2020-21ನೇ ಸಾಲಿನ ಕೇಂದ್ರೀಯ ವಿದ್ಯಾಲಯ ಪ್ರವೇಶಾತಿ. ಆನ್‌ಲೈನ್ ಅರ್ಜಿ ಆಹ್ವಾನ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: 2020-21 ನೇ ಸಾಲಿನಲ್ಲಿ ಕೇಂದ್ರಿಯ ವಿದ್ಯಾಲಯದ 1 ರಿಂದ 10ನೇ ತರಗತಿಗಳಿಗೆ ಪ್ರವೇಶ ಪಡೆಯುವ ಬಗ್ಗೆ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Call us

ಸದ್ರಿ ಸಂಸ್ಥೆಯಲ್ಲಿ 1 ನೇ ತರಗತಿಗೆ ಪ್ರವೇಶ ಪಡೆಯುವ ಬಗ್ಗೆ ದಿನಾಂಕ 17.07.2020 ಬೆಳಿಗ್ಗೆ 10 ಗಂಟೆಯಿಂದ ದಿನಾಂಕ 07.08.2020 ರ ಸಂಜೆ 7 ಗಂಟೆಯವರೆಗೆ ಮತ್ತು 2ನೇ ತರಗತಿಯಿಂದ 10 ನೇ ತರಗತಿಯವರೆಗೆ ಪ್ರವೇಶ ಪಡೆಯುವ ಬಗ್ಗೆ ದಿನಾಂಕ 20.07.2020 ರಿಂದ 25.07.2020ರ ವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

2 ನೇ ತರಗತಿಯಿಂದ 10ನೇ ತರಗತಿಯವರೆಗೆ ಪ್ರವೇಶ ಪಡೆಯುಲು ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ದಿನಾಂಕ 29.07.2020ರ ಸಂಜೆ 4.00 ಗಂಟೆಗೆ ಪ್ರಕಟಿಸಲಾಗುವುದು.ಸದ್ರಿ ತರಗತಿಗಳಿಗೆ ದಾಖಲಾತಿಯನ್ನು ದಿನಾಂಕ 30.07.2020. ರಿಂದ 07.08.2020ರ ವರೆಗೆ ಮಾಡಿಕೊಳ್ಳಲಾಗುವುದು. ಕೇಂದ್ರಿಯ ವಿದ್ಯಾಲಯದ 9ನೇ ತರಗತಿಗೆ ದಾಖಲಾತಿಯನ್ನು 10 ನೇ ತರಗತಿಯ ಫಲಿತಾಂಶ ಬಂದ 2 ವಾರದೊಳಗೆ ಮಾಡಿಕೊಳ್ಳಲಾಗುವುದು.

ಕೇಂದ್ರಿಯ ವಿದ್ಯಾಲಯದ ವಿದ್ಯಾರ್ಥಿಗಳನ್ನು ಹೊರತ ಪಡಿಸಿ ಇತರರಿಗೆ 9ನೇ ತರಗತಿಗೆ ದಾಖಲಾತಿಯನ್ನು ಕೇಂದ್ರಿಯ ವಿದ್ಯಾಲಯದ 10ನೇ ತರಗತಿಯ ವಿದ್ಯಾರ್ಥಿಗಳ ದಾಖಲಾತಿಯ ನಂತರ ಪ್ರಕಟಿಸಲಾಗುವುದು.

Call us

9 ನೇ ತರಗತಿ ಒಳಗೊಂಡಂತೆ ಎಲ್ಲಾ ತರಗತಿಗಳ ದಾಖಲಾತಿಗೆ 15.09.2020 ಕೊನೆಯ ದಿನವಾಗಿರುತ್ತದೆ.

ನೊಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳ ಪಟ್ಟಿ, ಅರ್ಹ ವಿದ್ಯಾರ್ಥಿಗಳ ಪಟ್ಟಿ, ವರ್ಗವಾರು ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿ, ವೈಟಿಂಗ್ ಲಿಸ್ಟ್’ನಲ್ಲಿರುವವರ ವಿವರಗಳನ್ನು ಕಡ್ಡಾಯಾಗಿ ಕೇಂದ್ರೀಯ ವಿದ್ಯಾಲಯದ ವೆಬ್ ಸೈಟಿನಲ್ಲಿ ಮತ್ತು ಶಾಲಾ ನೋಟೀಸು ಬೋರ್ಡಿನಲ್ಲಿ ಪ್ರಕಟಿಸಲಾಗುವುದು. ಮೇಲ್ಕಂಡ ದಿನಾಂಕಗಳಲ್ಲಿ ಯಾವುದಾದರೂ ರಜಾದಿನಗಳಿದ್ದಲ್ಲಿ ಅದರ ಮುಂದಿನ ದಿನಾಂಕವನ್ನು ಪ್ರಾರಂಭ ಅಥವಾ ಕೊನೆಯ ದಿನಾಂಕವೆಂದು ಪರಿಗಣಿಸಲಾಗುವುದು.

ತರಗತಿಗಳನ್ನು ಕೋವಿಡ್ 19 ನ ಪರಿಸ್ಥಿತಿಗಳಿಗನುಸಾರವಾಗಿ ದಿನಾಂಕ 15-9-2020ರಂದು ಆನ್ಲೈನ್ ಅಥವಾ ಕೇಂದ್ರೀಯ ವಿದ್ಯಾಲಯದಲ್ಲಿ ತರಗತಿಗಳ ಮುಖಾಂತರ ಪ್ರಾರಂಭಿಸಲಾಗುವುದು.

ದೇಶದಲ್ಲಿರುವ ಕೇಂದ್ರೀಯ ವಿದ್ಯಾಲಯಗಳನ್ನು ಐಸೋಲೇಶನ್ ಸೆಂಟರ್ ಅಥವಾ ಕ್ವಾರೆಂಟೈನ್ ಸೆಂಟರ್ ಗಳಾಗಿ ಬಳಸುತ್ತಿರುವುದರಿಂದ ಲಾಕ್ ಡೌನ್ ಮುಕ್ತಾಯವಾದ ನಂತರ ಸರ್ಕಾರದ ಅನುಮತಿಯೊಂದಿಗೆ ತರಗತಿಗಳನ್ನು ಪ್ರಾರಂಭಿಸಲಾಗುವುದು.

Leave a Reply

Your email address will not be published. Required fields are marked *

5 × four =