ಸ.ಹಿ.ಪ್ರಾ ಶಾಲೆ ಹಿಂದೂಸ್ತಾನಿ ನಾಗೂರಿನಲ್ಲಿ ‘ಪುಸ್ತಕ ಜೋಳಿಗೆ’ ಕಾರ್ಯಕ್ರಮಕ್ಕೆ ಚಾಲನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಪುಸ್ತಕಗಳು ಜ್ಞಾನದ ದೀವಿಗೆಗಳಂತೆ. ಅವುಗಳ ಓದಿನಿಂದಲೇ ಉತ್ತಮ ಹವ್ಯಾಸ ರೂಡಿಸಿಕೊಳ್ಳಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಶಾಲಾ ಗ್ರಂಥಾಲಯಗಳು ಮಹತ್ವದ ಪಾತ್ರ ವಹಿಸುತ್ತದೆ ಎಂದು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಎಂ. ಮುಂದಿನಮನಿ ಹೇಳಿದರು.

Call us

Call us

ಅವರು ತಾಲೂಕಿನ ಸ.ಹಿ.ಪ್ರಾ ಶಾಲೆ ಹಿಂದೂಸ್ತಾನಿ ನಾಗೂರಿನಲ್ಲಿ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ ‘ಪುಸ್ತಕ ಜೋಳಿಗೆ’ ಕಾರ್ಯಕ್ರಮಕ್ಕೆ ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಶಾಂತಾ ಅವರಿಂದ ಪುಸ್ತಕ ಪಡೆಯುವುದರೊಂದಿಗೆ ಚಾಲನೆ ನೀಡಿ ಮಾತನಾಡಿ ವಿದ್ಯಾರ್ಥಿಗಳ ಪಾಲಕರು, ಸಾರ್ವಜನಿಕರು ಹಾಗೂ ದಾನಿಗಳಿಂದ ಪುಸ್ತಕಗಳನ್ನು ದಾನ ಪಡೆದು ಗ್ರಂಥಾಲಯಗಳಲ್ಲಿ ಶೇಖರಿಸಿ ಮಕ್ಕಳಿಗೆ ನೀಡುವುದರಿಂದ ಅದರ ಸದುಪಯೋಗ ಆಗಲಿದೆ ಎಂದವರು ತಿಳಿಸಿದರು.

Call us

Call us

ಶಾಲಾ ವಾಹನದ ಮೂಲಕ ನಾಗೂರಿನ ಸುತ್ತಲು ಜಾಥಾ ನಡೆಸಿ ಪಾಲಕರಿಂದ, ಸಾರ್ವಜನಿಕರಿಂದ ಪುಸ್ತಕಗಳನ್ನು ಪಡೆಯಲಾಯಿತು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರವೀಂದ್ರ ಶಾನುಭಾಗ್, ಎಸ್.ಡಿ.ಸಿ ಅಧ್ಯಕ್ಷರಾದ ಮಹಮ್ಮದ್ ರಫೀಕ್, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷರಾದ ಡಾ. ಪ್ರವೀಣ್ ಶೆಟ್ಟಿ, ನಿವೃತ್ತ ಶಿಕ್ಷಕರಾದ ಸದಾಶಿವ ಶಾನುಭಾಗ್ ಸಹಕಾರ ನೀಡಿದರು. ಮುಖ್ಯ ಶಿಕ್ಷಕರಾದ ವಿಶ್ವನಾಥ ಪೂಜಾರಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಹ ಶಿಕ್ಷಕರಾದ ಭಾಸ್ಕರ್. ಎಸ್, ಬಲ್ಕೀಸ್ ಬಾನು, ಶೋಭಾ ಕೊಠಾರಿ ಸಹಕರಿಸಿದರು.

Leave a Reply

Your email address will not be published. Required fields are marked *

3 + eight =