ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಗುಲ್ವಾಡಿ ಗ್ರಾಮದ ಮೆಹರಾಜ್ ಜುಮ್ಮ ಮಸೀದಿಯ ನೂತನ ನವೀಕೃತ ಕಟ್ಟಡದ ಉದ್ಘಾಟನೆ ಇದೆ ಎ.8 ರಂದು ನಡೆಯಲಿದೆ.
1965 ರಲ್ಲಿ ನಿರ್ಮಾಣಗೊಂಡ ಹಳೆಯ ಮಸೀದಿಯನ್ನ 2001 ರಲ್ಲಿ ಪುನರ್ನಿರ್ಮಿಸಲಾಗಿದ್ದು . ಪ್ರಸ್ತುತ ಪ್ರಾರ್ಥನೆಗೆ ಸ್ಥಳಾವಕಾಶ ಕಡಿಮೆ ಆದ್ದರಿಂದ ಸ್ಥಳೀಯ ಉದಯ ನಗರ,ಬೊಳ್ ಕಟ್ಟೆ, ಶೆಟ್ರ ಕಟ್ಟೆ, ಕಲ್ಲು ಕಂಬ, ಕರ್ಕಿ, ಪಾರ್ತಿಕಟ್ಟೆ ಸೇರಿದಂತೆ ಸುಮಾರು ಇನ್ನೂರ ಐವತ್ತು ಮನೆಯವರ ಮತ್ತು ಹೊರಗಿನವರ ಸಹಕಾರದಿಂದ ಸುಮಾರು ಎಪ್ಪತ್ತು ಲಕ್ಷ ಅಂದಾಜಿನಲ್ಲಿ ಸ್ಥಳೀಯ ಮುಸ್ಲಿಮರ ಧಾರ್ಮಿಕ ಅನುಕೂಲಕ್ಕಾಗಿ ಈ ಭವ್ಯ ಮೊದಲ ಮಹಡಿಯ ಕಟ್ಟಡ ನಿರ್ಮಾಣ ಗೊಂಡು ಇದೀಗ ಉದ್ಘಾಟನೆಗೆ ಸಜ್ಜು ಗೊಂಡಿದೆ. 55 ವರ್ಷಗಳ ಹಿಂದೆ ಮಸೀದಿಯ ನಿರ್ಮಾಣಕ್ಕೆ ಮರ್ಹೂಮ್ ಸೈಯದ್ ಇಸ್ಮಾಯಿಲ್ ತಂಙಳ್ ಅವರು ಅಡಿಪಾಯ ಹಾಕಿದ್ದು ನಂತರದ ದಿನಗಳಲ್ಲಿ ಮರ್ಹೂಮ್ ಫಕೀರ್ ಬ್ಯಾರಿ, ಕಲಂದರ್ ಬ್ಯಾರಿ, ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಹಾಜಿ ಇಬ್ರಾಹಿಂ ಸಾಹೇಬ್, ಜಿ.ಕೆ ಮುಸ್ಲಿಯಾರ್, ಮಹಮದ್ ಅಬ್ಬಾ ಸಾಹೇಬ್ ಜೊತೆಗೆ ನಮ್ಮನ್ನ ಇತ್ತೀಚಿಗೆ ಅಗಲಿದ ಜಿ.ಸರ್ದಾರ್ ಸಾಹೇಬ್ ತೊಡಗಿಸಿ ಕೊಂಡಿದ್ದರು.
ಇದೆ ತಿಂಗಳ 8, ಗುರುವಾರ ಉಡುಪಿ ಜಿಲ್ಲಾ ಖಾಝಿ ಬಹು: ಶೈಖುನಾ ಝೈನುಲ್ ಉಲಮ ಅಬ್ದುಲ್ ಹಮಿದ್ ಮುಸ್ಲಿಯಾರ್ ಮಾಣಿ ಉಸ್ತಾದರು ಉದ್ಘಾಟನೆ ಮತ್ತು ವಕ್ಫ್ ನಿರ್ವಹಿಸುವರು. ಇದಕ್ಕೂ ಮೊದಲು ನಡೆಯುವ ಸೌಹಾರ್ದ ಸಮಾವೇಶದಲ್ಲಿ MJM ಅಧ್ಯಕ್ಷರಾದ ಫಕೀರ್ ಹಸನಬ್ಬ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಉಡುಪಿ ಜಿಲ್ಲಾ ಕ್ಯಾಥೊಲಿಕ್ ಸಭಾ ಇದರ ಮಾಜಿ ಅಧ್ಯಕ್ಷರಾದ ಎಲ್ರಾಯ್ ಕಿರಣ್ ಕ್ರಾಸ್ಟೊ ಭಾಗವಹಿಸುವರು. ಈ ಕಾರ್ಯಕ್ರಮದಲ್ಲಿ ಬಿ. ಅಪ್ಪಣ್ಣ ಹೆಗ್ಡೆ, ರಾಮಕೃಷ್ಣ ಉಪಾಧ್ಯಾಯ, ಜಿ.ಎಂ ಚೆರಿಯಬ್ಬ, ಬಾಲಕೃಷ್ಣ ಭಂಡಾರಿ, ಪ್ರಶಾಂತ ತೊಳಾರ್, ಅಬುಬಕ್ಕರ್ ಹಾಜಿ, ಜಿ.ಯಾಕೂಬ್ ಯೂಸುಫ್, ಸುದೇಶ ಕುಮಾರ್ ಶೆಟ್ಟಿ, ಕಿಶನ್ ಕುಮಾರ ಹೆಗ್ಡೆ, ಪ್ರಭಾಕರ ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ. ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಬಹು: ಅಸ್ಸಯ್ಯದ್ ನೂರುಸ್ಸಾದಾತ್ ಅಬ್ದುರ್ರಹಮಾನ್ ಇಂಬಿಚ್ಚಿ ಕೋಯ ತಂಙಲ್ (ಬಾಯಾರ್ ತಂಙಲ್) ತೇತ್ರತ್ವದಲ್ಲಿ ನಡೆಯುವ ವಾರ್ಷಿಕ ಸ್ವಲಾತ್ ಮಜ್ಲಿಸ್ ನಲ್ಲಿ ಬಹು: ಅಸ್ಸಯ್ಯದ್ ಜಅಫರ್ ಅಸ್ಸಖಾಫ್ ತಂಙಲ್ ಕೋಟೇಶ್ವರ, ಇಸ್ಮಾಯಿಲ್ ಮುಸ್ಲಿಯಾರ್ ಮಾವಿನಕಟ್ಟೆ, ಮಜೀದ್ ಮುಸ್ಲಿಯಾರ್ ಗುಲ್ವಾಡಿ ,ಸೈಯದ್ ಹಮೀದ್ ತಂಙಲ್ ಮಂಜೇಶ್ವರ ಅಲ್ಲದೆ MJM ಆಡಳಿತ ಮಂಡಳಿಯ ಎಲ್ಲಾ ಗಣ್ಯರ ಉಪಸ್ಥಿಯಲ್ಲಿ ಮತ್ತು ಸಿರಾಜುಲ್ ಹುದಾ ಮುಸ್ಲಿಂ ಯಂಗ್ ಮೆನ್ಸ್ ಕಮೀಟಿ ಮತ್ತು ಜಮಾತಿನವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.