ಬೆಂಗಳೂರು-ಕಣ್ಣೂರು-ಕಾರವಾರ ಎಕ್ಸ್‌ಪ್ರೆಸ್ ಪುನರಾರಂಭಿಸಿ: ಕೆ. ವೆಂಕಟೇಶ್ ಕಿಣಿ ಮನವಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಸ್ತುತ ನಿಲುಗಡೆಗೊಳಿಸಿರುವ ಬೆಂಗಳೂರು-ಕಣ್ಣೂರು-ಕಾರವಾರ ಕಂಬೈನ್ಡ್ ಎಕ್ಸ್‌ಪ್ರೆಸ್ ರೈಲನ್ನು ಕೆಲವು ಹೊಂದಾಣಿಕೆ ಮಾಡಿಕೊಂಡು ಪುನರಾರಂಭಗೊಳಿಸಬೇಕು ಎಂದು ದಕ್ಷಿಣ ಪಶ್ಚಿಮ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿಯ ಸದಸ್ಯ ಕೆ. ವೆಂಕಟೇಶ್ ಕಿಣಿ ದಕ್ಷಿಣ ರೈಲ್ವೆಯ ಪ್ರಾದೇಶಿಕ ಮ್ಯಾನೇಜರ್ ಅವರನ್ನು ಒತ್ತಾಯಿಸಿದ್ದಾರೆ.

Click Here

Call us

Call us

ಕಾರವಾರ-ಯಶವಂತಪುರ ರೈಲು ಆರಂಭಿಸಿದ ಬಳಿಕ ವಾರಕ್ಕೆ ಮೂರು ಬಾರಿ ಮೈಸೂರು ಮೂಲಕ ಓಡಾಡುವ 16523/24 ಸಂಖ್ಯೆಯ ಬೆಂಗಳೂರು-ಕಾರವಾರ ರೈಲನ್ನು ರದ್ದುಪಡಿಸಲಾಗಿದೆ. ಅದರಿಂದಾಗಿ ಕರಾವಳಿ ಮೈಸೂರು ನಡುವೆ ರೈಲು ಸಂಪರ್ಕ ಇಲ್ಲದಂತಾಗಿದೆ. ಸಾಂಸ್ಕೃತಿಕ, ಐತಿಹಾಸಿಕ ಮತ್ತು ಪ್ರವಾಸೋದ್ಯಮ ಮಹತ್ವದ ನಗರವಾದ ಮೈಸೂರು ಮತ್ತು ಇತರ ಸ್ಥಳಗಳಿಗೆ ಕರಾವಳಿಯ ಗಣನೀಯ ಸಂಖ್ಯೆಯ ಪ್ರಯಾಣಿಕರು ನಿಲುಗಡೆಗೊಳಿಸಿದ ರೈಲಿನ ಮೂಲಕ ಸಂಚರಿಸುತ್ತಿದ್ದರು. ಈ ರೈಲು ಮಂಗಳೂರು ಕಾರವಾರ ನಡುವಿನ ನಿತ್ಯ ಪ್ರಯಾಣದ ರೈಲಾಗಿಯೂ ಬಳಕೆಯಾಗುತ್ತಿತ್ತು. ಹಲವು ರೈಲ್ವೆ ಪ್ರಯಾಣಿಕ ಸಂಘಗಳು ಈ ರೈಲಿನ ಪುನರಾರಂಭ ಮಾಡಿ ಮಡಗಾಂವ್ ವರೆಗೆ ವಿಸ್ತರಿಸಲು ಒತ್ತಾಯಿಸುತ್ತಿವೆ.

Click here

Click Here

Call us

Visit Now

ಬೆಂಗಳೂರು-ಕಣ್ಣೂರು ನಡುವಿನ 16517/18 ಸಂಖ್ಯೆಯ ರೈಲು ಈಗ ಮೈಸೂರು ಮೂಲಕ ವಾರದಲ್ಲಿ ಮೂರು ದಿನ ಸಂಚರಿಸುತ್ತಿದೆ. ಅದನ್ನು ಈ ಮೊದಲಿನಂತೆ ಕಾರವಾರ-ಕಣ್ಣೂರು ಕಂಬೈನ್ಡ್ ಎಕ್ಸ್‌ಪ್ರೆಸ್ ಆಗಿ ಮಡಗಾಂವ್‌ಗೆ ವಿಸ್ತರಿಸಿ ಮಡಗಾಂವ್-ಮಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲನ್ನು(ಸಂಖ್ಯೆ 22635/22636) ನಿಲ್ಲಿಸಬಹುದು. ಅದರಿಂದ ತೆರವಾದ ಮಾರ್ಗದಲ್ಲಿ ಬೆಂಗಳೂರು-ಕಣ್ಣೂರು-ಕಾರವಾರ-ಮಡಗಾಂವ್ ರೈಲನ್ನು ಓಡಿಸಬಹುದು. ಹಾಗೆಯೇ ವಾರದಲ್ಲಿ 4 ದಿನ ಕುಣಿಗಲ್ ಮೂಲಕ ಸಂಚರಿಸುವ 16511/12 ಸಂಖ್ಯೆಯ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ಅನ್ನು ರದ್ದುಮಾಡಿ ಬೆಂಗಳೂರು-ಕಣ್ಣೂರು ನಡುವಿನ 16517/16523 ಸಂಖ್ಯೆಯ ರೈಲನ್ನು ವಾರದ ಎಲ್ಲ ದಿನಗಳಂದು ಮೈಸೂರು ಮೂಲಕ ಓಡಿಸಬಹುದು. ವಾರದಲ್ಲಿ ಮೂರು ದಿನ ಸಂಚರಿಸುವ 16585 ಸಂಖ್ಯೆಯ ಯಶವಂತಪುರ-ಮಂಗಳೂರು ಸೆಂಟ್ರಲ್ ರೈಲು, ಸಂಚಾರಿಗಳಿಗೆ ಅನುಕೂಲವಾಗಿಲ್ಲ. ಅದು ಯಶವಂತಪುರವನ್ನು 16:25ಕ್ಕೆ ಬಿಟ್ಟು ಮರುದಿನ 4ಕ್ಕೆ ಮಂಗಳೂರು ಸೆಂಟ್ರಲ್‌ಗೆ ಬರುತ್ತದೆ. ಅದನ್ನು ಯಶವಂತಪುರದಿಂದ ತಡವಾಗಿ ಬಿಡಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಬೆಂಗಳೂರು-ಕಾರವಾರ-ಮಡಗಾಂವ್ ರೈಲು ಪುನರಾರಂಭವಾದರೆ ಯಶವಂತಪುರ-ಮಂಗಳೂರು ಸೆಂಟ್ರಲ್ ರೈಲನ್ನು ಬೆಂಗಳೂರಿನಿಂದ ತಡವಾಗಿ ಬಿಟ್ಟು ತೆರವಾದ 16511 ಸಂಖ್ಯೆಯ ಬೆಂಗಳೂರು-ಕಣ್ಣೂರು-ಕಾರವಾರ ರೈಲಿನ ಮಾರ್ಗದಲ್ಲಿ ಮಂಗಳೂರು ಸೆಂಟ್ರಲ್‌ಗೆ ಓಡಿಸಬಹುದು.

ಬೆಂಗಳೂರು-ಕಣ್ಣೂರು-ಕಾರವಾರ ರೈಲನ್ನು ಮಂಗಳೂರು ಸೆಂಟ್ರಲ್ ಮೂಲಕ ಚಲಿಸುವಂತೆ ಮಾಡಿದರೆ ಅದು ಈಗಿರುವ ಮಂಗಳೂರು-ಮಡಗಾಂವ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನ ಪ್ರಯಾಣಿಕರನ್ನು ಒಯ್ಯಲು ಸಾಧ್ಯವಾಗುತ್ತದೆ. ಅದಕ್ಕಾಗಿ ಮಂಗಳೂರಿನಲ್ಲಿ ಮಾತ್ರ ಕೋಚ್‌ಗಳನ್ನು ಪ್ರತ್ಯೇಕಿಸಿ, ಬದಲಿಸಿದರೆ ಸಾಕಾಗುತ್ತದೆ.

ಸೂಚಿಸಿದ ರೈಲಿನ ಪುನರಾರಂಭ ಮತ್ತು ವಿಸ್ತರಣೆಯಿಂದ ಸುಬ್ರಹ್ಮಣ್ಯ ರೋಡ್-ಮಂಗಳೂರು ಮತ್ತು ಮಂಗಳೂರು-ಮಡಗಾಂವ್ ನಡುವಿನ ಪ್ರಯಾಣಿಕರಿಗೂ ಅನುಕೂಲವಾಗುತ್ತದೆ. ಮಡಗಾಂವ್-ದಾದರ್ ಜನಶತಾಬ್ಧಿ ಸೇರಿದಂತೆ ಮಡಗಾಂವ್‌ನಲ್ಲಿ ಅಂತ್ಯವಾಗುವ ಮತ್ತು ಆರಂಭವಾಗುವ ಹಲವು ರೈಲುಗಳಿಗೆ ಇದು ಸಂಪರ್ಕ ರೈಲಾಗುತ್ತದೆ. ಈ ಎಲ್ಲ ಪ್ರದೇಶಗಳ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಲ್ಲದೆ ಜನಪ್ರಿಯವೂ ಆಗುತ್ತದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

Call us

ಯಶವಂತಪುರ-ಮಂಗಳೂರು ರೈಲನ್ನು ಪರಿಷ್ಕರಿಸಿ ಬೆಂಗಳೂರಿನಿಂದ ಚಲಿಸುವಂತೆ ಮಾಡಿದರೆ ಅದು ಮಂಗಳೂರು ತಲಪುವ ವೇಳೆ ಉತ್ತರ ಮಲಬಾರ್ ಸಂಪರ್ಕಿಸುವ ರೈಲುಗಳಿರುವುದರಿಂದ ಆ ದಿಕ್ಕಿಗೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.

ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ರೈಲು ಆರಂಭವಾಗುವ ಮೊದಲು 16517/18 ಸಂಖ್ಯೆಯ ರೈಲು ವಾರದ ಎಲ್ಲ ದಿನಗಳಂದು ಸಂಚರಿಸುತ್ತಿತ್ತು. ಆ ಮೂಲಕ ಮಂಗಳೂರು ಸೆಂಟ್ರಲ್-ಕಣ್ಣೂರು ನಡುವಿನ ಪ್ರಯಾಣಿಕ ರೈಲಾಗಿಯೂ ಬಳಕೆ ಆಗುತ್ತಿತ್ತು. ಅದನ್ನು ಪುನರಾರಂಭ ಮಾಡಿದರೆ ಆ ಉದ್ದೇಶವೂ ಈಡೇರಿ, ಪ್ರಯಾಣಿಕರಿಗೆ ಅತ್ಯಧಿಕ ಅನುಕೂಲ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ. ಕೋರಿದ ರೈಲು ಮತ್ತು ಬದಲಾಯಿಸಿಬೇಕಾದ ರೈಲುಗಳಿಗೆ ವೆಂಕಟೇಶ್ ಕಿಣಿ ಹೊಸ ವೇಳಾಪಟ್ಟಿಯನ್ನೂ ಪತ್ರದಲ್ಲಿ ಸೂಚಿಸಿದ್ದಾರೆ.

 

Leave a Reply

Your email address will not be published. Required fields are marked *

eleven + seven =