ರುಪೀ ಮಾಲ್ ಈಗ ನಿಮ್ಮ ಬೈಂದೂರಿನಲ್ಲಿ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರಿನ ಕೇಂದ್ರಭಾಗದಲ್ಲಿ ಮೊದಲ ಭಾರಿಗೆ ಆರಂಭಗೊಳ್ಳುತ್ತಿರುವ ’ರುಪೀ ಮಾಲ್’ ಶುಭಾರಂಭಕ್ಕೆ ಸಿದ್ಧತೆ ನಡೆಸಿದ್ದು, ಎಪ್ರಿಲ್ 1ರಿಂದ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಲಿದೆ. ’ರುಪೀ ಮಾಲ್’ ಬೈಂದೂರು ಭಾಗದ ಗ್ರಾಹಕರ ಎಲ್ಲಾ ಬಗೆಯ ಅಗತ್ಯತೆಗಳನ್ನು ಪೂರೈಸುವ ಪ್ರಪ್ರಥಮ ಮಾಲ್ ಎಂದೆನಿಸಿಕೊಳ್ಳಲಿದೆ.

Call us

Call us

Visit Now

ಮಾಲ್‌ನಲ್ಲಿ ಸುಪರ್ ಮಾರ್ಕೆಟ್, ಹೈಪರ್ ಮಾರ್ಕೆಟ್, ಟೆಕ್ಸ್‌ಟೈಲ್ & ಫ್ಯಾಶನ್, ಹೋಟೆಲ್ ಮತ್ತು ರೆಸ್ಟೋರೆಂಟ್, ತರಕಾರಿ ಅಂಗಡಿ, ಮೀನು ಮತ್ತು ಮಾಂಸದ ಅಂಗಡಿ, ಸೈಕಲ್ ಶಾಪ್, ಚಹಾದ ಅಂಗಡಿ, ಐಸ್‌ಕ್ರೀಮ್ ಪಾರ್ಲರ್, ಬ್ಯೂಟಿ ಪಾರ್ಲರ್ ಇನ್ನಿತರ ಉದ್ಯಮಗಳು ಸೇರಿದಂತೆ ವಿವಿಧ ವ್ಯವಹಾರಗಳು ಆರಂಭಗೊಳ್ಳಲಿದ್ದು ನಿಮ್ಮ ಎಲ್ಲಾ ಅಗತ್ಯಗಳನ್ನೂ ಒಂದೇ ಸ್ಥಳದಲ್ಲಿ ಪೂರೈಸಿಕೊಳ್ಳಬಹುದಾಗಿದೆ.

Click Here

Click here

Click Here

Call us

Call us

ಪ್ರಸ್ತುತ ಬೈಂದೂರಿನ ಬಹುಪಾಲು ಜನರು ತಮ್ಮ ಅಗತ್ಯ ವಸ್ತುಗಳ ಖರೀದಿಗಾಗಿ ಅಕ್ಕಪಕ್ಕದ ಊರುಗಳನ್ನು ಅವಲಂಭಿಸಿಕೊಂಡಿದ್ದಾರೆ. ಆದರೆ ಬೈಂದೂರು ಹಾಗೂ ಸುತ್ತಲಿನ ಗ್ರಾಮಗಳ ಜನರು ತಮ್ಮ ಅವಶ್ಯಕತೆಗಳಿಗಾಗಿ ಬೈಂದೂರಿಗೆ ಬರುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. 6 ತಿಂಗಳುಗಳ ಅವಧಿಯಲ್ಲಿ ರುಪೀ ಮಾಲ್‌ನಲ್ಲಿ ಪೂಟ್‌ವೇರ್ ಅಂಗಡಿ, ಜಿಮ್, ಸಿನೆಮಾ ಟಾಕೀಸ್, ಒಳಾಂಗಣ ಕ್ರೀಡೆಗಳು ಸೇರಿದಂತೆ ವಿವಿಧ ಉದ್ಯಮ ಹಾಗೂ ಸೇವಾ ಕೇಂದ್ರಗಳು ಆರಂಭಗೊಳ್ಳಲಿದ್ದು, ವಾರಾಂತ್ಯದ ವಿಹಾರದ ತಾಣವಾಗಿ ಮಾರ್ಪಾಡುಗೊಳ್ಳಲಿದೆ.

ನೂತನ ವ್ಯವಹಾರಕ್ಕಾಗಿ ಬೈಂದೂರಿನಲ್ಲಿ ಉತ್ತಮ ಸ್ಥಳದ ಹುಡುಕಾಟದಲ್ಲಿರುವವರಿಗೆ ಕೊಚ್ಚಿನ್ ಮೂಲದ ಆರ್. ಎಸ್. ವೆಂಚರ‍್ಸ್ ಸಂಸ್ಥೆ ಉತ್ತಮ ಅವಕಾಶ ನೀಡುತ್ತಿದೆ. ಬಾಡಿಗೆ ನೀಡದೇ ವ್ಯವಹಾರ ಆರಂಭಿಸಲು, ಬಾಡಿಗೆಗೆ ತಕ್ಕುದಾದ ಜಾಗ ಪಡೆದುಕೊಳ್ಳಲು ಅಥವಾ ಅಗತ್ಯ ಸ್ಥಳ ಖರೀದಿ ಮಾಡಲು ಕೂಡ ಆಯ್ಕೆ ಒದಗಿಸಿದೆ. ಈಗಾಗಲೇ ಉದ್ಯಮ ಹೊಂದಿರುವವರು ಕೂಡ ತಮ್ಮ ವ್ಯವಹಾರವನ್ನು ಇಲ್ಲಿಗೆ ಸ್ಥಳಾಂತರಿಸಲು ಅಥವಾ ಶಾಖೆಯನ್ನು ಆರಂಭಿಸಲು ಕೂಡ ಅವಕಾಶವಿದೆ. ಬೈಂದೂರು ಸಿ.ಟಿ ಪಾಯಿಂಟ್‌ನ ಎರಡನೇ ಮಹಡಿಯಲ್ಲಿ ಆರ್. ಎಸ್. ವೆಂಚರ‍್ಸ್ ಕಛೇರಿ ಇದ್ದು ಆಸಕ್ತರು ನೇರವಾಗಿ ಭೇಟಿಯಾಗಿ ಇಲ್ಲವೇ ದೂರವಾಣಿ ಸಂಖ್ಯೆ 08254-251167 ಅಥವಾ ಮೊಬೈಲ್ ಸಂಖ್ಯೆ 8762306267 ಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬುದಾಗಿದೆ.

ಕೇರಳ ಕೊಚ್ಚಿನ್‌ನ ಪ್ರಖ್ಯಾತ ಹಾಗೂ ಚಿರಪರಿಚಿತ ಉದ್ಯಮ ಸಮೂಹವಾದ ಆರ್. ಎಸ್. ವೆಂಚರ‍್ಸ್ ಈಗಾಗಲೇ ಕೊಲ್ಲೂರಿನಲ್ಲಿ ವಸತಿಗೃಹ ಹಾಗೂ ’ಓಂ’ ಸ್ಪಿರಿಚ್ವಲ್ ಕ್ಯಾಪಿಟಲ್ ಹೋಮ್‌ಸ್ಟೇ ಉದ್ಯಮವನ್ನು ಆರಂಭಿಸಿದ್ದು, ಬೈಂದೂರಿನಲ್ಲಿ ಪ್ರಥಮ ಭಾರಿಗೆ ರುಪೀ ಮಾಲ್ ಮೂಲಕ ನಾಗರಿಕರಿಗೆ ಉತ್ಕೃಷ್ಟ ಸೇವೆಯನ್ನು ನೀಡಲು ಸನ್ನದ್ಧಗೊಂಡಿದೆ.

 

One thought on “ರುಪೀ ಮಾಲ್ ಈಗ ನಿಮ್ಮ ಬೈಂದೂರಿನಲ್ಲಿ

Leave a Reply

Your email address will not be published. Required fields are marked *

1 + 3 =