ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಹುಪಾಲು ಕುಂದಾಪುರ ಮೂಲದ ಪ್ರತಿಭೆಗಳೇ ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ ‘ಸಹನಾ’ ಮ್ಯೂಸಿಕ್ ವಿಡಿಯೋ ಜ.25ರಂದು ಬಿಡುಗಡೆಗೊಳ್ಳುತ್ತಿದ್ದು, ತಂಡದ ಪ್ರಯತ್ನದ ಬಗೆಗಿರುವ ನಿರೀಕ್ಷೆ ಸಣ್ಣ ಕುತೂಹಲವನ್ನು ಹುಟ್ಟುಹಾಕಿದೆ.
ರಿಷಬ್ ಶೆಟ್ಟಿ ಫಿಲ್ಮ್ಸ್ ನಿರ್ಮಿಸಿರುವ ಈ ಮ್ಯೂಸಿಕ್ ವಿಡಿಯೋವನ್ನು ಸಂತೋಷ್ ಬಳ್ಕೂರು ನಿರ್ದೇಶಿಸಿದ್ದು, ಡೆನಿಲ್ ಸುಹಿತ್ ಸಂಗೀತವಿದೆ. ಯತಿಶ್ ರೈ ಛಾಯಾಗ್ರಹಣ ಮಾಡಿದ್ದರೇ, ಅರುಣಜ ಎನ್. ಅವರು ಕಂಡಸಿರಿಯಲ್ಲಿ ಹಾಡು ಮೂಡಿಬಂದಿದೆ. ಕುಂದಾಪುರದ ರಕ್ಷಿತ್ ಶೆಟ್ಟಿ ಸೇರಿದಂತೆ ಇತರರು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹಾಡು ಸಹನಾ ಅನುಭವಿಸಿದ ಅತೀವ ನೋವುಗಳ ಜೊತೆ ಜೊತೆಗೆ ಅವಳ ಅಂತರಾತ್ಮವೂ ಮರೆಯಾಗಿ ಹೋದ ಬಗೆಯನ್ನು ತೆರೆದಿಡುತ್ತದೆ. ನಾವು ದಿನನಿತ್ಯ ಕಂಡೂ ಕಡೆಗಣಿಸುವ ಸಮಾಜದ ರಾಕ್ಷಸರಿಂದ ನಿರ್ದಯವಾಗಿ ಬರ್ಬರ ಲೈಂಗಿಕ ಹಲ್ಲೆಗೊಳಗಾದ ಹೆಣ್ಣೊಬ್ಬಳ ಕಥೆ. ವಿಷಮಯ ಕೊಳದಲ್ಲಿನ ಕಮಲವೊಂದು ಆ ಹೆಣ್ಣಿನ ರೂಪಕವಾಗಿ ಹೆಣೆದಿರುವ ಕಥೆಯಿದು.