ಕಲ್ಲಡ್ಕ ಅವರನ್ನು ಬಂಧಿಸುವ ಬದಲು ಕಾಂಗ್ರೆಸ್ ಪಕ್ಷದ ಗೂಂಡಾಗಳ ಬಂಧಿಸಲಿ: ರೈ ವಿರುದ್ದ ಪ್ರತಿಭಟನೆಯಲ್ಲಿ ಆಗ್ರಹ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅಲ್ಪಸಂಖ್ಯಾತರನ್ನು ಓಲೈಸುವ ಕಾರಣಕ್ಕೆ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸುವಂತೆ ಹೇಳಿರುವ ಸಚಿವ ರಮಾನಾಥ ರೈ ತುಷ್ಠೀಕರಣದ ರಾಜಕಾರಣ ಮಾಡಿದ್ದಾರೆ. ಹಿಂದೂಗಳು ಬಹಳ ಗೌರವದಿಂದ ಕಾಣುವ ಪ್ರಭಾಕರ ಭಟ್ ಅವರ ಹೆಸರನ್ನು ಗಲಭೆಯೊಂದಿಗೆ ತಳುಕು ಹಾಕಿ ಬಂಧಿಸುವಂತೆ ಒತ್ತಡ ಹೇರಿ ಅಧಿಕಾರ ದುರುಪಯೋಗ ಪಡೆಸಿಕೊಂಡಿದ್ದಾರೆ. ಇಂತವರು ಆಡಳಿತ ಯಂತ್ರದಲ್ಲಿ ಇರುವುದು ಸರಿಯಲ್ಲ. ತಕ್ಷಣವೇ ರಾಜಿನಾಮೆ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಕೆ. ಬಾಬು ಶೆಟ್ಟಿ ಆಗ್ರಹಿಸಿದರು.

Call us

Call us

Visit Now

ಬೈಂದೂರು ಪೇಟೆಯಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿದ ಸಚಿವ ರಮಾನಾಥ ರೈ ವಿರುದ್ಧ ನಡೆದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

Click here

Click Here

Call us

Call us

ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಮಾತನಾಡಿ ಪ್ರಭಾಕರ ಭಟ್ ಅವರ ಮೇಲೆ ಕೇಸ್ ಹಾಕಬೇಕು ಎಂಬ ರಮಾನಾಥ ರೈ ಅವರು ಕಲ್ಲಡ್ಕದ ಪೇಟೆಯಲ್ಲಿ ಗಲಭೆ ಎಬ್ಬಿಸಿ ಓಡಿಹೋದವರು. ದಕ್ಷಿಣ ಕನ್ನಡದಲ್ಲಿ ಇರುವ ಕಾಂಗ್ರೆಸ್ ಸಚಿವ ಮಂತ್ರಿಗಳು ಗೂಂಡಾ ಹಿನ್ನೆಲೆಯವರು. ಮೊದಲು ಅವರ ಮೇಲೆ ಕೇಸ್ ಹಾಕಿ ಬಂಧಿಸಲಿ. ನಾಲ್ಕು ಗೋಡೆಗಳ ಮಧ್ಯೆ ನಿಂತು ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಗೂಂಡಾ ಪ್ರವೃತ್ತಿ ನಿಲ್ಲಿಸಿ ಪ್ರಭಾಕರ ಭಟ್ ಅವರನ್ನು ನಿಂದಿಸಿರುವ ಬಗ್ಗೆ ಕ್ಷಮೆಯಾಚಿಸಲಿ ಎಂದವರು ಆಗ್ರಹಿಸಿದರು.

Click Here

ಉಪ್ಪುಂದ ಟೆಂಪೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ ಮಾತನಾಡಿ ಬಹುಸಂಖ್ಯಾತರನ್ನು ವಿರೋಧಿಸಿ ಅಲ್ಪಸಂಖ್ಯಾತರನ್ನು ತುಷ್ಠಿಕರಣ ಮಾಡಿದರೆ ಓಟ್ ಬ್ಯಾಂಕ್ ತಮ್ಮ ಪರವಾಗುತ್ತದೆ ಎಂಬ ಭಾವನೆ ಕಾಂಗ್ರೆಸ್ ನಾಯಕರಲ್ಲಿದೆ. ಹಾಗಾಗಿ ಆಗಿಂದಾಗಿ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ಬರುವಂತಹ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿದ್ದಾರೆ. ರಮಾನಾಥ ರೈಗಳು ಪ್ರಭಾಕರ ಭಟ್ ಅವರನ್ನು ಕೇಸ್ ಹಾಕಿ ಓಡಿಸುವ ಮೊದಲು ತಮಗೆ ಓಡುವ ಸಾಮಥ್ಯವಿದೆಯೇ ಎಂಬುದನ್ನು ನೋಡಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.

ವಿಶ್ವ ಹಿಂದೂ ಪರಿಷತ್ – ಬಜರಂಗದಳ ಬೈಂದೂರು ಪ್ರಖಂಡದ ಅಧ್ಯಕ್ಷ ಶ್ರೀಧರ ಬಿಜೂರು ಮಾತನಾಡಿ ಕಾಂಗ್ರೆಸ್ ಪಕ್ಷದವರು ಸೈನಿಕ ಮುಖ್ಯಸ್ಥರನ್ನು ಗೂಂಡಾ ಎಂದು ಕರೆಯುತ್ತಿರಿ. ಪಕ್ಷಕ್ಕೆ ರಾಷ್ಟ್ರೀಯತೆ, ಹಿಂದುಗಳ ಮೇಲೆ ಗೌರವೂ ಇಲ್ಲ. ಹಿಂದೂಗಳು ದೇವರು ಎಂದು ಪೂಜಿಸುವ ಗೋವು ಹತ್ಯೆಗೆ ಬೆಂಬಲಿಸುತ್ತೀರಿ. ಹಿಂದೂಗಳನ್ನು ಕೆರಳಿಸಿ ತನ್ನ ಕಾರ್ಯಸಾಧಿಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ನೈತಿಕ ದಿವಾಳಿತನದತ್ತ ನಡೆದಿದೆ. ಮತಬ್ಯಾಂಕ್ ಭದ್ರಪಡಿಸಲು ಕೋಮು ಬಣ್ಣ ಹಚ್ಚಿ ಓಟ್ ಬ್ಯಾಂಕ್ ಆಗಿ ಪರಿವರ್ತಿಸಿಕೊಳ್ಳವ ತಂತ್ರ ನಡೆಯದು. ರಾಷ್ಟ್ರದ ಕೆಲವೆಡೆಯಷ್ಟೇ ತನ್ನ ಅಸ್ತಿತ್ವ ಉಳಿಸಿಕೊಂಡಿರುವ ಪಕ್ಷ ಇಂತಹ ಪ್ರವೃತ್ತಿ ಮುಂದುವರಿಸಿದರು ಹೇಳ ಹೆಸರಿಲ್ಲದಂತಾಗುತ್ತದೆ ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ಎಂ ಸುಕುಮಾರ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟ್ವಾಡಿ, ಶಂಕರ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಪುಪ್ಪರಾಜ್ ಶೆಟ್ಟಿ, ಸದಸ್ಯೆ ಮಾಲಿನಿ ಕೆ, ಬೈಂದೂರು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ, ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರಿಯದರ್ಶಿನಿ ಬೆಸ್ಕೂರು, ರೈತಮೊರ್ಚಾದ ದೀಪಕ್‌ಕುಮಾರ್ ಶೆಟ್ಟಿ, ಸಂಘಟನೆಯ ಪ್ರಮುಖರಾದ ಜಯಾನಂದ ಹೋಬಳಿದಾರ್, ಸದಾಶಿವ ಡಿ. ಪಡುವರಿ, ಜಗದೀಶ್ ಉಪ್ಪುಂದ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.

Read this: ಕಲ್ಲಡ್ಕ ಅವರ ಬಂಧನವಲ್ಲ, ಕೂದಲನ್ನೂ ಮುಟ್ಟಲಾಗದು: ಸುಬ್ರಹ್ಮಣ್ಯ ಹೊಳ್ಳ  – http://kundapraa.com/?p=23576 

One thought on “ಕಲ್ಲಡ್ಕ ಅವರನ್ನು ಬಂಧಿಸುವ ಬದಲು ಕಾಂಗ್ರೆಸ್ ಪಕ್ಷದ ಗೂಂಡಾಗಳ ಬಂಧಿಸಲಿ: ರೈ ವಿರುದ್ದ ಪ್ರತಿಭಟನೆಯಲ್ಲಿ ಆಗ್ರಹ

Leave a Reply

Your email address will not be published. Required fields are marked *

1 × three =