ಶಿವಮೊಗ್ಗ – ಕುಂದಾಪುರ ಸಂಪರ್ಕ ರಸ್ತೆ ಅಭಿವೃದ್ಧಿಗೆ ಒಟ್ಟು 12 ಕೋಟಿ ರೂ. ಅನುದಾನ ಮಂಜೂರು

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯ ಹೆದ್ದಾರಿ ರಸ್ತೆ ಮತ್ತು ಸೇತುವೆ ಸುಧಾರಣೆ ಕಾಮಗಾರಿ ಗಳ ಲೆಕ್ಕಶೀರ್ಷಿಕೆ 5054-03-337-0-17-154ರಡಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿವಮೊಗ್ಗ – ಕುಂದಾಪುರ ಸಂಪರ್ಕ  ರಸ್ತೆ ಅಭಿವೃದ್ಧಿಗೆ ಒಟ್ಟು ರೂ.12 ಕೋಟಿ ಮೊತ್ತದ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ.

Click Here

Call us

Call us

ಬೈಂದೂರು ವಿಧಾನಸಭಾ ಕ್ಷೇತ್ರ ತೀರ್ಥಹಳ್ಳಿ- ಕುಂದಾಪುರ ರಾಜ್ಯ ಹೆದ್ದಾರಿ-52ರಲ್ಲಿ ಕುಂದಾಪುರ ತಾಲೂಕಿನಲ್ಲಿ ಕಿ.ಮೀ.46.40 ರಿಂದ 48.40 ರವರೆಗೆ ರಸ್ತೆ ಅಭಿವೃದ್ದಿ ಹಾಗೂ ಬಾಳೆಬರೆ ಘಾಟ್ ನಿಂದ 7 ಕಿ ಮಿ. ವೈಟ್ ಟ್ಯಾಪಿಂಗ್ ಕಾಮಗಾರಿಗೆ ರೂ.300.00 ಲಕ್ಷ, ಶಿವಮೊಗ್ಗ ತಾಲೂಕು ಹಲಗೇರಿ-ಹುಲಿಕಲ್ ರಸ್ತೆ(ಎಸ್ ಹೆಚ್-26) ರ ಸರಾಪಳಿ 75.62 ರಿಂದ 86.32 ಕಿ ಮೀ ವರೆಗೆ ಆಯ್ದ ಭಾಗಗಳಲ್ಲಿ ಡಾಂಬರೀಕರಣ ಮಾಡಿ ಅಭಿವೃದ್ದಿ ಪಡಿಸುವ ಕಾಮಗಾರಿ ಹಾಗೂ ಅಯನೂರಿನಿಂದ ಸುಡುರುವರೆಗೆ ಕಾಮಗಾರಿ ರೂ.300.00 ಲಕ್ಷ, ಹೊಸನಗರ ತಾಲೂಕು ಅಲಗೆರಿಯಿಂದ ಹಾಲ್ಕಲ್ ರಾಜ್ಯ ಹೆದ್ದಾರಿ 26ರ ಸರಪಳಿ 86.32 ರಿಂದ 122.50 ಕಿ.ಮೀ. ವರೆಗೆ ಹಾಗೂ ಸುಡೂರಿನಿಂದ ಹೊಸನಗರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವರೆಗೆ ಆಯ್ದ ಭಾಗಗಳಲ್ಲಿ ಡಾಂಬರೀಕರಣ ಹಾಗು ಅಭಿವೃದ್ದಿ ಕಾಮಗಾರಿಗೆ ರೂ.400.00 ಲಕ್ಷ, ಹೊಸನಗರ ತಾಲೂಕು ತೀರ್ಥಹಳ್ಳಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿ 52 ಸರಪಳಿ 29.70 ರಿಂದ 35.90 ಕಿ.ಮೀ ವರೆಗಗೆ ಡಾಂಬರೀಕರಣ ಮತ್ತು ಅಭಿವೃದ್ದಿ ಹಾಗೂ ನಗರ ಕಾನಗೀಡಿನಿಂದ ಮಾಸ್ತಿಕಟ್ಟೆವರೆಗೆ ಅಗಲೀಕರಣ ಹಾಗೂ ಡಾಂಬರೀಕರಣ ಕಾಮಗಾರಿಗೆ ರೂ.200.00 ಲಕ್ಷ ಮಂಜೂರಾಗಿದೆ.

Click here

Click Here

Call us

Visit Now

ಈ ಕಾಮಗಾರಿಗಳ ಅನುಷ್ಟಾನದಿಂದ ಕುಂದಾಪುರ ಮತ್ತು ಬೈಂದೂರು ಭಾಗದ ಸಾರ್ವಜನಿಕರಿಗೆ ಶಿವಮೊಗ್ಗ ಜಿಲ್ಲೆಗೆ ಸುಗಮ ಸಂಪರ್ಕ ಹೊಂದಲು ಸಹಕಾರಿಯಾಗುತ್ತದೆ. ಕಾಮಗಾರಿ ಮಂಜೂರು ಮಾಡಿಸಲು ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಶ್ರಮಿಸಿದ್ದರು ಎಂದು ಸಂಸದರ ಕಛೇರಿ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

seventeen + nine =