ಬೈಂದೂರು: ಸಮರ್ಥ ಭಾರತ ಸಂಘಟನೆಯ ಕಾರ್ಯಾಲಯ ಉದ್ಘಾಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮರ್ಥ ಭಾರತ ಸ್ವಯಂಸೇವಾ ಸಂಘಟನೆಯ ನೇತೃತ್ವದಲ್ಲಿ ಜ. 28ರಂದು ನಡೆಯಲಿರುವ ‘ವಿವೇಕ ಪರ್ವ’ ಕಾರ್ಯಕ್ರಮ ಪೂರ್ವಭಾವಿಯಾಗಿ ಸಮರ್ಥ ಭಾರತ ಸಂಘಟನೆಯ ಕಾರ್ಯಾಲಯ ಬೈಂದೂರಿನ ಮೂಕಾಂಬಿಕಾ ಕಾಂಪ್ಲೆಕ್ಸ್‌ನಲ್ಲಿ ಆರಂಭಗೊಂಡಿತು.

Call us

Call us

Call us

ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಧ್ಯಾಯ, ಸಮರ್ಥ ಭಾರತ ಬೈಂದೂರು ಘಟಕದ ಗೌರವಾಧ್ಯಕ್ಷ ವಿಶ್ವೇಶ್ವರ ಅಡಿಗ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಜಯಾನಂದ ಹೋಬಳಿದಾರ್, ಹಿರಿಯ ಮುಖಂಡ ಗೋಪಾಲಕೃಷ್ಣ ಶಿರೂರು, ಸಂಚಾಲಕರಾದ ಶ್ರೀಧರ ಬಿಜೂರು, ಭೀಮೇಶ್ ಬೈಂದೂರು, ಕಾರ್ಯದರ್ಶಿ ವಿಜಯ ಕಂಚಿಕಾನ್, ಮಹಿಳಾ ಸಂಚಾಲಕಿ ಪ್ರಿಯದರ್ಶಿನಿ ಬೆಸ್ಕೂರು, ಭಾಗೀರಥಿ ಮಯ್ಯಾಡಿ ಮೊದಲಾದವರು ಉಪಸ್ಥಿತರಿದ್ದರು. ಸ್ವಾಮಿ ವಿವೇಕಾನಂದರ 153ನೇ ಜನ್ಮದಿನಾಚರಣೆಯ ನೆನಪಿಗಾಗಿ ಜ.28ರಂದು ಬೈಂದೂರಿನ ಗಾಂಧಿ ಮೈದಾನದಲ್ಲಿ ಕಾರ್ಯಕ್ರಮ ಜರುಗಲಿದ್ದು, ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಪ್ರಮುಖ ವಾಗ್ಮಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದು, ಹದಿನೈದು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

 samartha-bharatha-byndoor-viveka-parva-2samartha-bharatha-byndoor-viveka-parva-1

Leave a Reply

Your email address will not be published. Required fields are marked *

three × 5 =