ಪುಂಡಲೀಕ ನಾಯಕ್‌ಗೆ ರಾಘವಾಂಕ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೆಂಗಳೂರಿನ ಹಾಸ್ಯ ತರಂಗ ಮತ್ತು ವೈ. ಸತ್ಯನಾರಾಯಣ ಕಾಸರಗೋಡು-೮೦ ಅಭಿನಂದನಾ

ಸಮಿತಿ ಜಂಟಿಯಾಗಿ ನೀಡಲಿರುವ ರಾಘವಾಂಕ ರಾಜ್ಯ ಪ್ರಶಸ್ತಿಗೆ ಕೆರ್ಗಾಲು ಗ್ರಾಮದ ನಾಯ್ಕನಕಟ್ಟೆಯ ಕವಿ, ಲೇಖಕ ಪುಂಡಲೀಕ ನಾಯಕ್ ಅವರನ್ನು ಆಯ್ಕೆ ಮಾಡಿದೆ. ಅಕ್ಟೋಬರ್ ೫ರಂದು ಕಾಸರಗೋಡು ಬೀರಂತಬೈಲಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯುವ ಅಭಿನಂದನಾ ಕಾರ್ಯಕ್ರಮ, ನೂತನ ಕೃತಿಗಳ ಬಿಡುಗಡೆ, ಹಾಸ್ಯ ರಸಾಯನ, ಪ್ರಶಸ್ತಿ ಪ್ರದಾನ, ಸನ್ಮಾನ ಮತ್ತು ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನೆರವೇರುವುದು ಎಂದು ಪ್ರಕಟಿಸಲಾಗಿದೆ.

Leave a Reply

Your email address will not be published. Required fields are marked *

4 × 2 =