ಕುಂದಾಪುರ ಕಶ್ವಿ ಚೆಸ್ ಸ್ಕೂಲ್‌ನಲ್ಲಿ ರ‍್ಯಾಪಿಡ್ ಚೆಸ್ ಪಂದ್ಯಾಟ, ವಿಜೇತರಿಗೆ ಬಹುಮಾನ ವಿತರಣೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಫೆ.7: ಇಲ್ಲಿನ ಕಶ್ವಿ ಚೆಸ್ ಸ್ಕೂಲ್‌ನಲ್ಲಿ ಭಾನುವಾರ ರ‍್ಯಾಪಿಡ್ ಚೆಸ್ ಪಂದ್ಯಾವಳಿ ನಡೆಯಿತು. ಮುಕ್ತ ವಿಭಾಗದ ಪಂದ್ಯಾಟದಲ್ಲಿ ತೆಕ್ಕಟ್ಟೆ ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯ ಮಾನಸ ಪ್ರಥಮ ಸ್ಥಾನಗಳಿಸಿದರು. ಗೋಲ್ಡನ್ ಮತ್ತು ಸಿಲ್ವರ್ ಗ್ರೂಪ್‌ನ ಮುಕ್ತ ವಿಭಾಗದಲ್ಲಿ ದಾವಣಗೆರೆಯ ಯುರೋ ಆಂಗ್ಲ ಮಾಧ್ಯಮ ಶಾಲೆಯ ನಿಶ್ಚಲ್ ಜಿ. ಎಸ್ ಪ್ರಥಮ ಸ್ಥಾನ, ತೆಕ್ಕಟ್ಟೆ ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯ ಸನತ್ ಎಸ್. ಶಿರಿಯಾನ್ ದ್ವಿತೀಯ ಸ್ಥಾನ, ಬ್ರಹ್ಮಾವರ ಲಿಟಲ್ ರಾಕ್ ಇಂಡಿಯನ್ ಆಂಗ್ಲ ಮಾಧ್ಯಮ ಶಾಲೆಯ ಮನನ್ ಶೆಟ್ಟಿ ತೃತೀಯ ಸ್ಥಾನಗಳಿಸಿದರು.

Click Here

Call us

Call us

Click here

Click Here

Call us

Visit Now

ಆನ್‌ಲೈನ್ ಚೆಸ್ ಏರಾದ ಮೂಲಕ ನಡೆಸಲಾದ ಚೆಸ್ ಪಂದ್ಯಾಟದಲ್ಲಿ ಸುಳ್ಯದ ಸಂತ ಜೋಸೆಫ್‌ರ ಆಂಗ್ಲ ಮಾಧ್ಯಮ ಶಾಲೆಯ ಅವನಿ ಎಮ್. ಎಸ್ ಸುಳ್ಯ ಪ್ರಥಮ ಸ್ಥಾನ, ದಾವಣಗೆರೆಯ ಆರೆಂಜ್ ಟೋಟ್ಸ್ ಇಂಟರನ್ಯಾಷನಲ್ ಪ್ರೀ ಸ್ಕೂಲ್‌ನ ಆಕಾಶ್ ಜಿ.ಎಸ್ ದ್ವಿತೀಯ ಸ್ಥಾನ, ನಂದಿನಿ ಲೇ-ಔಟ್‌ನ ಪ್ರೆಸಿಡೆನ್ಸಿ ಸ್ಕೂಲ್‌ನ ಗುಹಾನ್ ಜ್ಯೋತಿ ತೃತೀಯ ಸ್ಥಾನಗಳಿಸಿದರು.

ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿದ್ದ ಕುಂದಾಪ್ರ ಡಾಟ್ ಕಾಂನ ಸಂಪಾದಕರಾದ ಸುನಿಲ್ ಹೆಚ್.ಜಿ. ಬಹುಮಾನ ವಿತರಿಸಿ ಮಾತನಾಡಿ ಚೆಸ್ ಕ್ರೀಡೆ ಮಕ್ಕಳ ಬೌದ್ಧಿಕ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ. ಚೆಸ್‌ನಲ್ಲಿನ ಆಸಕ್ತಿ ಪಂದ್ಯಾಟದಲ್ಲಿ ಗೆಲ್ಲುವಲ್ಲಿ ಶ್ರಮಿಸುವುದು ಮಾತ್ರವಲ್ಲದೇ ಬದುಕಿನಲ್ಲಿಯೂ ಜಯಿಸಲು ಮಕ್ಕಳನ್ನು ಸಜ್ಜುಗೊಳಿಸುತ್ತದೆ. ಆ ನಿಟ್ಟಿನಲ್ಲಿ ಕುಂದಾಪುರದ ಕಶ್ವಿ ಚೆಸ್ ಸ್ಕೂಲ್  ಪರಿಸರದ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿದ್ದು ಕಳೆದ ಐದು ವರ್ಷಗಳಿಂದ ಚೆಸ್ ತರಬೇತಿ, ಪ್ರತಿ ತಿಂಗಳು ಉಚಿತ ಟೂರ್ನ್‌ಮೆಂಟ್ ಸೇರಿದಂತೆ ಚೆಸ್ ಕ್ರೀಡೆಯ ಉತ್ತೇಜನಕ್ಕಾಗಿ ಹಲವು ಚಟುವಟಿಕೆಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ವೇದಿಕೆಯಲ್ಲಿ ಕಶ್ವಿ ಚೆಸ್ ಸ್ಕೂಲ್‌ನ ವಿದ್ಯಾರ್ಥಿಯಾದ ನಿಶಾಂತ್ ಡಿಸೋಜಾ, ವಾರದ ಉತ್ತಮ ಸಾಧಕರಾದ ಸನಾ ಶೆಟ್ಟಿ ಹಾಗೂ ಕಶ್ವಿ ಸ್ಕೂಲ್ ಸಂಚಾಲಕರಾದ ನರೇಶ್ ಬಿ. ಉಪಸ್ಥಿತರಿದ್ದರು. ಕಶ್ವಿ ಚೆಸ್ ಸ್ಕೂಲ್‌ನ ಕಾರ್ಯನಿರ್ವಾಹಕರಾದ ಅಣ್ಣಪ್ಪ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಈ ಪಂದ್ಯಾವಳಿಯನ್ನು ಕಶ್ವಿ ಚೆಸ್ ಸ್ಕೂಲ್‌ನ ತರಬೇತುದಾರರಾದ ಕಿರಣ್, ರೂಪ ಶೆಟ್ಟಿ ಮತ್ತು ಧನ್‌ರಾಜ್ ಬಸ್ರೂರು ಸಾಂಘೀಕವಾಗಿ ನಡೆಸಿ ಕೊಟ್ಟರು

Call us

Leave a Reply

Your email address will not be published. Required fields are marked *

one × 2 =