ಪ್ರತಿಭೆಯೊಂದಿಗೆ ಸಾಧಿಸುವ ಛಲವಿದ್ದರೇ ಯಶಸ್ಸು ಖಂಡಿತ: ಪತ್ರಕರ್ತ ಅರುಣಕುಮಾರ್ ಶಿರೂರು

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರತಿಭೆ ಇದ್ದವರಿಗೆ ಅವಕಾಶಗಳ ಕೊರತೆ ಇಲ್ಲ. ಆದರೆ ಪ್ರತಿ ದಿನವೂ ಎದುರಾಗುವ ಅವಕಾಶಗಳನ್ನು ಜಾಣ್ಮೆಯಿಂದ ಬಳಸಿಕೊಳ್ಳುವ ಚಾಕಚಕ್ಯತೆ, ಸಾಗುವ ಹಾದಿಗೆ ನಿರ್ದಿಷ್ಟ ಗುರಿ ಇದ್ದರೇ ಮಾತ್ರ ನಾವು ಎಲ್ಲರಿಂದಲೂ ಭಿನ್ನರಾಗಿ ಗುರುತಿಸಿಕೊಳ್ಳುತ್ತೇವೆ ಮತ್ತು ಯಶಸ್ಸು ತಾನಾಗಿಯೇ ಹಿಂಬಾಲಿಸುತ್ತದೆ ಎಂದು ಪತ್ರಕರ್ತ ಅರುಣಕುಮಾರ್ ಶಿರೂರು ಹೇಳಿದರು.

Call us

Call us

Click Here

Visit Now

ಸಂಚಲನ ರಿ. ಹೊಸೂರು ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ಬೈಂದೂರು ಗ್ರಾಪಂ ವ್ಯಾಪ್ತಿಯ ಹೊಸೂರಿನ ಹೊಂಗಿರಣ ರಂಗಮಂದಿರದಲ್ಲಿ ಚಾಲನೆಗೊಂಡ ನಾಲ್ಕು ದಿನಗಳ ಕಾನನದೊಳಗೊಂದು ರಂಗಸುಗ್ಗಿ ‘ಶರತ್ ರಂಗ ಸಂಚಲನ -2016’ರ ಜನಪದ-ಮಾಯಾ ವೈಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Click here

Click Here

Call us

Call us

ಇಂದಿನ ಟಿ.ವಿ ಮಾಧ್ಯಮಗಳು ಹಾಗೂ ಹಣದ ಪ್ರಭಾವ ಒಂದು ದಿನದಲ್ಲಿ ಸಾಧನೆಯ ಉತ್ತುಂಗ ಸ್ಥಾನಕ್ಕೇರುವುದೇ ಯಶಸ್ಸು ಎಂಬ ಸಂಕುಚಿತ ಭಾವನೆಯನ್ನು ಮನಸ್ಸಿನೊಳಕ್ಕೆ ತುರುಕುತ್ತಿದೆ. ಹೀಗೆ ಪಡೆದ ಯಶಸ್ಸು ಬಹುಕಾಲ ಉಳಿಯದು ಎಂದ ಅವರು ಜನಪರವಾದ ವಿಚಾರಗಳನ್ನು ಕೂಡಿಸಿಕೊಂಡು ಸಾಮಾಜಿಕವಾಗಿ ಏನನ್ನಾದರೂ ಕೊಡಬೇಕು ಎಂಬು ತುಡಿತ ಉತ್ತಮ ಕಾರ್ಯಕ್ರಮಗಳ ಆಯೋಜನೆ ಸಾಧ್ಯವಾಗುತ್ತದೆ ಎಂದರು.

ಬಿಜೂರು ಸ.ಪ್ರೌ.ಶಾಲೆಯ ಮುಖ್ಯೋಪಧ್ಯಾಯ ಅಬ್ದುಲ್ ರವೂಫ್, ಸುರಭಿ ರಿ. ಬೈಂದೂರು ಕಾರ್ಯದರ್ಶಿ ಲಕ್ಷಣ ವೈ ಕೊರಗ, ಹೊಸೂರು ಶಾಲೆ ಹಳೆವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಮಾಸ್ತಯ್ಯ, ಸುಬ್ಬ ಪೂಜಾರಿ ಹೊಸೂರು ಮೊದಲಾದವರು ವೇದಿಕೆಯಲ್ಲಿದ್ದರು. ಸಂಚಲನ ಹೊಸೂರು ಅಧ್ಯಕ್ಷ ತಿಮ್ಮ ಮರಾಠಿ ಸ್ವಾಗತಿಸಿ, ಕಾರ್ಯದರ್ಶಿ ನಾಗಪ್ಪ ಮರಾಠಿ ವಂದಿಸಿದರು. ಸಂಚಾಲಕ ಸುಧಾಕರ ಪಿ. ಬೈಂದೂರು ನಿರೂಪಿಸಿದರು.  ಬಳಿಕ ಬೈಂದೂರು ಶ್ರೀ ಮಹತ್ಮಾ ಜ್ಯೋತಿ ಬಾಪುಲೆ ಕೊರಗರ ಯುವಕಲಾ ವೇದಿಕೆಯ ಕಲಾವಿದರಿಂದ ಕೊರಗ ಜಾನಪದ ನೃತ್ಯ ವೈಭವ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಸತೀಶ್ ಹೆಮ್ಮಾಡಿ ಅವರಿಂದ ಜನಪದ ಜಾದೂ ಜಾತ್ರೆ ಜರುಗಿತು.

Leave a Reply

Your email address will not be published. Required fields are marked *

thirteen − 5 =