ಕುಂದಾಪುರ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ಅಕ್ಷಯ ರಾವ್

Click Here

Call us

Call us

ಕುಂದಾಪುರ ಆರ್.ಎನ್. ಶೆಟ್ಟಿ ಪಿಯು ಕಾಲೇಜಿನ ವಿದ್ಯಾರ್ಥಿ ಅಕ್ಷಯ

Call us

Call us

Visit Now

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಟ್ಯೂಷನ್‌ಗೆ ತೆರಳಿಲ್ಲ. ಓದಲು ಟೈಮ್ ಟೇಬಲ್ ಕೂಡ ಹಾಕಿಕೊಂಡಿಲ್ಲ. ಆದರೇನಂತೆ ನಿಷ್ಠೆಯಿಂದಲೇ ಓದಿ ಶೇ.98.83 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾನೆ ಕುಂದಾಪುರ ಎಜುಕೇಶ್‌ನ ಟ್ರಸ್ಟ್ ಆಡಳಿತಕ್ಕೊಳಪಟ್ಟ ಆರ್.ಎನ್. ಶೆಟ್ಟಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅಕ್ಷಯ ಜಿ. ರಾವ್

Click Here

Click here

Click Here

Call us

Call us

ಸಿದ್ದಾಪುರ ಜನ್ಸಾಲೆಯ ವಕೀಲಿ ವೃತ್ತಿಯಲ್ಲಿರುವ ಗುರುಮೂರ್ತಿ ರಾವ್ ಹಾಗೂ ಗೀತಾ ದಂಪತಿಗಳ ದ್ವಿತೀಯ ಪುತ್ರನಾದ ಅಕ್ಷಯ ಜಿ. ರಾವ್, 593 ಅಂಕ ಗಳಿಸಿ ರಾಜ್ಯಕ್ಕೇ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾನೆ. ಆಕ್ಷಯ್ ಅವರ ಸಹೋದರಿ ಆಶ್ರೀತಾ ರಾವ್, ಆರ್.ಎನ್. ಶೆಟ್ಟಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕಂದಿನಂದಲೂ ಓದಿನಲ್ಲಿ ನಿಪುಣನಾಗರುವ ಅಕ್ಷಯ ಎಸ್.ಎಸ್‌ಎಲ್.ಸಿಯಲ್ಲಿಯೂ 96% ಅಂಕಗಳಿದ್ದನು. ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿಯೂ 96% ಅಂಕಗಳಿಸಿ ಉತ್ತಮ ಸಾಧನೆಗೈಯುವ ಭರವಸೆ ಹುಟ್ಟುಹಾಕಿದ್ದ. ಇದೀಗ ದ್ವಿತೀಯ ಪಿಯುಸಿಯಲ್ಲಿ ಟ್ಯೂಷನ್ ಪಡೆಯದೇ, ಸ್ವಂತ ಪರಿಶ್ರಮದಿಂದ ಅತಿ ಹೆಚ್ಚು ಅಂಕಗಳಿಸಿ ಮಾದರಿಯಾಗಿದ್ದಾನೆ. ಸಬ್ಜೆಕ್ಟ್ ಓದಿನೊಂದಿಗೆ ಸಂಗೀತ, ಇತರೇ ಓದಿನಲ್ಲಿ ಆಸಕ್ತಿ ಹೊಂದಿರುವ ಅಕ್ಷಯ ಸಂಗೀತದಲ್ಲಿ ಪ್ರಾಥಮಿಕ ಕಲಿಕೆಯನ್ನೂ ಮುಗಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ

ನಿರೀಕ್ಷೆಯ ಅಂಕಗಳಿಸಿರುವುದು ಖುಷಿ ನೀಡಿದೆ. ಪೋಷಕರ ಸಹಕಾರ ಹಾಗೂ ಆರ್‌ಎನ್‌ಎಸ್ ಕಾಲೇಜಿನ ಉಪನ್ಯಾಸಕರುಗಳ ಮಾರ್ಗದರ್ಶನದಿಂದಾಗಿ ಈ ಸಾಧನೆಗೈಯಲು ಸಾಧ್ಯವಾಗಿದೆ. ಪ್ರತಿದಿನವೂ ಇಂತಿಷ್ಟೇ ಹೊತ್ತು ಓದಬೇಕೆಂದು ಟೈಮ್ ಟೇಬಲ್ ಹಾಕಿಕೊಂಡಿರಲಿಲ್ಲ. ಆದರೆ ನಿಯಮಬದ್ದವಾಗಿ ಓದುತ್ತಿದ್ದೆ. ಎಂದು ಹೇಳಿಕೊಂಡಿರುವ ಅಕ್ಷಯ್, ಮುಂದೆ ಇಂಜಿನಿಯರಿಂಗ್ ಪದವಿಯಲ್ಲಿ ಇ&ಸಿ ವಿಭಾಗವನ್ನು ಆಯ್ದುಕೊಳ್ಳುವುದಾಗಿ ತಿಳಿಸಿದ್ದಾನೆ.

ತನ್ನ ಮಗ ನಿರೀಕ್ಷೆಗಿಂತ ಹೆಚ್ಚು ಅಂಕಗಳಿಸಿರುವುದು ಆಚ್ಚರಿಯನ್ನುಂಟುಮಾಡಿದೆ. ಆತನಿಗೆ ಮನೆಯಲ್ಲಿ ಓದಬೇಕೆಂಬ ಒತ್ತಡ ಹೇರುತ್ತಿರಲಿಲ್ಲ. ಕಾಲೇಜಿಗೆ ಹೋಗಿ ಬರುವ ಎರಡು ಗಂಟೆ ಪ್ರಯಾಣದ ಹೊರತಾಗಿ ಸಮಯ ಹೊಂದಿಸಿಕೊಂಡು ಆಸಕ್ತಿಯಿಂದ ಓದುತ್ತಿದ್ದ. ಅವನ ಶ್ರಮಕ್ಕೆ ಪ್ರತಿಫಲ ಸಿಕ್ಕಂತಾಗಿದೆ ಎಂದು ಆತನ ತಂದೆ ಗುರುಮೂರ್ತಿ ರಾವ್ ಹರ್ಷ ವ್ಯಕ್ತಪಡಿಸಿದ್ದಾರೆ. / ಕುಂದಾಪ್ರ ಡಾಟ್ ಕಾಂ ವರದಿ/

[quote font_size=”16″ bgcolor=”#ffffff” bcolor=”#dd3333″ arrow=”yes”]ಕುಂದಾಪುರ ಎಜುಕೇಶನ್ ಸೊಸೈಟಿಯ ಆಡಳಿತಕ್ಕೊಳಪಟ್ಟ ಆರ್.ಎನ್. ಶೆಟ್ಟಿ ಪಿಯು ಕಾಲೇಜಿನ ವಿಜ್ಞಾನ ವಿದ್ಯಾರ್ಥಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಗಳಿಸಿರುವುದು ಹೆಮ್ಮೆ ತಂದಿದೆ. ಆರ್.ಎನ್. ಶೆಟ್ಟಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಸತತವಾಗಿ ಪಿಯುಸಿಯಲ್ಲಿ ಸಾಧನೆಗೈಯುತ್ತಿದ್ದಾರೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಕಲ್ಪಸಿರುವುದು ಸಾಧನೆಗೆ ಸಹಕಾರಿಯಾಗಿದೆ. – ಬಿ.ಎಂ ಸುಕುಮಾರ್ ಶೆಟ್ಟಿ, ಅಧ್ಯಕ್ಷರು ಕುಂದಾಪುರ ಎಜುಕೇಶನ್ ಸೊಸೈಟಿ[/quote]

Akshay-g-rao

Leave a Reply

Your email address will not be published. Required fields are marked *

eleven + 7 =