ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಗುಲ್ವಾಡಿ ಗ್ರಾಮ ಕೌಜೂರು ಬಳಿ ಮುತಾಲಿಬ್ ಎಂಬವರ ಮನೆ ಹಿಂಭಾಗ ಅಕ್ರಮ ದಾಸ್ತಾನು ಮಾಡಿದ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭಾನುವಾರ ರಾತ್ರಿ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಮುತಾಲಿಬ್ ಎಂಬವರ ಮನೆ ಹಿಂಬಾಗದಲ್ಲಿ ಶೇಖರಿಸಿಟ್ಟ 1.86 ಲಕ್ಷ ರೂ. ಮೌಲ್ಯದ 248 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಂಡ್ಲೂರು ಎಸ್ಸೈ ರಾಜ ಕುಮಾರ್, ಸುಧಾ ಪ್ರಭು ಕುಂದಾಪುರ ಆಹಾರ ಇಲಾಖೆ ನಿರೀಕ್ಷಕ ಹೆಚ್. ಎಸ್. ಸುರೇಶ್ ದಾಳಿ ನಡೆಸಿದ್ದು, ಕಂಡ್ಲೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.