ನಾವುಂದ ಕಾಲೇಜಿನಲ್ಲಿ ಸಾಪ್ಟ್ ಸ್ಕಿಲ್‌ ತರಬೇತಿ

Call us

ನಾವುಂದ: ನಾವುಂದ ರಿಚರ್ಡ್‌ ಅಲ್ಮೇಡಾ ಮೆಮೋರಿಯಲ್‌ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ. ಮತ್ತು ಬಿ.ಬಿ.ಎಂ. ತರಗತಿಯ ವಿದ್ಯಾರ್ಥಿ ಗಳಿಗೆ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಕೆರಿಯರ್‌ ಗೈಡೆನ್ಸ್‌ ವಿಭಾಗದ ಮುಖ್ಯಸ್ಥ ಪ್ರೊ| ಚಂದನ್‌ ರಾವ್‌ ಅವರು ಸಾಪ್ಟ್ ಸ್ಕಿಲ್‌ ತರಬೇತಿಯಲ್ಲಿ ವಿಶೇಷವಾಗಿ ಇಂದಿನ ಸ್ಪರ್ಧಾತ್ಮಕ ಉದ್ಯೋಗ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಿದ್ಧಮಾಡಿಕೊಳ್ಳುವುದರ ಬಗ್ಗೆ ಉಪನ್ಯಾಸ ನೀಡಿದರು.

Call us

Call us

ಈ ತರಬೇತಿಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷರಾಗಿ ಕಾಲೇಜಿನ ಸಂಚಾಲಕ ಸಿಲ್ವೆಸ್ಟರ್‌ ಡಿ’ಅಲ್ಮೇಡಾ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ| ಎಸ್‌. ನಾರಾಯಣ್‌ ರಾವ್‌ ತರಬೇತಿಯ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವಿದ್ಯಾರ್ಥಿನಿ ಶೈಲಿನ್‌ ಕಾರ್ಯಕ್ರಮ ನಿರ್ವಹಿಸಿದರು ವಿದ್ಯಾರ್ಥಿ ನಾಗೇಂದ್ರ ಸ್ವಾಗತಿಸಿದರು. ವಿದ್ಯಾರ್ಥಿ ಪ್ರತಾಪಚಂದ್ರ ಶೆಟ್ಟಿ ಅವರು ತರಬೇತುದಾರರ ಪರಿಚಯವನ್ನು ನೀಡಿದರು. ಸಂದೇಶ ಅವರು ವಂದಿಸಿದರು.

Leave a Reply

Your email address will not be published. Required fields are marked *

2 × 5 =