ಯಕ್ಷರಂಗದ ಸಿಡಿಲಮರಿ ತೀರ್ಥಹಳ್ಳಿ ಗೋಪಾಲ ಆಚಾರ್ಯ ಅವರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಬಡಗುತಿಟ್ಟು ಯಕ್ಷರಂಗದ ಅಪ್ರತಿಮ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.

ಇಳಿವಯಸಿನಲ್ಲಿಯೂ ದಣಿವು ಅರಿಯದ ಚಿರಯುವಕ. ರಂಗಕ್ಕೆ ಅಡಿ ಇಡುತ್ತಲೆ ಮಿಂಚಿನ ಸಂಚಾರ. 65ರ ಅಭಿಮನ್ಯುನಾಗಿ ವೇಷಕಟ್ಟಿದರೂ 20ರ ಅಭಿಮನ್ಯುವಾಗಿ ಅಭಿಮಾನಿ ವರ್ಗದವರಿಗೆ ಸಿಡಿಲಮರಿಯಾಗಿ ಕಾಣಿಸಿಕೊಳ್ಳುವ ಯಕ್ಷರಂಗದ ಅಗ್ರಣಿಗೆ ಪ್ರಶಸ್ತಿ ಒಲಿದು ಬಂದಿರುವುದು ಅವರ ಅಭಿಮಾನಿಗಳಿಗೆ ಸಂತಸ ಉಂಟುಮಾಡಿದೆ.

ಗೋಪಾಲ ಆಚಾರ್ಯ ಅವರು ಮಲೆನಾಡಿನ ತೀರ್ಥಹಳ್ಳಿಯ ಕುರುವಳ್ಳಿಯಲ್ಲಿ ವಾಸುದೇವ ಆಚಾರ್ಯ ಹಾಗೂ ಸುಲೋಚನಾ ದಂಪತಿಗಳ 5 ಮಕ್ಕಳಲ್ಲಿ ಎರಡನೆಯವರು. ತನ್ನ ಮೂಲ ಕಸುಬಾದ ಬಡಗಿ ವೃತ್ತಿಯನ್ನು ಬಿಟ್ಟು ಬಡಗುತಿಟ್ಟಿನ ಯಕ್ಷಗಾನವನ್ನು ಆರಿಸಿಕೊಂಡರು. ಊರು ತೀರ್ಥಹಳ್ಳಿಯಾದರೂ ಯಕ್ಷರಂಗದ ಹಾದಿಯನ್ನು ಆಯ್ಕೆ ಮಾಡಿಕೊಂಡದು ಯಕ್ಷಕಾಶಿ ಎನಿಸಿಕೊಂಡ ಕುಂದಾಪುರವನು. ಬೈಂದೂರಿನ ಸಮೀಪದ ನಾಯಕನಕಟ್ಟೆಯಲ್ಲಿ ವಾಸವಾಗಿರುವ ತೀರ್ಥಹಳ್ಳಿ ಯವರು ಓದಿದ್ದು 3ನೇ ತರಗತಿ ಆದರೂ ಅವರ ವಾಗ್ಭಂಢಾರ ಅಪಾರ. ಯಕ್ಷರಂಗದ ಒಂದೊಂದೇ ಮೆಟ್ಟಿಲೇರಿ ಅದ್ಭುತ ನೃತ್ಯ,ಲಯಬದ್ಧ ಹೆಜ್ಜೆಗಾರಿಕೆ ಸಭ್ಯ ಹಾಗೂ ಸುಸ್ಪಷ್ಟ ಮಾತುಗಾರಿಕೆ ಹೀಗೆ ಅಳೆಯಹೊರಟರೆ ಅವರೊಬ್ಬ ಯಕ್ಷರಂಗದ ಧ್ರುವತಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Call us

ಸುಮಾರು 14ನೇ ವಯಸ್ಸಿನಲ್ಲಿ ಮಲೆನಾಡಿನ ಮೇಳವಾದ ರಂಜದಕಟ್ಟೆ ಮೇಳದಲ್ಲಿ ಕಾಲಿಗೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ ತೀರ್ಥಹಳ್ಳಿ ಯವರ ಮುಂದಿರುವುದು ಯಕ್ಷರಂಗದಿಂದ ಕಂಡುಕೇಳಿ ಕಲಾನೈಪುಣ್ಯತೆಯನು ಎತ್ತಿ ತೋರಿಸಿದವರು. ಬಾಲಗೋಪಾಲ, ಪೀಟಿಕಾ ಸ್ರೀವೇಷ, ಪುರುಷ ವೇಷ, ಪುಂಡುವೇಷದಿಂದ ಮೊದಲ್ಗೊಂಡು ಪ್ರತಿಯೊಂದು ಪ್ರಸಂಗದ ಪಾತ್ರಕ್ಕೂ ನ್ಯಾಯ ಒದಗಿಸಬಲ್ಲಅಭಿಜಾತ ಕಲಾವಿದ.

ಶಿರಿಯಾರ ಮಂಜುನಾಯಕರಂತಹ ಶ್ರೇಷ್ಠಕಲಾವಿದರಿಂದ ಕಲಿತ ಪ್ರೌಡಿಮೆ ನೆಲ್ಲೂರು ಮರಿಯಪ್ಪ ಆಚಾರ್, ನರಸಿಂಹದಾಸ್, ಕಾಳಿಂಗನಾವುಡ, ಸುಬ್ರಹ್ಮಣ್ಯ ಧಾರೇಶ್ವರ, ಸದಾಶಿವ ಅಮೀನ್, ಶಂಕರ್ ಭಾಗವತ, ದುರ್ಗಪ್ಪಗುಡಿಗಾರಂತಹ ಹಿರಿಯ ಹಿಮ್ಮೇಳ ಕಲಾವಿದರಲ್ಲದೆ ಚಿಟ್ಟಾಣಿ, ಜಲವಳ್ಳಿ,ಐರೊಡಿ, ಮುಖ್ಯಪ್ರಾಣ ಮುಂತಾದ ಹಿರಿಯ ದಿಗ್ಗಜರ ಒಡನಾಟದಲ್ಲಿ ಹಾಗೂ ರಾಮನಾಯಿರಿ,ಆರಾಟೆ ಮಂಜುನಾಥ, ಭಾಸ್ಕರಜೋಶಿ, ನಿಲ್ಗೋಡು ,ಯಲಗುಪ್ಪ ಮುಂತಾದ ಸ್ತ್ರಿವೇಷದಾರಿಗಳಿಗೆ ಜೋಡಿ ವೇಷದಾರಿಯಾಗಿ ಮೆರೆದವರು. ಅದರಲ್ಲಿ ರಾಮನಾಯಿರಿ-ತೀರ್ಥಹಳ್ಳಿ ಜೋಡಿಯಂತು ಪ್ರತಿಯೊಂದು ವಿಭಾಗದಲ್ಲೂ ಹೇಳಿಮಾಡಿಸಿದ ಜೋಡಿಯಾಗಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ.

1970 ರಲ್ಲಿ ರಂಜದಕಟ್ಟೆಮೇಳದಿಂದ ಯಕ್ಷ ವೃತ್ತಿಯನ್ನು ಆರಂಭಿಸಿದ ತೀರ್ಥಹಳ್ಳಿ ಯವರು ನಾಗರಕೊಡುಗೆ, ಶಿರಸಿ ಪಂಚಲಿಂಗೇಶ್ವರ, ಗೋಳೆಗರಡಿ, ಸಾಲಿಗ್ರಾಮ ಹಾಗೂ ಪೆರ್ಡೂರು ಮೇಳದಲ್ಲಿ ಸುದೀರ್ಘ 31 ವರ್ಷ ಯಕ್ಷ ತಿರುಗಾಟ ಮಾಡಿದ ತೀರ್ಥಹಳ್ಳಿಯವರು ಅದೆ ಮೇಳದಿಂದ ಮುಂದಿನ ಯಕ್ಷತಿರುಗಾಟಕ್ಕೆ ವಿದಾಯ ಹೇಳಿದ್ದಾರೆ.

ನಾಗಶ್ರೀ ಪ್ರಸಂಗದ ಶೈಥಿಲ್ಯನ ಪಾತ್ರದ ಪುಂಡುವೇಷ ದಿಂದ ಗುರುತಿಕೊಂಡ ಆಚಾರ್ಯರು 60 ರ ಹರೆಯದಲ್ಲೂಅಭಿಮನ್ಯುನಾಗಿ ಕೋಲ್ಮಿಂಚು ಹರಿಸಿದವರು.ಪೌರಾಣಿಕ ಪ್ರಸಂಗದ ಭಭ್ರುವಾಹನ, ಸುಧನ್ವ, ಲವಕುಶ, ಮೈಂದದಿವಿದ ಪಾತ್ರವಲ್ಲದೆ ಹೊಸ ಪ್ರಸಂಗದ ಪ್ರತಿಯೊಂದು ಪಾತ್ರಕ್ಕೆ ನ್ಯಾಯ ಒದಗಿಸಬಲ್ಲ ಶ್ರೇಷ್ಠಕಲಾವಿದ. ಆಳ್ತನದ ಕೊರತೆಯಿಂದ ಮುಂಡಾಸುವೇಷಕ್ಕೆ ಒಗ್ಗಿಕೊಳ್ಳದ ತೀರ್ಥಹಳ್ಳಿ ಯವರು ನೆಲ್ಲೂರು ಮರಿಯಪ್ಪ ಆಚಾರ್, ಮರವಂತೆ ನರಸಿಂಹದಾಸ್, ಕಾಳಿಂಗನಾವುಡ, ಸದಾಶಿವ ಅಮೀನ್, ಸುಬ್ರಹ್ಮಣ್ಯ ದಾರೇಶ್ವರ, ರಾಘವೇಂದ್ರ ಆಚಾರಂತಹ ಹಲವು ತಲೆಮಾರಿನ ಶ್ರೇಷ್ಠ ಭಾಗವತರ ಪದ್ಯಕ್ಕೆ ಹೆಜ್ಜೆ ಹಾಕಿದ ಅಪ್ರತಿಮ ನೃತ್ಯಗಾರ.

ತನ್ನ ಕಲಾಜೀವನದ ಶ್ರೇಷ್ಠ ಕಲಾವಿದರಾಗಿ ಲಕ್ಷೋಪಲಕ್ಷ ಅಭಿಮಾನಿ ವರ್ಗದವರಿಗೆ ನಿತ್ಯ ನಿರಂತರ ಯಕ್ಷಕ್ರಾಂತಿ ನೋಡಲು ಸಿಗಲಾರದು. ಕುಂದಾಪುರದ ಬೈಂದೂರಿನ ಸಮೀಪದ ನಾಯಕನಕಕಟ್ಟೆಯ ಗೆಜ್ಜೆನಾದದಲ್ಲಿ ಪತ್ನಿ ಮಂಜುಳ ಏಕಮಾತ್ರ ಪುತ್ರ ನಿಧೇಶ್ ಅರೊಂದಿಗೆ ಪುಟ್ಟ ಸಂಸಾರದೊಂದಿಗೆ ವಿಶ್ರಾಂತಿ ಜೀವನ ನೆಡೆಸುವ ತೀರ್ಥಹಳ್ಳಿಯವರು ಸರಳ ಹಾಗೂ ಸೌಮ್ಯ ಸ್ವಭಾವದ ವ್ಯಕ್ತಿ. /ಕುಂದಾಪ್ರ ಡಾಟ್ ಕಾಂ ಸುದ್ದಿ/

  • ಮೂಲ ಬರಹ: ಸುರೇಶ್ ಪೇತ್ರಿ ಅವರು ಕುಂದಾಪ್ರ ಡಾಟ್ ಕಾಂಗಾಗಿ 2016ರಲ್ಲಿ ನಡೆಸಿದ ಸಂದರ್ಶನ

ಸೌಮ್ಯ ಸ್ವಭಾವದ ಮಿತಭಾಷಿಯಾದ ಗೋಪಾಲ ಆಚಾರ್ಯ ಅವರು ರಂಗದ ಚಲನೆ ನಿಲುವಿನಲ್ಲಿ ಸ್ವಂತಿಕೆಯ ಛಾಪು, ಹೆಚ್ಚೂ ಅಲ್ಲದ ಕಡಿಮೆಯೂ ಅಲ್ಲದ ಸಮತೂಕದ ಮಾತು. ಔಚಿತ್ಯಕ್ಕೆ ತಕ್ಕ ಅಭಿನಯ, ಅಧಿಕವಲ್ಲದ ಕುಣಿತ, ರಂಗದ ಅಚ್ಚುಕಟ್ಟು ಸುಸ್ಪಷ್ಟ ಮಾತು, ಅಪಾರ ಪ್ರತ್ಯುತ್ಪನ್ನತಾ ಮತಿತ್ವ, ಶ್ರುತಿಬದ್ದತೆ, ಶಿಸ್ತುಬದ್ದತೆಯಿಂದ ಅಭಿವ್ಯಕ್ತಿ ಪರಿಣಾಮಕಾರಿಯಾಗುವಂತೆ ನೋಡಿಕೊಳ್ಳುವ ಜಾಗರೂಕತೆಯನ್ನು ಇವರ ವೇಷಗಾರಿಕೆಯಲ್ಲಿ ಖಚಿತವಾಗಿ ಗಮನಿಸಬಹುದು. ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ- ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ

ಇದನ್ನೂ ಓದಿ:
► ಹೊರನಾಡ ಕನ್ನಡಿಗ ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ – https://kundapraa.com/?p=54353 .

Leave a Reply

Your email address will not be published. Required fields are marked *

nineteen − fourteen =