ರಂಗಭೂಮಿಯಲ್ಲಿ ತೊಡಗಿಸಿಕೊಂಡವರಿಗೆ ಬದುಕಿನ ಗಟ್ಟಿತನ ಕರಗತ: ಡಾ. ಗಣೇಶ್ ಅಮೀನಗಡ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವವರಿಗೆ ಜಾತಿ, ಅಂತಸ್ತು ಅರ್ಹತೆಯ ಅಗತ್ಯವಿಲ್ಲ. ನಾಟಕಗಳ ಮೂಲಕವೇ ಉತ್ತಮ ಬದುಕು ಕಟ್ಟಿಕೊಳ್ಳುವ ಗಟ್ಟಿತನತನವನ್ನು ರಂಗಭೂಮಿಯಲ್ಲಿ ತೊಡಗಿಸಿಕೊಂಡವರಿಗೆ ಕರಗತವಾಗುವಷ್ಟು ಅಂಕಗಳ ಬೆನ್ನತ್ತಿ ಉದ್ಯೋಗ ಗಿಟ್ಟಿಸಿಕೊಳ್ಳುವವರಿಗೆ ಬದುಕಿನ ಗಟ್ಟಿತನ ಕರಗತವಾಗದು ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಡಾ. ಗಣೇಶ್ ಅಮೀನಗಡ ಹೇಳಿದರು.

Call us

Call us

Visit Now

ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಆಶ್ರಯದಲ್ಲಿ ನಡೆಯುತ್ತಿರುವ ನಾಡೋಜ ಏಣಗಿ ಬಾಳಪ್ಪ ಸಂಸ್ಮರಣೆಯ ರಂಗಸುರಭಿ 2017  ನಾಟಕ ಸಪ್ತಾಹವನ್ನು ಉದ್ಘಾಟಿಸಿ, ಏಣಗಿ ಬಾಳಪ್ಪ ಅವರ ಭಾವಚಿತ್ರಕ್ಕೆ ಪುಪ್ಪ ಸಮರ್ಪಿಸಿ ಬಳಿಕ ಮಾತನಾಡಿದರು. ನಾಟಕ ಉತ್ಸವದ ನೆಪದಲ್ಲಿ ರಂಗಾಸಕ್ತರು ಸೇರುವಂತೆ ಮಾಡುವುದೇ ದೊಡ್ಡ ಕೆಲಸ. ಒಳ್ಳೆಯ ನಾಟಕಗಳನ್ನು ನೋಡುವುದೆಂದರೆ ಉತ್ತಮ ಕೃತಿಗಳನ್ನು ಓದಿದಂತೆ. ನೈಜವಾಗಿರುವ ರಂಗಭೂಮಿ ಪ್ರೇಕ್ಷಕರಿಗೆ ಸದಾ ಆಪ್ತವಾಗುತ್ತದೆ ಎಂದವರು ಹೇಳಿದರು.

Click Here

Click here

Click Here

Call us

Call us

ನಾಡೋಜ ಏಣಗಿ ಬಾಳಪ್ಪ ಅವರು ನಡೆದಾಡುವ ರಂಗಭೂಮಿ ಎಂದೆಸಿನಿಕೊಂಡವರು. ಬಡತನದ ಮಧ್ಯೆ ಬೆಳೆದು ಬಂದ ಅವರಿಗೆ ಅಚಾನಕವಾಗಿ ಒದಗಿ ಬಂದ ನಟಿಸುವ ಅವಕಾಶ ಬದುಕಿನ ಕೊನೆಯ ತನಕವೂ ರಂಗಪಯಣದೊಂದಿಗೆ ನಡೆಯುವಂತೆ ಮಾಡಿತು. ನಟಿಸುತ್ತಾ, ನಾಟಕ ಕಂಪೆನಿ ಕಟ್ಟಿ ಉತ್ತಮ ನಾಟಕಗಳನ್ನು ಪ್ರದರ್ಶಿಸುತ್ತಾ ನಾಕಟಗಳಿಗಾಗಿಯೇ ಬದುಕು ಮೀಸಲಿಟ್ಟ ಅವರು, ಕೊನೆಯಲ್ಲಿ ನಷ್ಟ ಅನುಭವಿಸಿ ನಾಟಕ ಕಂಪೆನಿಗಳನ್ನು ಮುಚ್ಚಬೇಕಾದ ಸಂದರ್ಭ ಬಂದಿತ್ತು. ಆದಾಗ್ಯೂ ಅವರು ಬದುಕಿನ ಕೊನೆಯ ತನಕವೂ ಹಾಡುವುದನ್ನು ನಿಲ್ಲಿಸಿರಲಿಲ್ಲ ಎಂದರು.

ಈ ಸಂದರ್ಭ ಬರಹಗಾರ್ತಿ ಹಾಗೂ ರಂಗ ನಿರ್ದೇಶಕಿ ಅಭಿಲಾಷಾ ಅವರನ್ನು ಸನ್ಮಾನಿಸಲಾಯಿತು. ಸುರಭಿ ಕಲಾಗ್ರಾಮಕ್ಕೆ ಯು. ಚಂದ್ರಶೇಖರ ಹೊಳ್ಳ ಅವರು 1 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿದರು. ಗಣೇಶ್ ಅಮಿನಗಡ ಅವರು ಬರೆದ ಶತಾಯುಶಿ ನಾಡೋಜ ಏಣಗಿ ಬಾಳಪ್ಪ ಅವರ ರಂಗಾನುಭವದ ಕಥನ ’ಬಣ್ಣದ ಬದುಕಿನ ಚಿನ್ನದ ದಿನಗಳು’ ಪುಸ್ತಕ ಲೋರ್ಕಾಪಣೆಗೊಂಡಿತು.

ಸುರಭಿ ರಿ. ಬೈಂದೂರು ಇದರ ಗೌರವಾಧ್ಯಕ್ಷ, ಹಿರಿಯ ಸಾಹಿತಿ ಯು. ಚಂದ್ರಶೇಖರ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಯಡ್ತರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾಗರಾಜ ಶೆಟ್ಟಿ, ಉದ್ಯಮಿ ಮೋಹನ ರೇವಣ್ಕರ್, ಸುರಭಿ ಸಂಸ್ಥೆಯ ಅಧ್ಯಕ್ಷ ಶಿವರಾಮ ಕೊಠಾರಿ, ಯಸ್ಕೊರ್ಡ್ ಟ್ರಸ್ಟ್ ನಿರ್ದೇಶಕ ಕೃಷ್ಣಮೂರ್ತಿ ಉಡುಪ ಮೊದಲಾದವರು ಉಪಸ್ಥಿತರಿದ್ದರು.

ಸುರಭಿ ನಿರ್ದೇಶಕ  ಸುಧಾಕರ ಪಿ. ಬೈಂದೂರು ಪ್ರಸ್ತಾವನೆಗೈದರು. ನಿರ್ದೇಶಕ ಗಣಪತಿ ಹೋಬಳಿದಾರ್ ಸ್ವಾಗತಿಸಿ, ಕಾರ್ಯದರ್ಶಿ ಲಕ್ಷ್ಮಣ ವೈ ಕೊರಗ ವಂದಿಸಿದರು. ಶಿಕ್ಷಕ ಆನಂದ ಮದ್ದೋಡಿ ಹಾಗೂ ಭ್ರಮರ ಉಡುಪ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಡಾ. ಹೆಚ್. ಎಸ್. ಶಿವಪ್ರಕಾಶ್ ಅವರ ರಚನೆಯ, ರೋಹಿತ್ ಎಸ್. ಬೈಕಾಡಿ ಅವರ ನಿರ್ದೇಶಕದ ಭೂಮಿಕಾ ಹಾರಾಡಿ ತಂಡ ಅಭಿನಯಿಸಿದ ಮದುವೆ ಹೆಣ್ಣು ನಾಟಕ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *

two + seventeen =