ಮುರೂರು ಕೊರಗರ ಕಾಲೋನಿ: ಸಚಿವರ ವಾಸ್ತವ್ಯದ ಬಳಿಕ ಆಗಿದ್ದೇನು?

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಹಿಂದಿನ ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವರ ಹಾಡಿ ವಾಸ್ತವ್ಯದಿಂದ ಬೈಂದೂರು ತಾಲೂಕಿನ ಆ ಪುಟ್ಟ ಊರು ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಅಂದು ಹತ್ತಾರು ಭರವಸೆಗಳನ್ನು ನೀಡಿ ಹೋಗಿದ್ದರು. ಹೌದು, ಮೂಲಭೂತ ಸೌಕರ್ಯಗಳಿಲ್ಲದೇ ಸೊರಗಿದ್ದ ಕೊರಗರ ಕಾಲೋನಿ ಇಂದು ಸ್ವಲ್ಪ ಬದಲಾಗಿದೆ. ಹಾಗಾದರೆ ಸಚಿವರು ಬಂದು ಹೋದ ಬಳಿಕ ಮುರೂರಿನಲ್ಲಿ ಆಗಿದ್ದೇನು? ಸಚಿವರು ಕೊಟ್ಟ ಭರವಸೆಗಳಲ್ಲವೂ ಈಡೇರಿದವೇ? ಈ ಬಗ್ಗೆ ಕುಂದಾಪ್ರ ಡಾಟ್ ಕಾಂ ರಿಯಾಲಿಟಿ ಚೆಕ್ ನಡೆಸಿದೆ.

Call us

Call us

Visit Now

ಅಂದು 2016, ಡಿ. 6ರಂದು ಸಚಿವ ಹೆಚ್. ಆಂಜನೇಯ ಹೊಸವರ್ಷದ ಮುನ್ನಾದಿನ ಮುರೂರಿನಲ್ಲಿ ವಾಸ್ತವ್ಯ ಹೂಡಿ ಅಲ್ಲಿಯೇ ಹೊಸವರ್ಷ ಆಚರಿಸುವ ಬಗ್ಗೆ ಘೋಷಿಸಿದರು. ಅದಕ್ಕೂ ಮುನ್ನಾ ಮುರೂರಿಗೆ ನೆಟ್ಟಗೆ ಒಂದು ಸಂರ್ಪಕ ರಸ್ತೆಯೂ ಇರಲಿಲ್ಲ. ಅನುದಾನದ ಕೊರತೆಯಿಂದ ಕಪ್ಪಾಡಿ ಹೊಳೆ ಸೇತುವೆ ಕಾಮಗಾರಿ ಕೂಡಾ ನಿಂತು ಹೋಗಿತ್ತು. ಎರಡು ಮನೆ ಅರ್ಧಬರ್ಧ ಆಗಿದ್ದು, ಮುಂದೆ ಕಟ್ಟಲಾಗದೆ ಕೈಚೆಲ್ಲಿದ್ದರು. ಮತ್ತಿಬ್ಬರು ಮನೆ ಕಟ್ಟುವ ಕನಸು ಕಾಣುತ್ತಾ ಶಿಥಿಲಾವಸ್ಥೆ ಮುಟ್ಟಿದ ಮನೆಯಲ್ಲಿ ದಿನ ಕಳೆಯುತ್ತಿದ್ದರು.

Click here

Call us

Call us

2016 ಡಿ. 31ರಂದು ಸಚಿವರು, ಜಿಲ್ಲಾಡಳಿತದ ಆದಿಯಾಗಿ ಅಧಿಕಾರಿಗಳ ದಂಡೇ ಮುರೂರಿಗೆ ಬಂತು. ಅಂದು ಸಚಿವರೇ ನಿಡಿದ ಭರವಸೆಯಂತೆ ಅರ್ಧಕ್ಕೆ ನಿಂತ ಮನೆ ಪೂರ್ಣವಾಗಿದೆ. ತಲೆ ಮೇಲೆ ಬೀಳುವ ಸ್ಥಿತಿಯ ಮನೆಯಲ್ಲಿದ್ದರಿಗೆ ಐಟಿಡಿಪಿ ಅಧಿಕಾರಿಗಳು ಮುಂದೆ ನಿಂತು ಚಂದದ ಮನೆ ಕಟ್ಟಿಕೊಟ್ಟಿದ್ದಾರೆ. ಊರಿಗೆ ಸುಸಜ್ಜಿತ ಸಮುದಾಯ ಭವನ ಆಗಿದೆ. ಅರ್ಧಕ್ಕೆ ನಿಂತಿದ್ದ ಸೇತುವೆ ಕಾಮಗಾರಿ ಈಗ ಅಂತಿಮ ಹಂತದಲ್ಲಿದೇ. ಕಚ್ಚಾರಸ್ತೆಗಳು ಸಿಮೆಂಟ್ ರಸ್ತೆಯಾಗಿ ಮಾರ್ಪಟ್ಟಿದೆ. ಇವಿಷ್ಟು ಮೂರುರು ಕಂಡ ಬದಲಾವಣೆ. ಈ ಬದಲಾವಣೆ ಸಚಿವರು ಗ್ರಾಮ ವಾಸ್ತವ್ಯ ಮಾಡದಿದ್ದರೇ ಆಗುತ್ತಿರಲಿಲ್ಲ ಎಂದು ಸ್ಥಳೀಯರೇ ಒಪ್ಪಿಕೊಳ್ಳುತ್ತಾರೆ.

ಊರಿನ ದಾರಿ ಸುಗಮವಾಯ್ತು. ಬದುಕು ಹಸನಾಗಿಲ್ಲ:
ಮುರೂರು ಕಾಲನಿ ನಿವಾಸಿಗಳು ಕೂಲಿ ಕೆಲಸ ನಂಬಿ ಬದುಕುತ್ತಿದ್ದಾರೆ. ಮನೆಯಲ್ಲಿರುವ ಮಹಿಳೆಯರು ತಮ್ಮ ಕುಲಕಸುಬಾದ ಬುಟ್ಟಿ, ಗೆರ್ಸಿ, ಕಲ್ಲಿ, ದರಲೆ ಬುಟ್ಟಿ, ತಯಾರಿಸಿ ಬದುಕಿನ ನೊಗ ಎಳೆಯಲು ನೆರವಾಗುತ್ತಿದ್ದರು. ಮೂಲ ನಿವಾಸಿಗಳು ಮೂಲ ಕಸುಬಿಗೆ ಉತ್ತೇಜನ ನೀಡಲು ಅವರಿಗೆ ಆರ್ಥಿಕ ಸಹಕಾರ ಮಾರುಕಟ್ಟೆ ವ್ಯವಸ್ಥೆ ಸಚಿವರ ನೀಡಿದ ಭರವಸೆಯಲ್ಲಿ ಸೇರಿದ್ದು, ಅದಿನ್ನೂ ಸಕಾರಗೊಳ್ಳದೆ ಮನೆ ಮನೆ ಬಾಗಿಲಿಗೆ ಹೋಗಿ ಮಾರಾಟ ಮಾಡಿ ಬರುವ ಸ್ಥಿತಿ ಬದಲಾಗಿಲ್ಲ. ಸ್ವಂತ ಉದ್ಯೋಗ ಮಾಡುವವರಿಗೆ 25 ಸಾವಿರ ದಾಖಲೆಯೇ ಇಲ್ಲದೆ ಸಾಲ ಸೌಲಭ್ಯ, ಕುರಿ, ಆಡು, ಹೈನುಗಾರಿಕೆಗೆ ಆರ್ಥಿಕ ಸಹಕಾರ ಮುಂತಾದ ಭರವಸೆ ಇನ್ನೂ ಈಡೇರಿಲ್ಲ. ಅನಾರೋಗ್ಯ ಪೀಡತರಿಗೆ ಚಿಕಿತ್ಸೆ ವ್ಯವಸ್ಥೆ ಪೌಷ್ಟಿಕ ಆಹಾರ ಬಾಕಿ ಉಳಿದಿದ್ದು, ಕಾಲನಿಯಲ್ಲಿ ಪೌಷ್ಟಿಕ ಆಹಾರ ಕೊರತೆಯಿಂದ ಬಳಲುವ ಮಕ್ಕಳು ಇದ್ದಾರೆ. ಕುಡಿಯುವ ನೀರಿನ ಸಮಸ್ಯೆ ಕೂಡಾ ಇದೆ. ಕೊರಗರು ಏನು ಕೇಳಿದರೂ ಕೊಡುತ್ತೇನೆ ಎಂದಿದ್ದರು ಸಚಿವರು. ಕೊರಗರು ಏನು ಕೇಳಿದರೂ ದಾಖಲೆ ಕೇಳದೆ ನೀಡಿ ಎಂದು ಅಧಿಕಾರಿಗಳಿಗೆ ತಾಕೀತು ಕೂಡಾ ಮಾಡಿದ್ದರು. ಸಚಿವರು ಉಡುಪಿ ಜಿಲ್ಲೆ ಸಮಾಜ ಕಲ್ಯಾಣ ಇಲಾಖೆ ಖಾಲಿ ಹುದ್ದೆ ತಕ್ಷಣ ಭರ್ತಿಮಾಡಿ ಕೊಟ್ಟ ಭರವಸೆ ಇಂಪ್ಲಿಮೆಂಟ್ ಮಾಡುತ್ತೇನೆ ಎಂದಿದ್ದರು. ಸಮಾಜ ಕಲ್ಯಾಣ ಇಲಾಖೆ ಖಾಲಿ ಹುದ್ದೆಯೇ ಭರ್ತಿಯಾಗಿಲ್ಲ.

ಒಂದು ದಿನದ ವಾಸ್ತವ್ಯಕ್ಕೆ ಖರ್ಚು ಮಾಡಿದ್ದು 40 ಲಕ್ಷ ರೂ.
ಸಚಿವರು ಹಾಗೂ ಜಿಲ್ಲಾಡಳಿತವೇ ಮುರೂರಿನಲ್ಲಿ ಠಿಕಾಣಿ ಹೂಡಿತ್ತು. ಸಚಿವರು ಮುರೂರು ವಾಸ್ತವ್ಯದ ಸುದ್ದಿ ಪ್ರಕಟವಾಗುತ್ತಿದ್ದಂತೆ, ತಾತ್ಕಾಲಿಕ ರಸ್ತೆ, ಸಚಿವರು ಉಳಿದುಕೊಳ್ಳುವ ಮನೆಗೆ ಶೌಚಾಲಯ, ಸ್ವಚ್ಛತೆ, ಕಾರ್ಯಕ್ರಮ ಸಂಯೋಜನೆ ಮೊದಲಾದ ಕಾರ್ಯಕ್ಕೆ 40 ಲಕ್ಷ ರೂ. ವ್ಯಯಿಸಲಾಗಿತ್ತು.

ಆರು ತಿಂಗಳ ಬಳಿಕ ಬಾರದ ಸಚಿವರು:
ಅಂದು ರಾಜ್ಯ ಸರ್ಕಾರದ ಪ್ರತಿನಿಧಿಯೇ ಬಂದಿದ್ದಾರೆ. ಜಿಲ್ಲಾಡಳಿತವೇ ಮುರೂರಿಗೆ ಬಂದಿದೆ. ಇದೆಲ್ಲದರಿಂದ ಮುರೂರು ಉದ್ದಾರ ಆಗುತ್ತದೆ ಎಂಬ ನಂಬಿದವರಿಗೆ ಸಿಕ್ಕಿದ್ದು ನಿರಾಸೆ. ಹಾಡಿ ವ್ಯಾಸ್ತವ್ಯದ ಆರು ತಿಂಗಳ ನಂತರ ಮುರೂರು ಅಭಿವೃದ್ಧಿ ವೀಕ್ಷಣೆಗೆ ಬರುತ್ತೇನೆ ಎಂದಿದ್ದರೂ ಬಂದಿಲ್ಲ. ರಸ್ತೆ ಸೇತುವೆ, ಸಭಾಭವನ ಅಭಿವೃದ್ಧಿಗೆ ಪೂರಕವೇ ಹೊರತು ಅದೇ ಅಭಿವೃದ್ಧಿಯಲ್ಲ. ಕಾಲನಿ ವಾಸಿಗಳು ಆರ್ಥಿಕ ಸ್ವಾಲಂಬಿಯಾಗುವ ಮೂಲಕ ಜೀವನ ಭದ್ರತೆ ಸಿಕ್ಕರೇ ಅಂದೇ ಮುರೂರು ಅಭಿವೃದ್ಧಿ ಆದಂತೆ ಎನ್ನುತ್ತಾರೆ ಸ್ಥಳೀಯರು.

ಒಟ್ಟಿನಲ್ಲಿ ಸಚಿವರ ಹಾಡಿ ವಾಸ್ತವ್ಯದ ಬಳಿಕ ರಸ್ತೆ ಸೇತುವೆಯಂತಹ ಮೂಲಭೂತ ಸೌಕರ್ಯಗಳು, ಒಂದೆರಡು ಮನೆ ದುರಸತೆ ಇವೇ ಮುಂತಾದ ಕಾರ್ಯಗಳು ನಡೆದದ್ದು ಬಿಟ್ಟರೆ, ಕೊರಗ ಸಮುದಾಯದ ಆರ್ಥಿಕ ಸ್ವಾವಲಂಬನೆ ಹಾಗೂ ಆರೋಗ್ಯ ಸ್ಥಿತಿ ಸುಧಾರಿಸಲು ಅಂದಿನ ಸಚಿವರೇ ನೀಡಿದ ಭರವಸೆ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ.

ಸಚಿವರ ಹಾಡಿ ವಾಸ್ತವ್ಯದ ಸಂದರ್ಭ ನಮ್ಮ ಮನೆಗೆ ವಿದ್ಯುತ್ ಸಂಪರ್ಕ ನೀಡುವ ಭರವಸೆ ನೀಡಿದ್ದು ನಾವು ಮೊನ್ನೆ ಮೊನ್ನೆ ದೀನದಯಾಳು ಉಪಾದ್ಯಾಯ ಸ್ಕೀಮ್‌ನಲ್ಲಿ ವಿದ್ಯುತ್ ಪಡೆದು, ನಾವು ಕೈಯಿಂದ ಹಣ ಹಾಕಿ ವಿಸ್ತರಿಸಿಕೊಂಡಿದ್ದೇನೆ. ವಿದ್ಯುತ್ ಸಂಪರ್ಕ ತ್ರೀ ಪೇಸ್ ಪರಿವರ್ತಿಸುವ ಭರವಸೆಯೂ ಇಡೇರಿಲ್ಲ. ಕಾಲನಿಗೆ ಪೈಪ್ ಲೈನ್ ಮೂಲಕ ಕುಡಿಯುವ ನೀರಿನ ಸಂಪರ್ಕ ಕೂಡಾ ಆಗದೆ, ಕುಡಿಯುವ ನೀರು ಸಮಸ್ಯೆಯಿಂದ ಕಾಲನಿ ಮುಕ್ತವಾಗಿಲ್ಲ. ನಮ್ಮೂರಿನ ಸಂಪರ್ಕ ರಸ್ತೆ, ಅರ್ಧಕ್ಕೆ ನಿಂತ ಸೇತುವೆ ಕೆಲಸ ಪೂರ್ಣವಾಗಿದೆ. – ಮರ್ಲಿ, ಸಚಿವ ಆಂಜನೇಯ ವಾಸ್ತವ್ಯ ಮಾಡಿದ ಮನೆ ಹಿರಿಯ ಸದಸ್ಯೆ.

ತೋಟದ ಬಳಿಯಿರುವ ತೆರೆದ ಬಾವಿ ಅಭಿವೃದ್ಧಿ ಪಡಿಸಿ ಕಾಲನಿಗೆ ಪೂಪ್ ಲೈನ್ ಮೂಲಕ ಕುಡಿಯುವ ನೀರಿನ ಭರವಸೆ ಹಾಗೆ ಉಳಿದಿದ್ದು, ಕಾಲನಿ ನೀರಿನ ಸಮಸ್ಯೆಯಿಂದ ಮುಕ್ತವಾಗಿಲ್ಲ. ಬಿಪಿಎಲ್ ಕಾರ್ಡ್‌ನಿಂದ ಅಂತ್ಯೋದಯ ಕಾರ್ಡ್ ಸಿಕ್ಕಿಲ್ಲ. ಅನಾರೋಗ್ಯ ಪೀಡಿತರಿಗೆ ಐಟಿಡಿಪಿ ಸಹಕಾರಲ್ಲಿ ಚಿಕಿತ್ಸೆ ಪೌಸ್ಟಿಕ ಆಹಾರ ಸಮಸ್ಯೆ ಕಾಲೋನಿಯನ್ನು ಬಿಡದೆ ಕಾಡುತ್ತಿದೆ. ಸಚಿವರ ವಾಸ್ತವ್ಯದಿಂದ ಸಂಪರ್ಕ ವ್ಯವಸ್ಥೆ ಸುಧಾರಿಸಿದೆ. – ವೆಂಕಟೇಶ್ ಕೂಲಿ ಕಾರ್ಮಿಕ, ಮುರೂರು.

ಸ್ವ ಉದ್ಯೋಗ ಮಾಡುವ ಮಹಿಳೆಯರಿಗೆ ಆರ್ಥಿಕ ಸಾಲ ಸಹಕಾರ, ಹೈನುಗಾರಿಕೆ, ಕುರಿ ಸಾಕಣಿಕೆಗೆ ಪ್ರೋತ್ಸಾಹ, ಮೂಲನಿವಾಸಿಗಳ ಕೈಕಸಬಿನ ವಸ್ತುಗಳ ತಯಾರಿಕೆ ಪ್ರೋತ್ಸಾಹ ಹಾಗೂ ಮಾರುಕಟ್ಟೆ ವ್ಯವಸ್ಥೆ ಬಗೆಗೆ ಸಚಿವರ ಭರವಸೆಯಲ್ಲಿ ಇದ್ದು, ಯಾವುದೂ ಈಡೇರಿಲ್ಲ. ಸಭಾಭವನ, ಅರ್ಧಕ್ಕೆ ನಿಂತ ಮನೆಗಳ ಐಟಿಡಿಪಿ ಅಧಿಕಾರಿಗಳಿಂದ ನಿರ್ಮಾಣ ಕಾಲನಿ ಕಂಡ ಬದಲಾವಣೆ. ಸಚಿವರ ವಾಸ್ತವ್ಯದಿಂದ ಇಷ್ಟಾದರೂ ಬದಲಾವಣೆ ಆಗಿದೆ ಎನ್ನೋದು ವಾಸ್ತವ ಸತ್ಯ. ಒಮ್ಮೆ ಸಚಿವರ ನಮ್ಮ ಹಟ್ಟಿಯಲ್ಲಿ ವಾಸ್ತವ್ಯ ಮಾಡದಿದ್ದರೆ ಈ ಬದಲಾವಣೆ ಜತೆ ಸೇತುವೆ ಕೂಡಾ ಆಗುತ್ತಿರಲಿಲ್ಲ. – ಗಿರಿಜಾ, ಬುಟ್ಟಿ ಸಿಬಿಲು ನೇಯುವ ಮುರೂರು ಕಾಲನಿ ನಿವಾಸಿ

ಮೊದಲು ಹೀಗಿತ್ತು

ಇದನ್ನೂ ಓದಿ:
► ಸಚಿವರ ನಿರೀಕ್ಷೆಯಲ್ಲಿ ಮೂರೂರು. ಊರಿನ ಸಮಸ್ಯೆಗಳು ನೂರಾರು – https://kundapraa.com/?p=20317 .
► ಬೈಂದೂರು: ಹೊಸವರ್ಷ ಆಚರಣೆಗೆ ಮುರೂರು ಕೊರಗರ ಕೇರಿಗೆ ಬರುತ್ತಾರೆ ಸಚಿವ ಆಂಜನೇಯ – https://kundapraa.com/?p=20084 .
► ಹೊಸವರ್ಷ ಆಚರಣೆಗೆ ಸಚಿವರು ಮುರೂರು ಕೊರಗರ ಕೇರಿಗೆ. ಶಾಸಕರಿಂದ ಸಿದ್ಧತೆ ಪರಿಶೀಲನೆ – https://kundapraa.com/?p=20187 .
► ಕೊರಗ ಸಮುದಾಯಕ್ಕೆ ಒಳ ಮೀಸಲಾತಿಗಾಗಿ ಕೇಂದ್ರಕ್ಕೆ ಶಿಪಾರಸ್ಸು: ಸಚಿವ ಆಂಜನೇಯ – https://kundapraa.com/?p=20330 .

 

Leave a Reply

Your email address will not be published. Required fields are marked *

fifteen + seven =