ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ‘ಸ್ಯಾಂಡ್ ಥೀಂ’ ತಂಡದ ಕಲಾವಿದರಾದ ಹರೀಶ್ ಸಾಗಾ ಹಾಗೂ ರಾಘವೇಂದ್ರ ಪ್ರಸಾದ್ ಆರ್. ಅವರಿಂದ ಕೋಟೇಶ್ವರ ಹಳೆಅಳಿವೆ ಕಡಲ ತೀರದಲ್ಲಿ ಪ್ರಕೃತಿಯೇ ದೇವರು ಎಂಬ ಸಂಕಲ್ಪದೊಂದಿಗೆ ರಚಿಸಿದ ಮರಳುಶಿಲ್ಪ – ಅರಶಿಣ ಗಣಪ ಗಮನ ಸೆಳೆಯಿತು.
ಪೃಕೃತಿ ರಕ್ಷಣೆಯ ಭರವಸೆಯನ್ನು ನೀಡುವ ಪ್ರಕೃತಿಯೇ ದೇವರು ಎನ್ನುವ ಚಿಂತನೆಯಲ್ಲ್ಲಿ ಮೂ ಆನೆಯ ಮುಖ ಸ್ವರೂಪವುಳ್ಳ ಗಣಪನಿಗೆ ಪ್ರಕೃತಿಯ ದ್ಯೋತಕವಾಗಿ ಹಳ್ಳಿ ಹಾಳೆಯ ಕಿರೀಟ, ರೋಗನಿರೋಧಕ ಶಕ್ತಿಯ ಬಿಂಬವಾಗಿ ಅರಶಿನ ಬಣ್ಣ ಹಾಗೂ ಸಂಸ್ಕೃತಿಯ ದ್ಯೋತಕವಾಗಿ ಸಿಂಧೂರ ತಿಲಕವಿರಿಸಲಾಗಿದ್ದು, ಕಡಲತಡಿಯಲ್ಲಿ ನಿರ್ಮಿಸಲಾದ ಈ ಮರಳುಶಿಲ್ಪ ಸುಂದರವಾಗಿ ಮೂಡಿಬಂದಿದೆ.
ಸರಕಾರದ ‘ ಅರಿಶಿನ ಗಣಪತಿ ಅಭಿಯಾನ’ದಂತೆ ಮಾಲಿನ್ಯ ರಹಿತವಾದ ವಿಗ್ರಹ ಮತ್ತು ಕೋವಿಡ್‌ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೋಗನಿರೋಧಕ ಅರಿಶಿನ ಗಣಪನ ಆರಾಧನೆಯ ಸಂಕಲ್ಪ ನಮ್ಮದ್ದಾಗಲಿ ಎಂಬ ಜನಜಾಗೃತಿಯನ್ನು ಸಾರುವ ಮರಳು ಶಿಲ್ಪಾಕೃತಿ ಇದಾಗಿದೆ – ಹರೀಶ್ ಸಾಗ, ಕಲಾವಿದರು.

