here

Call us

Call us

ಕುಂದಾಪ್ರ ಡಾಟ್ ಕಾಂ ಲೇಖನ
ಕುಂದಾಪುರ: ಮೂರು ವರ್ಷಗಳ ಹಿಂದೆ ಸಮಾನ ಮನಸ್ಕರೆಲ್ಲರು ಸೇರಿ ಸಾಮಾಜಿಕ ಕಳಕಳಿಯೊಂದಿಗೆ ಹುಟ್ಟುಹಾಕಿದ ಸಂಸ್ಥೆ ಪ್ರೇರಣಾ ಯುವ ವೇದಿಕೆ ನೈಕಂಬ್ಳಿ ಚಿತ್ತೂರು. ಗ್ರಾಮೀಣ ಪ್ರದೇಶದ ಜನರ ಅಗತ್ಯಗಳಿಗೆ ಅನುಗುಣವಾಗಿ ಯಶಸ್ವಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಸುತ್ತಲಿನ ಪರಿಸರದಲ್ಲಿ ಜನಮನ್ನಣೆ ಗಳಿಸಿದ ನಮ್ಮ ಹೆಮ್ಮೆ ಸಂಸ್ಥೆಯದ್ದು.

Click Here

Call us

Call us

Visit Now

ಸಂಸ್ಥೆಯ ಕಾರ್ಯಕ್ರಮಗಳು:

Click here

Click Here

Call us

Call us

 • ಸಾವಯವ ಕೃಷಿಯ ಕುರಿತು ಸಮಗ್ರ ಮಾಹಿತಿ ತೆಂಗು ಮತ್ತು ಅಡಿಕೆ ಬೆಳೆಗಳಿಗೆ ಮಾರಕವಾದ ಕೆಂಪುಮೂತಿಯ ಹುಳಗಳಿಗೆ ಉಚಿತ ಮೋಹಕ ಬಲೆ ವಿತರಣೆ, ಕಿಸಾನ್ ಕಾರ್ಡ್ ನೋಂದಣಿ.
 • ಆಧಾರ್ ಕಾರ್ಡ್ ನೋಂದಣಿ ಮತ್ತು ವಿತರಣೆ.
 • ಉಚಿತ ಹೃದಯ ಸಂಬಂಧಿತ ತಪಾಸಣೆ ಮತ್ತು ಉಚಿತ ವೈದ್ಯಕೀಯ ನೆರವು
 • ಔದ್ಯೋಗಿಕ ಪ್ರಪಂಚದಲ್ಲಿ ಇಂಗ್ಲಿಷ್ ಅಗತ್ಯತೆ ಅರಿತು ಹತ್ತಿರದ ನೈಕಂಬ್ಳಿ ಸರ್ಕಾರಿ ಶಾಲೆಗೆ ಇಂಗ್ಲಿಷ್ ಟೀಚರ್ ನಿಯೋಜಿಸಿ ವೇದಿಕೆ ವತಿಯಿಂದ ಸಂಬಳ ನೀಡುತ್ತಿದ್ದೇವೆ. ಮತ್ತು ಕಂಪೌಂಡ್ ಗೇಟ್, ಶಾಲಾ ಮಕ್ಕಳಿಗೆ ಉಚಿತ ನೋಟ್, ನೀರಿನ ಫಿಲ್ಟರ್, ಐಡಿ ಕಾರ್ಡ್ ವಿತರಣೆ.
 • ಕೃಷಿ ಆರೋಗ್ಯ ಸಮಸ್ಯೆಯಿಂದ ನೊಂದಿರುವ ಶಾರದಾ ಪೂಜಾರ್ತಿಯವರಿಗೆ ಆರ್ಥಿಕ ನೆರವು.
 • ಸ್ವಚ್ಛ ಪರಿಸರ, ಸ್ವಚ್ಛ ಜಾತ್ರೆ, ಕಸ ಮುಕ್ತ ಮಾರಣಕಟ್ಟೆ ಜಾತ್ರೆಯ ಆಶಯದೊಂದಿಗೆ ನಿರಂತರ ಮೂರು ವರ್ಷಗಳಿಂದ ಮೂವತ್ತಕ್ಕೂ ಹೆಚ್ಚು ಜಾಗ್ರತಿ ಬರಹದ ಬ್ಯಾನರ್ ಅಳವಡಿಕೆ, ಐವತ್ತಕ್ಕೂ ಹೆಚ್ಚು ಕಸದ ಬುಟ್ಟಿ ಇರಿಸಿ ಮರುದಿನ ಸ್ವಚ್ಛತಾ ಅಭಿಯಾನ ಮಾಡುತ್ತಿದ್ದೆವೆ.
 • ಕೃಷಿ ಜೀರ್ಣೋದ್ಧಾರದ ನಿರೀಕ್ಷೆಯಲ್ಲಿರುವ ನೈಕಂಬ್ಳಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಪ್ರಥಮ ಬಾರಿಗೆ ಕಾರ್ತಿಕ ದೀಪೋತ್ಸವ ಪ್ರಾರಂಭ, ಶಿವರಾತ್ರಿಯಂದು ಭಜನೆ ಪ್ರಾರಂಭಿಸಲಾಯಿತು.
 • ಇನ್ನು ಹತ್ತು ಹಲವು ಕಾರ್ಯಕ್ರಮ ಆಯೋಜಿಸಿ ಜನರಲ್ಲಿ ಸಾಮರಸ್ಯ ಮೂಡಿಸುವಲ್ಲಿ ನಿರತವಾಗಿದೆ.

ನಾಲ್ಕನೆಯ ವರ್ಷದ ಸಂಭ್ರಮ – ಪ್ರೇರಣಾ ಪ್ರಣಮ್ಯ 2017ರ ಕಾರ್ಯಕ್ರಮಗಳು

 • ಜನವರಿ 19 ಸಾರ್ವಜನಿಕರಿಗೆ ಮತ್ತು ವಂಡ್ಸೆ ಹೋಬಳಿ ಮಟ್ಟದ ಅಂತರ ಶಾಲಾ ಕೆಸರುಗದ್ದೆ ಕ್ರೀಡೋತ್ಸವ
 • ಜನವರಿ 20 ಬೆಳಿಗ್ಗೆ ಉಚಿತ ನೇತ್ರ ಪರೀಕ್ಷೆ, ಉಚಿತ ನೇತ್ರ ಶಸ್ತ್ರಚಿಕಿತ್ಸೆ , ಉಚಿತ ಲೆನ್ಸ್ ಅಳವಡಿಕೆ, ಉಚಿತ ಕನ್ನಡಕ ವಿತರಣೆ, ನೇತ್ರ ಶಿಬಿರ
 • ಪ್ರೇರಣಾ ಗುರು ಸಮ್ಮಾನ – ಸುಮತಿ ಟೀಚರ್ ಇಪ್ಪತ್ತು ವರ್ಷಗಳ ಹಿಂದೆ ನೈಕಂಬ್ಳಿ ಶಾಲೆಯಲ್ಲಿ ಸೇವೆಸಲ್ಲಿಸಿದ ಪ್ರಥಮ ಶಿಕ್ಷಕಿ.
 • ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪಧಕ ಪಡೆದ ಗುರುರಾಜ್ ಪೂಜಾರಿ ಚಿತ್ತೂರು ಅವರಿಗೆ ಪ್ರೇರಣಾ ಪ್ರತಿಭಾ ಸಮ್ಮಾನ
 • ರಂಗಸ್ಥಳ ರಾಜ ಖ್ಯಾತಿಯ ಐರಬೈಲ್ ಆನಂದ ಶೆಟ್ಟಿಯವರಿಗೆ ಪ್ರೇರಣಾ ಕಲಾ ಸಮ್ಮಾನ
 • ಪ್ರೇರಣಾ ಹಿರಿಯ ನಾಗರಿಕ ಸಮ್ಮಾನ – -ಹಿರಿಯ ಪ್ರಗತಿಪರ ಕೃಷಿಕರಾದ ಶೇಖರ ಶೆಟ್ಟಿ ಕೊಳೂರು ಮತ್ತು ಬಡಿಯಣ್ಣ ಶೆಟ್ಟಿ ಕೆಳಾಮನೆ
 • ಪ್ರೇರಣಾ ಸದಸ್ಯರು ಮತ್ತು ಊರಿನವರಿಂದ ಯಕ್ಷಗಾನ – ರಾಮಾಶ್ವಮೇಧ
 • ಪ್ರೇರಣಾ ಪ್ರೋತ್ಸಾಹಕ ಬಂಧುಗಳ ಉಪಸ್ಥಿತಿಯಲ್ಲಿ ಜನವರಿ ೨೦ಸಂಜೆ ೦೭ರಿಂದ ಸಭಾ ಕಾರ್ಯಕ್ರಮ

Leave a Reply

Your email address will not be published. Required fields are marked *

17 + 3 =