ಕುಂದಾಪುರ: ಇ-ಸ್ಯಾಂಡ್ ಆ್ಯಪ್ ಮೂಲಕ ಸಾರ್ವಜನಿಕರಿಗೆ ಮರಳು ಲಭ್ಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲ್ಲೂಕಿನ ಗುಲ್ವಾಡಿ, ಕಾವ್ರಾಡಿ, ಬಳ್ಕೂರು ಗ್ರಾಮದ ಸರ್ವೆ ನಂ 180, 157, 189 ರಲ್ಲಿನ 11.90 ಎಕರೆ ವಿಸ್ತೀರ್ಣ ಪ್ರದೇಶದ ಮರಳು ಬ್ಲಾಕ್ ಸಂಖ್ಯೆ 4ರಲ್ಲಿ ಹಾಗೂ ಜಪ್ತಿ, ಹಳ್ನಾಡು ಗ್ರಾಮದ ಸರ್ವೆ ನಂ. 174. 56ರಲ್ಲಿನ 5.70 ಎಕರೆ ವಿಸ್ತೀರ್ಣ ಪ್ರದೇಶದ ಮರಳು ಬ್ಲಾಕ್ ಸಂಖ್ಯೆ 6 ರಲ್ಲಿ ಮರಳನ್ನು ಸಾರ್ವಜನಿಕರಿಗೆ, ಅಭಿವೃದ್ಧಿ ಕಾಮಗಾರಿಗಳಿಗೆ SAND APPನ ಮೂಲಕ ಪೂರೈಸಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಲ್ಲಿ ತೀರ್ಮಾನಿಸಲಾಗಿರುತ್ತದೆ.

ಅದ್ದರಿಂದ ಸದರಿ ಮರಳನ್ನು ಪಡೆದುಕೊಳ್ಳಲು ಇಚ್ಚಿಸುವವವರು UDUPI E-SAND APP ಮುಖಾಂತರ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ, ಹಿರಿಯ ಭೂವಿಜ್ಞಾನಿಯವರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ , ರಜತಾದ್ರಿ, A ಬ್ಲಾಕ್, ಮೊದಲನೇ ಮಹಡಿ, ಮಣಿಪಾಲ, ಉಡುಪಿ ಜಿಲ್ಲೆ, ಉಡುಪಿ, ದೂರವಾಣಿ ಸಂಖ್ಯೆ: 0820-2572333, UDUPI E-SAND APP ದೂರವಾಣಿ ಸಂಖ್ಯೆ – 6366248666, 6366743888, 6366871888 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ಭೂವಿಜ್ಞಾನಿ ಹಾಗೂ ಸದಸ್ಯ ಕಾರ್ಯದರ್ಶಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿ, ಉಡುಪಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/

Leave a Reply

Your email address will not be published. Required fields are marked *

20 + four =