ಕುಂದಾಪುರದಲ್ಲಿ ಸಿಎಎ, ಎನ್‌ಆರ್‌ಸಿ ವಿರೋಧಿಸಿ ಬೃಹತ್ ಪ್ರತಿಭಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶದ ಯುವಜನತೆ ಉದ್ಯೋಗ ಕೇಳುತ್ತಿದ್ದಾರೆ, ಚಾಲಕರು ಪೆಟ್ರೋಲ್, ಡೀಸೆಲ್ ದರ ಹೆಚ್ಚಿರುವ ಬಗ್ಗೆ ಪ್ರಶ್ನಿಸುತ್ತಿದ್ದಾರೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಕೆಲಸದ ಭದ್ರತೆ ನೀಡಿ ಎನ್ನುತ್ತಿದ್ದಾರೆ. ಜನಸಾಮಾನ್ಯರು ದಿನನಿತ್ಯದ ವಸ್ತುಗಳು, ಇನ್ಸೂರೆನ್ಸ್ ಪ್ರೀಮಿಯಂ ದರ, ಟ್ಯಾಕ್ಸ್ ದುಪ್ಪಟ್ಟು ಮಾಡಿದ್ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಆದರೆ ದೇಶದಲ್ಲಿ ಎನ್‌ಆರ್‌ಸಿ, ಸಿಎಬಿ ಜಾರಿಯಾಗಬೇಕೆಂದು ಎಲ್ಲಾದರೂ ಪ್ರತಿಭಟನೆ ನಡೆದಿತ್ತೆ ಯಾರಿಂದಲೂ ಬೇಡಿಕೆ ಇತ್ತೆ ಎಂದು ಹೋರಾಟಗಾರ, ವಾಗ್ಮಿ ಸುಧೀರ್ ಕುಮಾರ್ ಮುರೋಳಿ ಪ್ರಶ್ನಿಸಿದರು.

Call us

Call us

Visit Now

Click here

Call us

Call us

ಅವರು ಸೋಮವಾರ ಸಂಜೆ ಕುಂದಾಪುರದ ಶಾಸ್ತ್ರಿಸರ್ಕಲ್ ಸಮೀಪ ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರೋಧಿಸಿ ಆಯೋಜಿಸಲಾದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.

ಜನರ ಬದುಕು ಕಟ್ಟಿಕೊಡುವ ಬದಲು ಉದ್ದೇಶಪೂರ್ವಕವಾಗಿ ಈ ಕಾಯಿದೆಗಳನ್ನು ಜಾರಿಗೆ ತರುವುದರ ಹಿಂದೆ ಕೇಂದ್ರ ಸರಕಾರದ ವೈಫಲ್ಯಗಳನ್ನು ಮರೆಮಾಚುವ ತಂತ್ರ ಅಡಗಿದೆ. ಬ್ರೀಟಿಷರ ಪಳೆಯುಳಿಕೆಯಂತೆ ಅವರು ಬಿಟ್ಟು ಹೋದ ಹಿಂದೂ-ಮುಸ್ಲಿಂಮರನ್ನು ಒಡೆದು ಆಳುವ ತಂತ್ರವನ್ನು ಬಿಜೆಪಿಯವರು ಅಳವಡಿಸಿಕೊಂಡು ದೇಶ ಒಡೆಯುತ್ತಿದ್ದಾರೆ ಎಂದ ಅವರು, ಪಂಚರ್ ಹಾಕುವವರು, ಬೀಡಿ ಕಟ್ಟುವವರು, ಮೀನು ಹಿಡಿಯುವವರು, ಗದ್ದೆ ನಾಟಿ ಮಾಡುವವರ ಎದೆಯಲ್ಲಿ ಅಕ್ಷರ ಇದ್ದಿರಲಿಲ್ಲ ಆದರೆ ಅವರೆಲ್ಲರೂ ದೇಶಕ್ಕೆ ಅನ್ನ ನೀಡಿದ್ದಾರೆ ಎಂದರು.

ಅಂಕಣಕಾರ ಶಿವಸುಂದರ್ ಪ್ರಧಾನ ಭಾಷಣ ಮಾಡಿ, ಈ ದೇಶದಲ್ಲಿ ಇರುವ ಕೆಲವೇ ಕೆಲವು ಆಕ್ರಮ ವಲಸೆಗಾರರನ್ನು ಪತ್ತೆ ಹಚ್ಚಲು ದೇಶದ ಪ್ರತಿಯೊಬ್ಬರು ಸರದಿ ಸಾಲಿನಲ್ಲಿ ನಿಲ್ಲುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನೋಟ್ ನಿಷೇಧ ಮಾಡುವ ಮೂಲಕ ದೇಶದ ಆರ್ಥಿಕ ಸ್ಥಿತಿಯನ್ನೆ ಹಾಳು ಮಾಡಲಾಗಿದೆ. ಪೂರ್ವ ಯೋಚನೆ ಇಲ್ಲದ ಈ ತೀರ್ಮಾನದಿಂದಾಗಿ ಜಿಡಿಪಿ ಕುಸಿತ ಹಾಗೂ ಆರ್ಥಿಕತೆಯ ಅಧೋಗತಿಯಾಗಿದೆ. ದೇಶವನ್ನು ತುಂಡು ತುಂಡಾಗಿ ವಿಭಜಿಸಲು ಕಾರಣವಾಗುವ ಪೌರತ್ವ ಕಾಯಿದೆ ಜಾರಿಯಿಂದಾಗಿ ದೇಶದ ಸೌಹಾರ್ದತೆಗೆ ಧಕ್ಕೆ ತರಲಾಗುತ್ತಿದೆ. ದಾಖಲೆ ಪತ್ರಗಳನ್ನು ರಕ್ಷಣೆ ಮಾಡಿಕೊಳ್ಳಲು ಅಸಹಾಯಕರಾಗಿರುವ ದೇಶದ ಕೋಟ್ಯಾಂತರ ತಳ ಮಟ್ಟದ ಜನರಿಗೆ ಈ ಕಾಯಿದೆಗಳು ಆತಂಕವನ್ನು ಉಂಟು ಮಾಡುತ್ತಿದೆ. ಮೂಲಭೂತ ಹಕ್ಕುಗಳನ್ನೆ ಕಸಿದುಕೊಂಡು ದೇಶದ ಪ್ರಜೆಗಳು ೨ನೇ ದರ್ಜೆಯಲ್ಲಿ ಬದುಕಬೇಕು ಎನ್ನುವುದೆ ಈ ಕಾಯಿದೆಯ ಹಿಂದಿರುವ ಮೂಲ ಉದ್ದೇಶ. ಈ ಹಿಂದೆ ಹಲವು ಸಂದರ್ಭಗಳಲ್ಲಿ ಜಾತಿ-ಮತಗಳ ಪರಿಗಣನೆ ಇಲ್ಲದೆ ಆಶ್ರಯ ಕೋರಿ ಬಂದವರಿಗೆ ಆಶ್ರಯ ನೀಡಲಾಗಿದೆ. ಅದೇ ಕಾರಣಕ್ಕೆ ಪೌರತ್ವ ಕಾಯ್ದೆ ತರುವುದೇ ಆದರೆ ಧಾರ್ಮಿಕ ಧಮನಿತರಾಗಿ ಬರುವ ಎಲ್ಲರಿಗೂ ಅವಕಾಶ ಕೊಡಿ ಎಂದು ಆಗ್ರಹಿಸಿದರು.

ಹೋರಾಟಗಾರ, ವಾಗ್ಮಿ ಮಹೇಂದ್ರಕುಮಾರ್ ಮಾತನಾಡಿ ಸಂವಿಧಾನ ರಕ್ಷಣೆಗಾಗಿ ನಡೆಸುವ ಹೋರಾಟಗಾರರನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಷಡ್ಯಂತ್ರವನ್ನು ಬಿಜೆಪಿ ಮತ್ತು ಆರೆಸ್ಸೆಸ್ ನಡೆಸುತ್ತಿದೆ. ಹೋರಾಟಗಾರರನ್ನು ಹತ್ತಿಕ್ಕುವ ನೆಪದಲ್ಲಿ ಗೋಲೀಬಾರ್ ಬೆದರಿಕೆ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಈ ಹೋರಾಟ ಚಳುವಳಿ ರೂಪ ಪಡೆದುಕೊಳ್ಳಲಿದ್ದು ಗುಂಡಿಕ್ಕುವುದಾದರೆ ಮೊದಲು ಗುಂಡು ನನ್ನ ಗುಂಡಿಗೆ ಸೀಳಲಿ ಎಂದರು.

ಎನ್‌ಆರ್‌ಸಿ ಯನ್ನು ತಂದು ದೇಶದ ಪ್ರಜೆಗಳಲ್ಲಿ ಒಡಕು ತರುವ ಪ್ರಯತ್ನ ಮಾಡಿದರೇ, ನಾವು ಅದಕ್ಕೆ ಸಡ್ಡು ಹೊಡಿತೀವಿ, ದೇಶದ ಕೋಟ್ಯಾಂತರ ಜನರಿಗಾಗಿ ದಾಖಲೆಗಳನ್ನು ಕೊಡೋದಿಲ್ಲ. ಈ ದೇಶದಲ್ಲಿ ಇರುವ ಯಾರನ್ನೂ ಎಲ್ಲಿಗೂ ಹೋಗಲು ಬಿಡೋದಿಲ್ಲ. ವ್ಯವಸ್ಥಿತ ಷಡ್ಯಂತ್ರಕ್ಕೆ ದೇಶ ಬಲಿಯಾಗುತ್ತಿದೆ. ಹಿಂದೂ ಸಮಾಜೋತ್ಸವ ಮಾಡಿ, ದೇಶವಾಸಿಗಳನ್ನು ಛಿದ್ರ ಛಿದ್ರ ಮಾಡಿದ್ದಾರೆ. ದೇಶದ ವ್ಯವಸ್ಥೆ ಹಾಗೂ ಸಂಸ್ಕೃತಿಯನ್ನು ಕಾಪಾಡಲು ಸಮಾನ ಮನಸ್ಕರೊಂದಿಗೆ ಹೆಜ್ಜೆ ಹಾಕಬೇಕಾದ ಅನೀವಾರ್ಯತೆ ಇದೆ ಎಂದು ಹೇಳಿದರು.

ಇದೇ ಸಂದರ್ಭ ಸಾಮಾಹಿಕ ಪ್ರತಿಜ್ಞೆ ಸ್ವೀಕರಿಸಲಾಯಿತು. ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶಶಿಧರ ಹೆಮ್ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಡಾ.ಎಂ.ಎಂ.ಎಸ್.ಎಂ ಅಬ್ದುಲ್ ರಶೀದ್ ಸಖಾಫಿ ಝೈನೀ ಕಾಮಿಲ್, ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಎ. ಕೆ. ಅಶ್ರಫ್, ಕ್ಯಾಥೋಲಿಕ್ ಸಭಾ ವಲಯಾಧ್ಯಕ್ಷ ಎರಿಕ್ ಗೊನ್ಸಾಲ್ವಿಸ್, ದಲಿತ ಮುಖಂಡ ಸುಂದರ ಮಾಸ್ತರ್ ಉಡುಪಿ, ಸಿಪಿಎಂ ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಸಿಮ್ ಕುಂದಾಪುರ ಇದ್ದರು.

Leave a Reply

Your email address will not be published. Required fields are marked *

4 + four =