ರುಪೀ ಮಾಲ್’ ಶುಭಾರಂಭ: ಕ್ರೆಡಿಟ್ ಕಾರ್ಡ್‌ ಸೌಲಭ್ಯಕ್ಕೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಮುಖ್ಯರಸ್ತೆಯ ಸಿಟಿ ಪಾಯಿಂಟ್‌ನಲ್ಲಿ ಯುಗಾದಿಯಂದು ಶುಭಾರಂಭಗೊಂಡ ’ರುಪೀ ಮಾಲ್’ನಲ್ಲಿ ಗ್ರಾಹಕ ಗಿರೀಶ್ ಗಾಣಿಗ ಅವರಿಗೆ ಕ್ರೆಡಿಟ್ ಕಾರ್ಡ್ ವಿತರಿಸುವ ಮೂಲಕ ಕ್ರೆಡಿಟ್ ಕಾರ್ಡ್ ಸೌಲಭ್ಯಕ್ಕೆ ಚಾಲನೆ ನೀಡಲಾಯಿತು. ಕಾಮಾಕ್ಷೀ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ಹಾಗೂ ರುಪೀ ಮಾಲ್‌ನ ಪ್ರವರ್ತಕರಾದ ಸಿ. ರಾಜೀವ್ ಕುಮಾರ್ ಹೆಸರು ನೊಂದಾಯಿಸಿದ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ಸಾಂಕೇತಿಕವಾಗಿ ವಿತರಿಸಿದರು.

ರುಪೀ ಮಾಲ್‌ನ ಪ್ರವರ್ತಕ ಸಿ. ರಾಜೀವ ಕುಮಾರ್ ಬಳಿಕ ಮಾತನಾಡಿ ಕಾಮಾಕ್ಷೀ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಹಯೋಗದಿಂದಗೆ ವಿತರಿಸಲಾಗುತ್ತಿರು ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ರುಪೀ ಮಾಲ್‌ನ ಗ್ರಾಹಕರು ಪಡೆದುಕೊಳ್ಳಬಹುದಾಗಿದ್ದು, ತಮ್ಮ ಅಗತ್ಯ ಉತ್ಪನ್ನಗಳನ್ನು ಕೊಂಡುಕೊಳ್ಳಬುದಾಗಿದೆ. ಇದರಲ್ಲಿ ಇಎಂಐ ಸೌಲಭ್ಯವೂ ಇರುವುದರಿಂದ ಗ್ರಾಹಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಯುಗಾದಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಎಲ್ಲಾ ವಿಭಾಗದ ವಸ್ತುಗಳು ಮೆಟ್ರೋ ನಗರಗಳಿಗಿಂತ ಕಡಿಮೆ ದರದಲ್ಲಿ ಲಭ್ಯವಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಆರಂಭದಲ್ಲಿಯೇ ಗ್ರಾಹಕರ ಪ್ರತಿಕ್ರಿಯೆ ಉತ್ತಮವಾಗಿದ್ದು, ಮುಂದೆಯೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಎಂದರು.

 

Leave a Reply

Your email address will not be published. Required fields are marked *

one × three =