ಅಕ್ಕ ಸಮ್ಮೇಳನದಲ್ಲಿ ‘ರಿಸರ್ವೇಶನ್’ ಚಿತ್ರ ಪ್ರದರ್ಶನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅ.31ರಿಂದ ಸೆ.2ರ ತನಕ ಅಮೇರಿಕಾದ ಟೆಕ್ಸಾನ್ ರಾಜ್ಯದ ಡಲ್ಲಾಸ್ ನಗರದಲ್ಲಿ ನಡೆಯುತ್ತಿರುವ ಅಮೇರಿಕಾ ಕನ್ನಡ ಒಕ್ಕೂಟಗಳ ಆಗರ ‘ಅಕ್ಕ’ ಸಮ್ಮೇಳನದಲ್ಲಿ ಕುಂದಾಪುರದ ಕಲಾವಿದ ಯಾಕೂಬ್ ಖಾದರ್ ಗುಲ್ವಾಡಿ ನಿರ್ಮಿಸಿ, ನಿಖಿಲ್ ಮಂಜೂ ನಿರ್ದೇಶಿಸಿರುವ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ‘ರಿಸರ್ವೇಶನ್’ ಪ್ರದರ್ಶನ ಕಾಣಲಿದೆ.

ಕುಂದಾಪ್ರ ಕನ್ನಡ ಭಾಷೆಯಲ್ಲಿ ನಿರ್ಮಾಣಗೊಂಡ ರಿಸರ್ವೇಶನ್ ಚಿತ್ರ ಈಗಾಗಲೇ ಅಮೇರಿಕಾದ ಮೆಲ್ಬೋರ್ನ್, ರಷ್ಯಾದ ಕಝಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ, ಭಾರತದ ಕೋಲ್ಕತ್ತ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ಕೆಗೊಂಡು ಪ್ರದರ್ಶನ ಕಂಡಿದ್ದು, ಲಂಡನ್ ಬ್ರಿಸ್ಟೆಲ್ ಕನ್ನಡಿಗರಿಗಾಗಿ ವಿಶೇಷ ಪ್ರದರ್ಶನವನ್ನೂ ಕಂಡಿದೆ.

ಹಲವು ಸಂಸ್ಥೆಗಳ ಗೌರವ ಮನ್ನಣೆಗೆ ಪಾತ್ರವಾಗಿರುವ ಚಿತ್ರ ಅಕ್ಕಾ ಸಮ್ಮೇಳನದಲ್ಲಿ ಪ್ರದರ್ಶನಗೊಂಡು ಬಳಿಕ ಸಂವಾದವೂ ನಡೆಯಲಿದೆ.

ಬಹುಮುಖ ಪ್ರತಿಭೆಯಾದ ಯಾಕೂಬ್ ಖಾದರ್ ಗುಲ್ವಾಡಿ ಅವರು ಹತ್ತಾರು ದೇಶ ಸುತ್ತಿ, ಪುಸ್ತಕ ಬರೆದು, ಕಲೆ ಸಾಹಿತ್ಯ ಸಾಂಸ್ಕೃತಿಕ ರಂಗದಲ್ಲಿಯೂ ತೊಡಗಿಸಿಕೊಂಡು, ಸಿನೆಮಾ ನಿರ್ಮಾಣದಲ್ಲಿ ತನ್ನ ಛಾಪು ಮೂಡಿಸಿದವರು.

Leave a Reply

Your email address will not be published. Required fields are marked *

3 × 3 =