ಸಪ್ತಗಿರಿ ಸೂಪರ್ ಮಾರ್ಕೆಟ್ ಲಕ್ಕಿ ಕೂಪನ್ ಯೋಜನೆ: ಗ್ರಾಹಕರಿಗೆ ವಿನೂತನ ಕೊಡುಗೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಜೆ.ಎಲ್.ಬಿ ರಸ್ತೆ, ಭಂಡಾರ್‌ಕಾರ‍್ಸ್ ಕಾಲೇಜ್ ಹತ್ತಿರ ಸದ್ಗುರು ಟವರ‍್ಸ್‌ನಲ್ಲಿ ಕಾರ‍್ಯ ನಿರ್ವಹಿಸುತ್ತಿರುವ ಸಪ್ತಗಿರಿ ಸೂಪರ್ ಮಾರ್ಕೆಟ್ ವರ್ಷಾಚರಣೆ ನಿಮಿತ್ತ ಗ್ರಾಹಕರಿಗೆ ಲಕ್ಕಿ ಕೂಪನ್ ಯೋಜನೆಗೆ ಬುಧವಾರ ವಿದ್ಯುಕ್ತ ಚಾಲನೆ ನೀಡಲಾಯಿತು.

Call us

Call us

Visit Now

ಕಳೆದ ಒಂದು ವರ್ಷದಿಂದ ಪರಿಸರದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದ ಸೂಪರ್ ಮಾರ್ಕೆಟ್ ಗುಣಮಟ್ಟದ ಆಹಾರ ಪದಾರ್ಥ, ಕಾಸ್ಮಟಿಕ್, ಗೃಹಪಯೋಗಿ ವಸ್ತುಗಳ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ನೀಡುತ್ತಾ ಬಂದಿದೆ. ಸಾರ್ವಜನಿಕರ ಸಹಕಾರದಿಂದ ಉತ್ತೇಜಿತರಾದ ಮಾರ್ಕೆಟಿಂಗ್ ಪಾಲುದಾರ ಚಂದ್ರಶೇಖರ ಇವರಿಗೆ ಗ್ರಾಹಕರಿಗೆ ಏನಾದರೂ ಹೊಸತನ್ನು ಕೊಡಬೇಕು ಎಂಬ ಚಿಂಥನೆಯೇ ಲಕ್ಕಿಕೂಪನ್ ಯೋಜನೆ.

Click here

Call us

Call us

ಮಾರ್ಕೆಟ್‌ನಲ್ಲಿ ೨ ಸಾವಿರ ರೂ. ಸಾಮಗ್ರಿ ವಿಕ್ರಯಿಸಿದವರಿಗೆ ಲಕ್ಕಿ ಕೂಪನ್ ನೀಡಲಾಗುತ್ತದೆ. ಈ ವ್ಯವಸ್ಥೆ ಗಣರಾಜ್ಯೋತ್ಸವ ತನಕ ಇದ್ದು, ಗಣರಾಜ್ಯೊತ್ಸ್ಸವದಂದೇ ಲಕ್ಕಿ ಕೂಪನ್ ಡ್ರಾ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ವಿಜೇತರ ಹೆಸರನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತದೆ. ಸೂಪರ್ ಬಂಪರ್ ಬಹುಮಾನ ಸ್ಕೂಟರ್, ಪ್ರಥಮ ೩೨ ಇಂಚು ಟಿವಿ, ದ್ವಿತೀಯ ಪ್ರಿಜ್, ತೃತೀಯ ವಾಷಿಂಗ್ ಮಿಷಿನ್, ೪ನೇ ಬಹುಮಾನ ಟಿಲ್ಟಿಂಗ್ ಗ್ರ್ಯಾಂಡರ್, ೫ನೇ ಬಹುಮಾನ ಮಿಕ್ಸಿ ಹಾಗೂ ಸಮಾಧಾನಕರ ಬಹುಮಾನ ಇದೆ. ಒಟ್ಟು ೨೫ ಬಹುಮಾನಗಳ ಮಹಾ ಯೋಜನೆ.

ಸದ್ಗುರು ಟವರ‍್ಸ್ ಸೂಪರ್ ಮಾರ್ಕೆಟ್ ವಠಾರದಲ್ಲಿ ಬಾಲಾಜಿ ಕನ್ಸಲ್ಟೆಂಟ್‌ನ ವಸಂತ ಪಡಿಯಾರ್ ಹಾಗೂ ಲೆಕ್ಕಪರಿಶೋಧಕರಾದ ಗಿರೀಶ್ ಗಡಿಯಾರ್ ಇವರು ಪ್ರಥಮ ಲಕ್ಕಿ ಕೂಪನ್‌ನ್ನು ಪ್ರಭಾವತಿ ಗಣೇಶ್ ಎಂಬವರಿಗೆ ನೀಡುವ ಮೂಲಕ ಚಾಲನೆ ನೀಡಿದರು.

ಸಪ್ತಗಿರಿ ಸೂಪರ್ ಮಾರ್ಕೆಟ್ ಆಡಳಿತ ಪಾಲುದಾರ ಶಶಿಧರ ಹೆಬ್ಬಾರ್, ಮಾರ್ಕೆಟಿಂಗ್ ಪಾಲುದಾರ ಚಂದ್ರಶೇಖರ್, ಸಪ್ತಗಿರಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಕಾರ‍್ಯದರ್ಶಿ ಸುಮತಿ ಚಂದ್ರಶೇಖರ್, ಅಭಿನೇಹ, ಅನಿಲೇಖ, ಮಾರ್ಕೆಟ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

2 × two =