ಗ್ರಾಮೀಣ ಪ್ರದೇಶದಲ್ಲೂ ಉದ್ಯಮಕ್ಕೆ ವಿಪುಲ ಆವಕಾಶ: ಎಸ್. ಶ್ರೀಶಾಂತ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗ್ರಾಮೀಣ ಪ್ರದೇಶದಲ್ಲೂ ಉದ್ಯಮ ಕ್ಷೇತ್ರಕ್ಕೆ ವಿಪುಲ ಆವಕಾಶಗಳಿವೆ ದಕ್ಷಿಣ ಭಾರತದ ಪ್ರಸಿದ್ದ ತೀರ್ಥ ಕ್ಞೇತ್ರವಿರುವ ಕೊಲ್ಲೂರು ಸನ್ನಿಧಿಯ ಬ್ಯೆಂದೂರಿನಲ್ಲಿ ಆರಂಭಗೊಂಡಿರುವ ರುಪೀ ಮಾಲ್ ಉದ್ಯಮ ಯಶಸ್ವಿಯಾಗಲಿ ಎಂದು ಕ್ರಿಕೆಟಿಗ ಹಾಗೂ ನಟ ಎಸ್. ಶ್ರೀಶಾಂತ್ ಹೇಳಿದರು.

Call us

Call us

Visit Now

ಅವರು ಆರ್. ಎಸ್. ವೆಂಚರ‍್ಸ್ ಪ್ರವರ್ತಿತ ಬೈಂದೂರಿನ ಪ್ರಥಮ ವ್ಯಾಪಾರ ಮಳಿಗೆ ’ರುಪೀ ಮಾಲ್‌ನ್ನು ಉದ್ಘಾಟಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನನ್ನ ಪರವಾದ ತೀರ್ಮಾನ ತೆಗೆದುಕೊಂಡಿದ್ದು, ಸದ್ಯದಲ್ಲಿ ನಾನು ಕ್ರಿಕೆಟ್‌ಗೆ ಹಿಂತಿರುಗುತ್ತಿದ್ದೇನೆ, ಶೀಘ್ರ ದಲ್ಲಿ ಕೇರಳ ರಣಜಿ ಪಂದ್ಯದಲ್ಲಿ ಆಡಲಿದ್ದು ಇತರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿಯೂ ತೊಡಗಿಸಿಕೊಳ್ಳಲಿದ್ದೇನೆ ಎಂದರು.

Click here

Call us

Call us

ನನಗೆ ಸಕ್ರೀಯ ರಾಜಕಾರಣದಲ್ಲಿ ಆಸಕ್ತಿಯಿದೆ. ದೇಶದ ರಾಜಕೀಯ ವ್ಯವಸ್ಥೆ ಸರಿಯಾದ ಮಾರ್ಗದಲ್ಲಿ ನಡೆಯಬೇಕಾದರೆ ಯುವಕರು ಹೆಚ್ಚಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡು ದೇಶ ಸೇವೆ ಮಾಡಬೇಕು ಎಂದರು.

ಯಡ್ತರೆ ಗ್ರಾ.ಪಂ. ಅಧ್ಯಕ್ಷೆ ಮೂಕಾಂಬು ದೇವಾಡಿಗ ಅವರು ಕಿಡ್ಸ್ ಜೋನ್ ಉದ್ಘಾಟಿಸಿದರು. ಬೈಂದೂರು ಪ್ಯಾಲೇಸ್‌ನ ಮಾದರಿ ಫ್ಲಾಟ್‌ನ್ನು ಪಡುವರಿ ಗ್ರಾ.ಪಂ ಅಧ್ಯಕ್ಷೆ ದೀಪಾ ಶೆಟ್ಟಿ ಹಾಗೂ ಗ್ರಾ.ಪಂ. ಉಪಾಧ್ಯಕ್ಷ ಸದಾಶಿವ ಪಡುವರಿ ಉದ್ಘಾಟಿಸಿದರು. ಫ್ಯಾಶನ್ ಸ್ಟೋರನ್ನು ಮಿಸ್ ಸೌತ್ ಇಂಡಿಯಾ ೨೦೧೯ ನಿಕಿತಾ ಥೋಮಸ್ ಅವರು ಉದ್ಘಾಟಿಸಿ ಶುಭ ಹಾರೈಸಿದರು.

ಆರ್. ಎಸ್. ವೆಂಚರ‍್ಸ್ ಪ್ರವರ್ತಕರಾದ ರಾಜೀವ್ ಕುಮಾರ ಪಾಲುದಾರರಾದ ಕೆ. ವೆಂಕಟೇಶ ಕಿಣಿ, ಸಾಜು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

twenty + three =