ಕೊಲ್ಲೂರು ದೇವಳದಲ್ಲಿ ಸ್ಥಳಿಯರ ಅವಗಣನೆ, ಖಾಸಗೀಕರಣದ ಆರೋಪ: ಬೃಹತ್ ಪ್ರತಿಭಟನೆ

Call us

Call us

ಅಂಗಡಿ ಮುಂಗಟ್ಟು ಬಂದ್ ಮಾಡಿದ ಪ್ರತಿಭಟನಾಕಾರರು : ಕ್ಷೇತ್ರಕ್ಕೆ ಬಂದ ಯಾತ್ರಾರ್ಥಿಗಳ ಪರದಾಟ.ಆರೋಪದಲ್ಲಿ ಹುರುಳಿಲ್ಲ ಎಂದ ದೇವಳದ ಆಡಳಿತ ಮಂಡಳಿ.

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ

Call us

Call us

ಕೊಲ್ಲೂರು: ಇಲ್ಲಿನ ದೇವಳದ ವಸತಿಗೃಹ ಖಾಸಗೀಕರಣಗೊಳಿಸಿ ಭಕ್ತರಿಂದ ಹೆಚ್ಚಿಗೆ ಹಣ ಸುಲಿಗೆ ಮಾಡುವ ಹುನ್ನಾರ ನಡೆಯುತ್ತಿದೆ. ಪವಿತ್ರ ದೇವಸ್ಥಾನ ಧಾರ್ಮಿಕ ಕ್ಷೇತ್ರವನ್ನಾಗಿ ಉಳಿಸದೇ ಇಲ್ಲಿಯೂ ಲಾಭ-ನಷ್ಟದ ಲೆಕ್ಕ ಹಾಕುತ್ತಿರುವುದು ಸರಿಯಲ್ಲ ಎಂದು ಕೊಲ್ಲೂರು ರಕ್ಷಣಾ ವೇದಿಕೆ ಅಧ್ಯಕ್ಷ ಸಂದೀಪ್ ಹೇಳಿದರು

ಅವರು ಕೊಲ್ಲೂರು ಹಿತರಕ್ಷಣ ವೇದಿಕೆ ಆಶ್ರಯದಲ್ಲಿ ಕೊಲ್ಲೂರು ದೇವಸ್ಥಾನ ಆಡಳಿತ ಕಚೇರಿ ಎದುರು ನಡೆದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಶ್ರೀ ದೇವಿಯ ಪವಿತ್ರ ತೇಪೋತ್ಸವವು ಕೊಳಚೆ ನೀರಿನಲ್ಲಿ ನಡೆಯುತ್ತಿದೆ. ಒಳಚರಂಡಿ ವ್ಯವಸ್ಥೆಗೆ ಕೇವಲ ಘೋಷಣೆಯಾಗಷ್ಟೇ ಉಳಿದಿದೆ. ಕೊಲ್ಲೂರಿನ ಜನರ ಹಿತ ಕಡೆಗಣಿಸಿ ಕ್ಷೇತ್ರ ವ್ಯಾವಹಾರಿಕರಣಗೊಳಿಸುತ್ತಿರುವುದು ಸರಿಯಲ್ಲ. ದೇವಳದ ಆಡಳಿತ ಮಂಡಳಿ ಹಾಗೂ ಇತರೆ ದೇವಳದ ಹುದ್ದೆಗಳಲ್ಲಿ ಸ್ಥಳೀಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ ಅವರು ದೇವಳದಲ್ಲಿ ದುಡಿಯುವ ನೌಕರರ ಹಿತಾಸಕ್ತಿಯನ್ನು ಅವಗಣಿಸಲಾಗಿದೆ. ಇಲ್ಲಿ ದುಡಿಯುವವರಿಗೆ ಯಾವುದೇ ಭದ್ರತೆ ಇಲ್ಲ. ಯಾರಿಗಾದರೂ ಅವಘಡ ಸಂಭವಿಸಿದರೇ ಅದಕ್ಕೆ ಸಹಾಯ ಮಾಡುವ ಇಚ್ಚಾಶಕ್ತಿಯೂ ಇಲ್ಲದ ಸ್ಥಿತಿಯಲ್ಲಿ ಆಡಳಿತ ಮಂಡಳಿ ಇದೆ ಎಂದರು. ಶೀಘ್ರವಾಗಿ ಒಳಚರಂಡಿ ವ್ಯವಸ್ಥೆಗೆ ಚಾಲನೆ ನೀಡಬೇಕು ಹಾಗೂ ಆಡಳಿತ ಮಂಡಳಿಯಲ್ಲಿ ಸ್ಥಳೀಯರಿಗೇ ಅವಕಾಶ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಪ್ರತಿಭಟನೆಯಲ್ಲಿ ಕೊಲ್ಲೂರು ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳಾದ ಚಂದ್ರ ಬಳೆಗಾರ್, ಹರೀಶ್ ತೋಳಾರ್, ವಾಸು ಹೆಗ್ಡೆ, ನಾಗೇಶ್ ದಳಿ ಗ್ರಾಪಂ. ಸದಸ್ಯ ವಿನೋದ್ ಹೆಬ್ಬಾರ್, ಜಯಪ್ರಕಾಶ್ ಹೆಗ್ಡೆ ಮೊದಲಾದವರು ಭಾಗವಹಿಸಿದ್ದರು.

[quote font_size=”14″ bgcolor=”#ffffff” bcolor=”#dd9933″ arrow=”yes”] ಆರೋಪದಲ್ಲಿ ಹುರುಳಿಲ್ಲ: ಕೃಷ್ಣಪ್ರಸಾದ್ ಅಡ್ಯಂತಾಯ

ದೇವಳದ ಎಲ್ಲಾ ವಸತಿ ಗೃಹಗಳು ಒಂದೇ ಸಮುಚ್ಛಯದಲ್ಲಿದ್ದು, ಮಾತಾ ಛತ್ರ ಮಾತ್ರ ಬೇರೆ ಕಡೆ ಇರುವುದರಿಂದ ನಿಕರ್ವಹಣೆ ಸಮಸ್ಯೆ ಸರಿದೂಗಿಸಲು, ದೇವಸ್ಥಾನದ ಆದಾಯ ಗಮನದಲ್ಲಿಕರಿಸಿಕೊಂಡು ಖಾಸಗಿ ಆವರಿಗೆ ಉಳಿದೆಲ್ಲಾ ವಸತಿ ಸಮುಚ್ಛಯ ಒಂದದೆಡೆಯಿದ್ದು, ಮಾತಾಛತ್ರ ಮಾತ್ರ ಬೇರೆ ಎದ್ದು, ನಿರ್ವಹಣೆ ಸಮಸ್ಯೆಯಿಂದ ಖಾಸಗಿ ಅವರಿಗೆ ಟೆಂಡರ್ ಕರೆದು ವಹಿಸಲಾಗುತ್ತಿದೆ. ಇಲ್ಲಿಯೂ ಕೂಡಾ ನಿಗದಿಪಡಿಸಿದ ಹಣಕ್ಕಿಂತ ಹೆಚ್ಚು ಸುಲಿಗೆ ಮಾಡಿದಲ್ಲಿ ಟೆಂಟರ್ ರದ್ದು ಪಡಿಸಲಾಗುತ್ತದೆ ಎಂದು ಶ್ರೀ ಕ್ಷೇತ್ರ ಕೊಲ್ಲೂರು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಆಡ್ಯಂತಾಯ ತಿಳಿಸಿದ್ದಾರೆ. ವಿಶೇಷ ದಿನಗಳಲ್ಲಿ ಕೊಲ್ಲೂರಿಗೆ ಬರುವ ಭಕ್ತರಿಂದ ದುಪ್ಪಟ್ಟು ಬಾಡಿಗೆ ಸುಲುಗೆ ಮಾಡುತ್ತಿರುವ ಖಾಸಗಿ ವಸತಿಗೃಹಗಳ ಲಾಬಿ ಎಲ್ಲರಿಗೂ ತಿಳಿದ ಸಂಗತಿ. ದೇವಸ್ಥಾನದ ವಸತಿ ಗೃಹಗಳ ಬಗ್ಗೆ ಪ್ರಶ್ನಿಸುವವರು ಖಾಸಗಿ ಗೃಹಗಳು ಅಪಸೌವ್ಯಗಳ ಬಗ್ಗೆ ಯಾಕೆ ಸೊಲ್ಲೆತ್ತುತ್ತಿಲ್ಲ ಎಂದು ಹೇಳಿದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)

ತೆಪ್ಪೋತ್ಸವ ಕೊಚ್ಚೆ ನೀರಲ್ಲಿ ನಡೆಯುತ್ತದೆ ಎನ್ನೋದು ಸತ್ಯಕ್ಕೆ ದೂರಾವಾಗಿದ್ದು, 52 ಲಕ್ಷ ರೂ. ವೆಚ್ಚದಲ್ಲಿ ಕೊಚ್ಚೆ ನೀರು ಡೈವರ್ಶನ್ ಮಾಡಿಕೊಡಲಾಗಿದೆ.   ಸೌಪರ್ಣಿಕಾ ನದಿ ಮಲೀನ ಆಗುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಹೊಳೆಗೆ ಮಲೀನ ನೀರು ಹೋಗುತ್ತಿಲ್ಲ. ಭಕ್ತರ ಪವಿತ್ರ ಸ್ನಾನಕ್ಕೆ ನೀರು ಯೋಗ್ಯವಾಗಿದೆ. ದೇವಸ್ಥಾನ ಲಾಭನಷ್ಟದ ಪ್ರಶ್ನೆಯಲ್ಲ. ಅಭಿವೃದ್ಧಿ ಮಾಡಬೇಕಿದ್ದರೆ ಹಣದ ಅವಶ್ಯಕತೆ ಇರುತ್ತದೆ. ಕೊಲ್ಲೂರು ಒಳಚರಂಡಿ, ಕುಡಿಯವ ನೀರು ಯೋಜನೆ ಹಣದ ಕೊರತೆಯಿಂದ ನೆನೆಗುದಿಗೆ ಬಿದ್ದಿತ್ತು.. ನಾವು 80 ಕೋಟಿ ಹಣ ಸಂಗ್ರಹಿಸಿದ್ದರಿಂದ ಯೋಜನೆ ಆರಂಭವಾಗುತ್ತಿದೆ. ಸುಮಾರು 79 ಕೋಟಿ ರೂ ವೆಚ್ಚದ ಕಾಮಗಾರಿಗೆ ನೀಡಲಿದ್ದಾರೆ ಎಂದು ತಿಳಿಸಿದರು.

[/quote]

_MG_1936 _MG_1930 _MG_1923 _MG_1922 _MG_1909 _MG_1907 _MG_1897

Leave a Reply

Your email address will not be published. Required fields are marked *

nine − six =