ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕನ್ನಡ ವಿಶ್ವಾವಿದ್ಯಾಲಯ, ಹಂಪಿಯ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಫಲಿತಾಂಶ ಪ್ರಕಟವಾಗಿದ್ದು ಬೈಂದೂರು ತಾಲೂಕು ಯಳಜಿತ್ ಗ್ರಾಮದ ಬಾಬು ಪೂಜಾರಿ ಮತ್ತು ಗುಲಾಬಿ ದಂಪತಿಯ ಮಗ ರೂಪೇಶ್ ಪೂಜಾರಿ ಮೂರನೇ ರ್ಯಾಂಕ್ ಪಡೆದಿದ್ದಾರೆ.ಇವರು ಸರಕಾರಿ ಹಿ.ಪ್ರಾ.ಶಾಲೆ ಯಳಜಿತ್,ಮೂಕಾಂಬಿಕಾ ಪ್ರೌಢಶಾಲೆ ಗೋಳಿಹೊಳೆ ಹಾಗೂ ಭಂಡರ್ಕಾರ್ಸ್ ಕಾಲೇಜು ಕುಂದಾಪುರದಲ್ಲಿ ಬಿ.ಎ ಪದವಿ ಶಿಕ್ಷಣವನ್ನು ಪಡೆದಿದ್ದರು. ಪ್ರಸ್ತುತ ಸುದ್ದಿ ವಾಹಿನಿಯಲ್ಲಿ ವರದಿಗಾರರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಎಂಸಿಜೆಯಲ್ಲಿ ರೂಪೇಶ್ ಪೂಜಾರಿಗೆ ಮೂರನೇ ರ್ಯಾಂಕ್
