ರೋಟರಿ ಜಿಲ್ಲೆ 3182, ಝೋನ್-01: ಕೋವಿಡ್-19 ವೈದ್ಯಕೀಯ ಪರಿಕರಗಳ ದೇಣಿಗೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಜಿಲ್ಲೆ 3182, ಝೋನ್-01 ರ ವತಿಯಿಂದ ಸುಮಾರು 1.2 ಲಕ್ಷ ರೂ. ಮೌಲ್ಯದ ಪಿಪಿಇ ಕಿಟ್, ಎನ್-95 ಮಾಸ್ಕ್ ಹಾಗೂ ಟ್ರಬಲ್ ಲೇಯರ್ ಮಾಸ್ಕ್‌ಗಳನ್ನು ಮಾಜಿ ಜಿಲ್ಲಾ ಗವರ್ನರ್ ಅಭಿನಂದನ್ ಎ ಶೆಟ್ಟಿ ಮತ್ತು ಝೋನ್ 01 ಸಹಾಯಕ ಗವರ್ನರ್ ರವಿರಾಜ್ ಶೆಟ್ಟಿ ಇವರು ತಾಲೂಕು ಆರೋಗ್ಯ ಅಧಿಕಾರಿಯಾದ ಡಾ| ನಾಗಭೂಷಣ ಉಡುಪ ಹೆಚ್ ಇವರಿಗೆ ಹಸ್ತಾಂತರಿಸಿದರು.

Call us

ಈ ಸಂದರ್ಭದಲ್ಲಿ ಝೋನ್-01 ರ ವಲಯ ಸೇನಾನಿಗಳಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಚಂದ್ರಶೇಖರ್ ಬಿ. ಎಮ್, ನಾರಾಯಣ ನಾಯ್ಕ್ ಮತ್ತು ವಿವಿಧ ರೋಟರಿ ಕ್ಲಬ್‌ನ ಅಧ್ಯಕ್ಷರುಗಳಾದ ಡಾ| ರಾಜರಾಮ ಶೆಟ್ಟಿ (ಕುಂದಾಪುರ), ದೇವಾರಾಜ (ದಕ್ಷಿಣ), ಶಶಿಧರ ಶೆಟ್ಟಿ (ಮಿಡ್‌ಟೌನ್), ಭಾಸ್ಕರ್ ಕೆ (ಸನ್‌ರೈಸ್), ರಾಜು ಪೂಜಾರಿ ಎಮ್ (ರಿವರ್ ಸೈಡ್), ಶಿವಾನಂದ ಪೂಜಾರಿ (ಗಂಗೊಳ್ಳಿ), ಪ್ರಕಾಶ್ ಭಟ್ (ಬೈಂದೂರು), ಉದಯ ಕನ್ನಂತ (ಸಿದ್ದಾಪುರ), ಡಾ| ಉತ್ತಮ್‌ಕುಮಾರ್ ಶೆಟ್ಟಿ ಮತ್ತು ಸಂತೋಷ್ ಕೋಣಿ ಇವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

four × 4 =