ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳನ್ನು ದಾಖಾಲಾತಿ ಮಾಡಲು ಕುಂದಾಪುರ ಸಹಾಯಕ ಕಮೀಷನರ್ರವರನ್ನು ಭೇಟಿ ಮಾಡಿ ಮನವಿ ನೀಡಲಾಯಿತು.
ಮನವಿಗೆ ಸ್ಪಂದಿಸಿದ ಸಹಾಯಕ ಕಮೀಷನರ್ ಮೂರು ನಾಲ್ಕು ದಿನಗಳಲ್ಲಿ, ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಹಳೆ ಕಟ್ಟಡದಲ್ಲಿ ಒಳರೋಗಿಗಳ ದಾಖಾಲಾತಿ ಹಾಗೂ ಇತರೇ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಹಳೆ ಕಟ್ಟಡದಲ್ಲಿರುವ ಆಕ್ಸಜಿನ್ ಬೆಡ್ ಗಳನ್ನು ಹೊಸ ಕಟ್ಟಡಕ್ಕೆ ಸಿಪ್ಟ್ ಮಾಡಿ ಸಾರ್ವಜನಿಕರ ಸೇವೆಗೆ ಅವಕಾಶ ಮಾಡುಕೊಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷರಾದ ಪಿ.ದೇವಕಿ ಸಣ್ಣಯ್ಯ, ಪುರಸಭೆ ಸದಸ್ಯರಾದ ಕೆ.ಜಿ. ನಿತ್ಯಾನಂದ, ಚಂದ್ರಶೇಖರ ಖಾರ್ವಿ, ಶ್ರೀಧರ ಸೇರಿಗಾರ್, ಅಬ್ಬು ಮಹಮ್ಮದ್, ಅಶ್ಪಾಕ್ ಕೋಡಿ ಉಪಸ್ಥಿತರಿದ್ದರು.
ಇದನ್ನೂ ಓದಿ
► ಕುಂದಾಪುರ ಸರಕಾರಿ ಆಸ್ಪತ್ರೆಯನ್ನು ಕೋವಿಡ್ ನೆಪದಲ್ಲಿ ಸ್ಥಳಾಂತರಿಸುವ ಹಿಂದೆ ಹುನ್ನಾರ ಅಡಗಿದೆ: ಎಂಎಲ್‌ಸಿ ಕೆ. ಪ್ರತಾಪಚಂದ್ರ ಶೆಟ್ಟಿ ಆರೋಪ – https://kundapraa.com/?p=47774 .