ಕಸಾಪಗೆ ನೂತನ ಸಾರಥಿ, ಹೆಚ್ಚಿದೆ ಕುಂದಾಪುರದ ಕಿರುತಿ

Call us

Call us

Halambiಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಎಂಬುದು ಸಾಹಿತ್ಯ ಲೋಕದ ಪ್ರಾತಿನಿಧಿಕ ಸಂಸ್ಥೆ. ಅದು ಕನ್ನಡಿಗರ ಅಭಿಮಾನದ ಸಂಕೇತ, ಕನ್ನಡಿಗರ ಹೃದಯದಲ್ಲಿ ಅದಕ್ಕೊಂದು ವಿಶೇಷ ಸ್ಥಾನಮಾನವಿದೆ. ಹೆಚ್ಚಾಗಿ ಅದನ್ನು ನಾವೇ, ನಮ್ಮ ಭಾಷೆಗಾಗಿ ಹುಟ್ಟಿಹಾಕಿದ ಸಂಸ್ಥೆ ಎಂಬ ಪ್ರೀತಿ- ಗೌರವಿದೆ. 1915ರಲ್ಲಿ ಸ್ಥಾಪನೆಗೊಂಡ ಕಸಾಪ ಮೈಸೂರಿನ ನಾಲ್ವಡಿ ಕೃಷ್ಣರಾಜ ಅರಸರಿಂದ ಚಾಲನೆ ಪಡೆದಿತ್ತು. 2015ರ ವೇಳೆಗೆ ಅದು ನೂರು ವರುಷಗಳನ್ನು ಪೂರೈಸಲಿದೆ.

Call us

Call us

Call us

ಶತಮಾನದ ಹೊಸ್ತಿಲಿನಲ್ಲಿರುವ ಕಸಾಪಗೆ 24ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪುಂಡಲೀಕ ಹಾಲಂಬಿ ನಮ್ಮ ಕುಂದಾಪುರದವರು. ಅಚ್ಚ ಕನ್ನಡದೂರಿನ ವ್ಯಕ್ತಿ ಕನ್ನಡಮ್ಮನ ತೇರನೆಳೆಯಲು ಸಾರಥ್ಯ ವಹಿಸಿಕೊಂಡಿರುವುದು ಉಡುಪಿ ಜಿಲ್ಲೆಗೆ ಹೆಮ್ಮೆಯ ವಿಚಾರ. ಸಾಹಿತ್ಯ ಪರಿಚಾರಿಕೆಯ ಮೂಲಕ ಗುರುತಿಸಿಕೊಂಡಿರುವ ಹಾಗೂ ಸಂಘಟನೆ, ಆಡಳಿತ ನಿರ್ವಹಣೆಯ ಮೂಲಕ ಹೆಸರು ಮಾಡಿರುವ ಹಾಲಂಬಿಯವರ ಮೇಲೆ ಕನ್ನಡ ನಾಡು-ನುಡಿಗೆ ಎದುರಾಗಿರುವ ಸಂದಿಗ್ಧ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬೇಕಾದ ಗುರುತರ ಜವಾಬ್ದಾರಿ ಇದೆ. ಅವರು ನಾಡು ನುಡಿಯ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಬೇಕಾಗಿದೆ. ಅವರು ಕೈಗೊಳ್ಳುವ ಎಲ್ಲಾ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡು ನಾಡು-ನುಡಿ ಅಭಿವೃದ್ಧಿಯಾಗಲಿ ಎಂಬುದೇ ಕನ್ನಡಿಗರ ಆಶಯ. ಈ ಉನ್ನತ ಸ್ಥಾನವೇರಿದ ಅವರಿಗೆ ಕುಂದಾಪ್ರ ಡಾಟ್ ಕಾಂ ನ ಮನತುಂಬಿದ ಶುಭಾಶಯ.

Call us

Call us

ಹಾಲಂಬಿ ನಡೆದ ಹಾದಿ
ಕಸಾಪ ದ ಪ್ರತಿಷ್ಥಿತ ಅಧ್ಯಕ್ಷ ಸ್ಥಾನ ಪುಂಡಲೀಕ ಹಾಲಂಬಿಯವರಿಗೆ ದೊರೆತಿದೆ. 61 ವರುಷ ಪ್ರಾಯದ ಹಾಲಂಬಿ ಸ್ವತಃ ಸಾಹಿತಿಯಲ್ಲದಿದ್ದರೂ ನಾಡು-ನುಡಿಯ ಬಗೆಗೆ ಅಪಾರ ಅನುಭವವನ್ನು ಹೊಂದಿದವರು. ಕನ್ನಡ ನಾಡು ನುಡಿ ಮತ್ತು ಕನ್ನಡಿಗರ ಧಕ್ಕೆಯಾದರೆ ಹೋರಾಟಕ್ಕೆ ಸಿದ್ಧ ಎನ್ನುವ ಹಾಲಂಬಿಯವರ ದಿಟ್ಟ ನಿಲುವು ಮತ್ತು ಸಂಘಟನಾ ಚತುರತೆ ಅವರನ್ನು ಪರಿಷತ್ತನ ಅತ್ಯುನ್ನತ ಹುದ್ದೆಗೇರಿಸಿದೆ.

ಕುಂದಾಪುರ ತಾಲೂಕಿನ ಹಾಲಾಡಿ ಹಾಲಂಬಿಯವರ ಹುಟ್ಟೂರು. ತಂದೆ ಚಂದ್ರಶೇಖರ ಹಾಲಂಬಿ. ತಾಯಿ ವಾಸಂತಿ. ತನ್ನ ಪ್ರಾಥಮಿಕ ಶಿಕ್ಷಣವನ್ನು ಕೋಡೇರಿ, ಅರಕಲುಗೋಡು ಹಾಗೂ ಖಂಬದಕೋಣೆಯಲ್ಲಿ, 9ನೇ ತರಗತಿಯನ್ನು ಕುಂದಾಪುರದ ಬೋರ್ಡ ಹೈಸ್ಕೂಲ್ನಲ್ಲಿ ಹಾಗೂ ಎಸ್.ಎಸ್.ಎಲ್.ಸಿ ಯನ್ನು ಖಂಬದಕೋಣೆ ಪ್ರೌಡಶಾಲೆಯಲ್ಲಿ ಪೂರೈಸಿದರು. ಮುಂದೆ ಬೆಂಗಳೂರಿನಲ್ಲಿ ಶಿಕ್ಷಣ ಮುಂದುವರಿಸಿ ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎ ಪದವಿ ಪಡೆದರು.

ಬೆಂಗಳೂರು ವಿಶ್ವವಿದ್ಯಾನಿಲ0ುದ ಪ್ರಸಾರಂಗ ವಿಭಾಗದಲ್ಲಿ ಸಮನ್ವಯಕಾರರಾಗಿ ಅವರು ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಎರಡು ಅವಧಿ0ುಲ್ಲಿ ಕಸಾಪದ ಕಾರ್ಯದಶರ್ಿ ಮತ್ತು ಕೋಶಾಧ್ಯಕ್ಷರಾಗಿ ಒಟ್ಟು 14 ವರುಷ ಪರಿಷತ್ತಿನ ಅಭಿವೃದ್ಧಿಗಾಗಿ ದುಡಿದಿದ್ದಾರೆ.

ಹೋಟೆಲ್ ಉದ್ದಿಮೆದಾರರ ಸಹಕಾರಿ ಬ್ಯಾಂಕನ ಬೆನ್ನೆಲುಬಾಗಿರುವ ಹಾಲಂಬಿ ಬ್ಯಾಂಕನ ಬೆಳವಣಿಗೆಯಲ್ಲಿ ಕ್ರೀಯಾಶೀಲ ಪಾತ್ರವಹಿಸಿದ್ದಾರೆ. ಮಾತ್ರವಲ್ಲದೆ ಇನ್ನೂ ಅನೇಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದಾರೆ. ಅವರ ಸೇವಾ ಮನೋಭಾವ, ಕ್ರೀಯಾಶೀಲತೆ, ಸರಳತೆ, ಸ್ಪುಟವಾದ ಮಾತುಗಾರಿಕೆ, ಸ್ನೇಹಪರತೆ, ಅಭಿವೃದ್ಧಿ ಪರ ಚಿಂತನೆ, ಸಂಘಟನ ಕೌಶಲ್ಯ, ಹೋರಾಟದ ಹಾದಿ ಇವೇ ಮುಂತಾದವು ಅವರನ್ನು ಈ ಉನ್ನತ ಸ್ಥಾನಕ್ಕೆರಿಸಿದೆ.

“ಕನ್ನಡ ಸಾಹಿತ್ಯ ಪರಿಷತ್ ಆರ್ಥಿಕ ಸ್ವಾವಲಂಬಿ ಸಂಸ್ಥೆಯಾಗಿ ರೂಪಿಸುವುದು, ಎಲ್ಲಾ ಘಟಕಗಳು ಕ್ರೀಯಾಶೀಲವಾಗುವಂತೆ ಮಾಡುವುದು, ದತ್ತಿ ನಿಧಿ ಕಾರ್ಯಕ್ರಮಗಳನ್ನು ಶಿಸ್ತುಬದ್ಧವಾಗಿ ಏರ್ಪಡಿಸುವುದು, ಸಂಶೋಧನೆ ಹಾಗೂ ಪ್ರಕಟಣೆಗೆ ಮಹತ್ವ ನೀಡುವುದು, ಕಿರಿಯ ಸಾಹಿತಿಗಳಿಗೆ ಪ್ರೋತ್ಸಾಹ, ಪರಿಷತ್ತನಲ್ಲಿ ಶಿಸ್ತು, ಶತಮಾನೋತ್ಸವ ಆಚರಣೆಯನ್ನು ಗ್ರಾಮ ಮಟ್ಟದಿಂದ ಪ್ರಾರಂಭಿಸುವುದು ಹಿಂದಿನ ಎಲ್ಲಾ ಅಧ್ಯಕ್ಷರ ಕಾಲದಲ್ಲಿ ಅಳವಡಿಸಿದ ಪರಿಷತ್ತಗೆ ಗೌರವ ತಂದ ಕಾರ್ಯಕ್ರಮವನ್ನು ಮುಂದುವರಿಸುವುದು, ಪರಿಷತ್ತನ್ನು ಕನ್ನಡಿಗರ ಮುಖವಾಣಿಯಾಗಿ ರೂಪಿಸುವುದು ಮತ್ತು ಅನೇಕ ಆಡಳಿತಾತ್ಮಕ ಬದಲಾವಣೆಗಳನ್ನು ತರುವ ಇಂಗಿತ ಹಾಲಂಬಿಯವರದು”.

Leave a Reply

Your email address will not be published. Required fields are marked *

six − five =