ಮಯ್ಯಾಡಿ ಶಾಲೆಯಲ್ಲಿ ಶಿಕ್ಷಕರೇ ಶಾಲಾ ವಾಹನದ ಚಾಲಕ

Click Here

Call us

Call us

ಸುನಿಲ್ ಹೆಚ್. ಜಿ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ
ಶಿಕ್ಷಕರಾದವರು ತರಗತಿಯಲ್ಲಿ ಪಾಠ, ದೈಹಿಕ ಶಿಕ್ಷಣ ಶಿಕ್ಷಕರಾದರೆ ಮಕ್ಕಳಿಗೆ ಆಟ ಇವಿಷ್ಟನ್ನೇ ಮಾಡಿದರೆ ಸಾಕೆಂದು ವೃತ್ತಿಯಲ್ಲಿ ತೊಡಗಿಕೊಂಡಿರುವವರ ನಡುವೆ ಈ ಶಾಲೆಯ ಶಿಕ್ಷಕರೋರ್ವರ ಕಾರ್ಯಕ್ಷಮತೆ ಇತರರಿಗೂ ಮಾದರಿ. ತನ್ನ ಶಿಕ್ಷಕ ವೃತ್ತಿಯ ಜೊತೆಗೆ ಅದೇ ಶಾಲೆಯ ಮಕ್ಕಳನ್ನು ಕರೆತರಲು ಶಾಲಾ ವಾಹನ ಚಾಲನೆ ಮಾಡುವುದರ ಮೂಲಕ ವೃತ್ತಿ ಬದುಕಿನ ನಡುವೆ ಹೊಸ ಸಾಧ್ಯತೆಯನ್ನು ತೆರೆದಿಟ್ಟು ಶಾಲೆಯ ದಾಖಲಾತಿ ಹೆಚ್ಚಲು ಒಂದು ದಾರಿ ಮಾಡಿದ್ದಾರೆ.

Call us

Call us

Visit Now

ಮಯ್ಯಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಜು ಎಸ್. ಮಯ್ಯಾಡಿಯವರು ಕಳೆದ 7 ವರ್ಷಗಳಿಂದ ಇಂತಹದ್ದೊಂದು ಸಾಹಸದಲ್ಲಿ ತೊಡಗಿಸಿಕೊಂಡಿದ್ದಾರೆ. ಮಕ್ಕಳಿಗೆ ಆಟ-ಪಾಠದೊಂದಿಗೆ ಅವರನ್ನು ಶಾಲಾ ವಾಹನದಲ್ಲಿ ಮನೆಯಿಂದ ಕರೆತಂದು ಮರಳಿ ಮನೆಗೆ ಬಿಡುವಲ್ಲಿ ವಾಹನ ಚಾಲನೆಯ ಹೆಚ್ಚುವರಿ ಕೆಲಸವನ್ನೂ ಖುಷಿಯಿಂದ ತಾವೇ ನಿರ್ವಹಿಸುತ್ತಿದ್ದಾರೆ.

Click here

Click Here

Call us

Call us

ವಾಹನದಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ:
ಮಯ್ಯಾಡಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದ್ದಾಗ ಶಾಲೆಯ ಶಿಕ್ಷಕರೆಲ್ಲರೂ ಸೇರಿ ಮೊದಲು ಆಟೋ ರಿಕ್ಷಾವೊಂದನ್ನು ಕೊಂಡುಕೊಂಡರು. ಅದೇ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಯವಕನೇ ಬೆಳಿಗ್ಗೆ ವಿದ್ಯಾರ್ಥಿಗಳನ್ನು ಕರೆತರುತ್ತಿದ್ದ. ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರಿಂದ ಒಂದು ವರ್ಷದ ಬಳಿಕ ಮತ್ತೊಂದು ಆಟೋ ಶಾಲೆಗೆ ಬಂತು. ಈ ನಡುವೆ ಶಾಲೆಗೆ ಬಂದಿದ್ದ ಶಾಲೆಯ ಹಳೆ ವಿದ್ಯಾರ್ಥಿ ಮಯ್ಯಾಡಿ ಗದ್ದೆಮನೆ ನಾಗರಾಜ್ ಶೇಟ್ ಎಂಬುವವರು ಗಿರಿಜಾರಾಮ ಶೇಟ್ ಅವರ ಹೆಸರಿನಲ್ಲಿ ಶಾಲೆಗೆ ಬಸ್ಸೊಂದನ್ನು ನೀಡುವ ಭರವಸೆ ನೀಡಿದರು. ಸುಮಾರು 11 ಲಕ್ಷ ರೂ. ವೆಚ್ಚದ ಬಸ್‌ನ್ನು ನಾಗರಾಜ ಶೇಟ್ ದಂಪತಿಗಳು ಧರ್ಮಸ್ಥಳದಲ್ಲಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಮೂಲಕ ಶಾಲೆಗೆ ಹಸ್ತಾಂತರಿಸಿದರು. ಪೂಜ್ಯರು ವಾಹನದ ಬೀಗವನ್ನು ಚಾಲಕನಿಗೆ ಕೊಡುವ ಸಂದರ್ಭದಲ್ಲಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರೇ ಅದನ್ನು ಸ್ವೀಕರಿಸಿದರು. ಅವರೇ ಮುಂದುವರಿಯಲಿ ಎಂಬ ಖಾವಂದರ ಅಭಿಲಾಷೆಯನ್ನು ರಾಜು ಮಯ್ಯಾಡಿಯವರು ಮನಸಾಇಚ್ಚೆ ಪೂರೈಸಿದ್ದಾರೆ. ವಾಹನದ ನಿರ್ವಹಣ ವೆಚ್ಚವನ್ನು ಎಸ್‌ಡಿಎಂ ಆಡಳಿತ ಮಂಡಳಿ ನೋಡಿಕೊಳ್ಳುತ್ತಿದೆ. ದೈನಂದಿನ ಡಿಸೆಲ್ ವೆಚ್ಚವನ್ನು ಹಳೆವಿದ್ಯಾರ್ಥಿಗಳ ಮೂಲಕ ರೂ.11 ಲಕ್ಷದ ನಿಧಿಯೊಂದನ್ನು ಸ್ಥಾಪಿಸಿ ಅದರಿಂದ ಬರುವ ಬಡ್ಡಿಯ ಮೂಲಕ ಭರಿಸಲಾಗುತ್ತಿದೆ.

ಈ ಎಲ್ಲದರ ಪರಿಣಾಮವಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಎಳಜಿತ, ದೊಂಬೆ, ಉಪ್ಪುಂದ ಬಂಕೇಶ್ವರ ಬಾಡ ಭಾಗಗಳಿಂದ ಮಯ್ಯಾಡಿ ಶಾಲೆಗೆ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಶಾಲೆಯಲ್ಲಿ ಒಟ್ಟು 355 ವಿದ್ಯಾರ್ಥಿಗಳಿಂದ ಈ ಭಾರಿ ಒಂದನೇ ತರಗತಿಗೆ 30 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ. ಈ ಪೈಕಿ 19 ವಿದ್ಯಾರ್ಥಿಗಳು ಶಾಲಾ ವಾಹನದ ಮೂಲಕವೇ ಶಾಲೆಗೆ ಬರುತ್ತಿರುವವರು. ಕುಂದಾಪ್ರ ಡಾಟ್ ಕಾಂ ವರದಿ

Click Here

ಕ್ರೀಯಾಶೀಲ ಶಿಕ್ಷಕ ರಾಜು ಎಸ್. ಮಯ್ಯಾಡಿ:
ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ರಾಜು ಎಸ್. ಅವರು ಮಯ್ಯಾಡಿ ಶಾಲೆಯ ಹಳೆ ವಿದ್ಯಾರ್ಥಿ. ಕಳೆದ 32 ವರ್ಷಗಳಿಂದ ಅದೇ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತಮ ಕ್ರೀಡಾಪಟುವೂ ಎಂದೆಸಿನಿಕೊಂಡಿರುವ ಅವರು ತಮ್ಮ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸುವಲ್ಲಿ ಶ್ರಮವಹಿಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರ ಸಂಘದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಸಂಘಟನಾ ಕೌಶಲ್ಯವನ್ನೂ ಮೆರೆದಿದ್ದಾರೆ.

ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಶಿಕ್ಷಕರೆಲ್ಲರೂ ಒಟ್ಟಾಗಿ ಕಂಡುಕೊಂಡು ವಿದ್ಯಾರ್ಥಿಗಳಿಗೆ ವಾಹನ ಸೌಕರ್ಯ ಒದಗಿಸುವ ಮಾರ್ಗದಿಂದ ದಾಖಲಾತಿ ಹೆಚ್ಚಿದೆ. ಅದರೊಂದಿಗೆ ಕಳೆದ 7 ವರ್ಷಗಳಿಂದ ತನ್ನ ವೃತ್ತಿಯ ಜೊತೆಗೆ ಶಾಲಾ ವಾಹನದ ಚಾಲಕರಾಗಿಯೂ ರಾಜು ಎಸ್. ಮಯ್ಯಾಡಿ ಅವರು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಶಾಲಾ ವಾಹನದಲ್ಲಿ ಕುಳಿತರೆ 10 ಗಂಟೆಗೆ ತನಕವೂ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳನ್ನು ಕರೆತರುವುದು. ಮರಳಿ ಸಂಜೆ ಕರೆಯೊಯ್ಯುವ ಕಾಯಕ ನಡೆದುಕೊಂಡು ಬಂದಿದೆ. ವಾಹನದಲ್ಲಿ ಚಾಲಕರಾಗಿ ರಾಜು ಅವರಿದ್ದರೇ, ಶಾಲೆಯ ಇತರ ಶಿಕ್ಷಕರಾದ ಬೀನಾ, ಮಿಥಿಲಾ, ರಾಮಣ್ಣ ನಾಯ್ಕ್, ಉದಯ ಕುಮಾರ, ಸುಬ್ರಹ್ಮಣ್ಯ ಅವರು ಸಹಕರಿಸುತ್ತಿದ್ದಾರೆ.

ಲಕ್ಷಾಂತರ ವಿದ್ಯಾರ್ಥಿಗಳು ಕಲಿತ ಶಿಸ್ತಿನ ಶಾಲೆ:
ಮಯ್ಯಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಾಲೆಗೆ ತನ್ನದೇ ಆದ ಇತಿಹಾಸವಿದೆ. ಗುಣಮಟ್ಟದ ಶಿಕ್ಷಣಕ್ಕೆ ಒಂದು ಕಾಲದಲ್ಲಿ ಹೆಸರು ಮಾಡಿದ್ದ ಮಯ್ಯಾಡಿ ಶಾಲೆಯಲ್ಲಿ ಈವರೆಗೆ ಲಕ್ಷಾಂತರ ವಿದ್ಯಾರ್ಥಿಗಳು ಕಲಿತು ಹೋಗಿದ್ದಾರೆ. ನೆನಪಿನಲ್ಲಿ ಉಳಿಯುವಂತಹ ಹತ್ತಾರು ಶಿಕ್ಷಕರು ಸೇವೆ ಸಲ್ಲಿಸಿದ್ದಾರೆ. 1932 ರಲ್ಲಿ ನಿತ್ಯಾನಂದ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಾಗಿ ಖಾಸಗಿ ವ್ಯಕ್ತಿಗಳ ಮನೆಗಳಲ್ಲಿ ಆರಂಭವಾದ ಶಾಲೆಯ ಇತಿಹಾಸ 1953 ರಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯಾಗಿ ಶ್ರೀ ಕ್ಷೇತ್ರದ ಆಡಳಿತಕ್ಕೊಳಪಟ್ಟು ಮುಂದುವರಿಯಿತು. ಕುಂದಾಪ್ರ ಡಾಟ್ ಕಾಂ ವರದಿ

ನನ್ನ ವೃತ್ತಿಯ ಜೊತೆಗೆ ಹೆಚ್ಚುವರಿಯಾಗಿ ಶಾಲೆಯ ವಾಹನ ಚಾಲನೆ ಮಾಡುತ್ತಿರುವ ಬಗ್ಗೆ ಖುಷಿಯಿದೆ. ಶಾಲೆಗೆ ಹೆಚ್ಚಿನ ಮಕ್ಕಳು ಬರಬೇಕು ಎಂಬ ಶಿಕ್ಷಕರುಗಳ ಯೋಜನೆ ಶಾಲಾ ವಾಹನದ ಮೂಲಕ ಯಶಸ್ವಿಯಾಗಿದೆ. ಬೆಳಿಗ್ಗೆ ಮತ್ತು ಸಂಜೆ ತಲಾ 2 ಗಂಟೆ ಇದಕ್ಕೆಂದೇ ಮೀಸಲಿರಿಸಬೇಕಾಗಿರುವುದರಿಂದ ನನ್ನ ಕುಟುಂಬದವರೂ ಸಹಕರಿಸುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಕರೆತರುವಲ್ಲಿ ಇತರ ಶಿಕ್ಷಕರು ನೆರವಾಗುತ್ತಿದ್ದಾರೆ. – ರಾಜು ಎಸ್., ದೈಹಿಕ ಶಿಕ್ಷಣ ಶಿಕ್ಷಕರು

ವಾಹನಕ್ಕಾಗಿ ಮಕ್ಕಳಿಂದ ಶುಲ್ಕ ಪಡೆಯುತ್ತಿಲ್ಲ. ಚಾಲಕನನ್ನು ನೇಮಿಸಿಕೊಂಡರೇ ವಾರ್ಷಿಕ ಒಂದು ಲಕ್ಷ ರೂ. ಹೆಚ್ಚುವರಿ ಹೊರೆ ಬೀಳುತ್ತಿತ್ತು. ಮಾತ್ರವಲ್ಲದೇ ವಾಹನ ಮಕ್ಕಳ ಜವಾಬ್ದಾರಿಯೂ ಹೆಚ್ಚಿರುತ್ತಿತ್ತು. ನಮ್ಮ ಶಾಲೆಯ ದೈಹಿಕ ಶಿಕ್ಷಕರೇ ವಾಹನ ಚಾಲನೆ ಮಾಡುತ್ತಿರುವುದರಿಂದ ದೊಡ್ಡ ಆರ್ಥಿಕ ಹೊರೆ ತಪ್ಪಿದೆ. ಮಕ್ಕಳನ್ನು ಅವರೇ ಜವಾಬ್ದಾರಿಯುತವಾಗಿ ಶಾಲೆಗೆ ಕರೆತರುತ್ತಿದ್ದಾರೆ. – ಹನುಮಂತ ಜಿ. ಮುಖ್ಯ ಶಿಕ್ಷಕರು  

Leave a Reply

Your email address will not be published. Required fields are marked *

three × 5 =