ಬೈಂದೂರು: ಸೆ.13ರಂದು ‘ರುಪೀ ಮಾಲ್’ ಶುಭಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಆರ್. ಎಸ್. ವೆಂಚರ‍್ಸ್ ಪ್ರವರ್ತಿತ ಬೈಂದೂರಿನ ಪ್ರಥಮ ಶಾಪಿಂಗ್ ಮಳಿಗೆ ’ರುಪೀ ಮಾಲ್’ ಸೆಪ್ಟೆಂಬರ್ 13ರಂದು ಅಧಿಕೃತವಾಗಿ ಆರಂಭಗೊಳ್ಳಲಿದೆ. ಭಾರತೀಯ ಕ್ರಿಕೆಟಿಗ ಹಾಗೂ ನಟ ಎಸ್. ಶ್ರೀಶಾಂತ್ ರುಪೀ ಮಾಲ್ ಉದ್ಘಾಟನೆಗೈಯಲಿದ್ದಾರೆ. ವೈವಿಧ್ಯಮಯ ಬಟ್ಟೆಗಳ ಭಂಡಾರ ’ಫ್ಯಾಶನ್ ಸ್ಟೋರ್’ನ್ನು ಮಿಸ್ ಸೌತ್ ಇಂಡಿಯಾ ನಿಖಿತಾ ಥೋಮಸ್ ಉದ್ಘಾಟಿಸಲಿದ್ದಾರೆ.

50,000 ಚದರ ಅಡಿ ವಿಸ್ತೀರ್ಣದ ಮಾಲ್‌ನ ಎರಡನೇ ಮಳಿಗೆಯಲ್ಲಿ ಅತ್ಯಾಧುನಿಕ ಕ್ರೀಡಾ ಸಾಮಾಗ್ರಿಗಳನ್ನೊಳಗೊಂಡ ’ಕಿಡ್ಸ್ ಝೋನ್’ ಆರಂಭಗೊಳ್ಳಲಿದ್ದು ಮಕ್ಕಳ ಮನೋರಂಜನಾ ಕೇಂದ್ರವಾಗಿ ಮಾರ್ಪಾಡಾಗಲಿದೆ. ಬೈಂದೂರು ಹಾಗೂ ಸುತ್ತಲಿನ ಊರುಗಳಲ್ಲಿ ಇದೇ ಮೊದಲ ಭಾರಿಗೆ ದೊಡ್ಡ ಮನೋರಂಜನಾ ತಾಣ ಆರಂಭಗೊಳ್ಳುತ್ತಿದೆ.

ಮಾಲ್‌ನಲ್ಲಿ ಆರಂಭಗೊಳ್ಳಲಿರುವ ಬೃಹತ್ ’ಫ್ಯಾಶನ್ ಸ್ಟೋರ್’ನಲ್ಲಿ ಮೆಟ್ರೋ ನಗರಗಳ ಎಲ್ಲಾ ಫ್ಯಾಶನ್‌ನ ಬಟ್ಟೆಗಳು ಲಭ್ಯವಿರಲಿದೆ. ಮದುವೆ ಬಟ್ಟೆಗಳ ವಿಭಾಗದಲ್ಲಿ ವಿವಿಧ ನಮೂನೆಯ ಮದುವೆ ಬಟ್ಟೆಗಳು ಕೈಗೆಟಕುವ ದರದಲ್ಲಿ ಲಭ್ಯವಿರಲಿದೆ. ರುಪೀ ಮಾಲ್ ’ಹೈಪರ್ ಮಾರ್ಕೆಟ್’ನ್ನು ಒಳಗೊಂಡಿದ್ದು ಮನೆಗೆ ಅಗತ್ಯವಾದ ಎಲ್ಲಾ ಸಾಮಾಗ್ರಿಗಳು, ಫ್ಯಾನ್ಸಿ ಸ್ಟೋರ್, ಪೂಟ್‌ವೇರ್ ಸ್ಟೋರ್, ಗೃಹೋಪಯೋಗಿ ವಸ್ತುಗಳು, ಪ್ರಿಮಿಯಂ ವಾಚ್ ಶೋರೂಮ್, ಶೋಕೇಸ್ ಗಿಫ್ಟ್ ಐಟಮ್ ಸೆಂಟರ್ ಮೊದಲಾದವುಗಳು ಉದ್ಘಾಟನೆಯ ದಿನದಿಂದಲೇ ಕಾರ್ಯಾರಂಭಗೊಳ್ಳಲಿದೆ. ರುಪೀ ಮಾಲ್ ಉದ್ಘಾಟನೆಯ ಅಂಗವಾಗಿ ಗ್ರಾಹಕರಿಗೆ 50% ತನಕ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.

ರುಪೀ ಮಾಲ್‌ನ ಉದ್ಘಾಟನೆಯ ಸಂದರ್ಭದಲ್ಲಿ ಆರ್. ಎಸ್. ವೆಂಚರ‍್ಸ್ ಸಂಸ್ಥೆಯ ’ಬೈಂದೂರು ಪ್ಯಾಲೇಸ್’ ಅಪಾರ್ಟ್‌ಮೆಂಟ್ ಪ್ರಾಜೆಕ್ಟ್ ಲಾಂಚ್ ಮಾಡುತ್ತಿದ್ದು ಇದರ ಪ್ರದರ್ಶನ ಹಾಗೂ ಬುಕ್ಕಿಂಗ್ ಅಂದೇ ಆರಂಭಗೊಳ್ಳಲಿದೆ. ಫ್ಲಾಟ್ ಕುರಿತು ಗ್ರಾಹಕರ ಗೊಂದಲ ನಿವಾರಿಸಲು ರುಪೀ ಮಾಲ್‌ನ ಒಂದನೇ ಮಹಡಿಯಲ್ಲಿ ಮಾದರಿ ಫ್ಲಾಟ್ ನಿರ್ಮಿಸಲಾಗಿದ್ದು, ಅದರಂತೆಯೇ ಬೈಂದೂರು ಪ್ಯಾಲೇಸ್ ನಿರ್ಮಾಣವಾಗಲಿದೆ.

ಆರ್. ಎಸ್. ವೆಂಚರ‍್ಸ್ ಈಗಾಗಲೇ ಕೊಲ್ಲೂರಿನಲ್ಲಿ ದೇವಿ ಮೂಕಾಂಬಿ ಸರ್ವಿಸ್ ಅಪಾರ್ಟ್‌ಮೆಂಟ್ ಹಾಗೂ ಹಾಲ್ಕಲ್‌ನಲ್ಲಿ ಓಂ ಸ್ಪಿರಿಚ್ವಲ್ ಸೆಂಟರ್ ನಿರ್ಮಾಣ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ.

Leave a Reply

Your email address will not be published. Required fields are marked *

4 − one =