ಕಾರ್ಟೂನು ಹಬ್ಬ: ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕಾರ್ಟೂನು ಸ್ಪರ್ಧೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾರ್ಟೂನು ಹಬ್ಬದ ’ಸ್ಕೂಲ್‌ಟೂನ್ ಚಾಂಪಿಯನ್‌ಶಿಪ್’ ಸ್ಪರ್ಧೆಯ ಪ್ರಯುಕ್ತ ನವೆಂಬರ್ 23ರಂದು ಬೋರ್ಡ್ ಹೈಸ್ಕೂಲ್, ರೋಟರಿ ಕಲಾಮಂದಿರ ಕುಂದಾಪುರ ಇಲ್ಲಿ ಮಧ್ಯಾಹ್ನ 2 ಗಂಟೆಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಶಾಲಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ವ್ಯಂಗ್ಯಚಿತ್ರ ಸ್ಪರ್ಧೆ ಆಯೋಜಿಸಲಾಗಿದೆ.

Call us

Call us

Visit Now

5ನೇ ತರಗತಿಯ ತನಕ ಸ್ಪರ್ಧೆಯ ವಿಷಯವಾಗಿ ’ಗಾಂಧೀಜಿ’ಯವರ ಚಿತ್ರ ರಚನೆ – ಪ್ರಥಮ ಬಹಮಾನ ರೂ.6000-, ದ್ವಿತೀಯ ರೂ.4000/-. ತೃತೀಯ ರೂ. 2000/- ಮತ್ತು 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಪರ್ಧೆಯ ವಿಷಯ ’ಈಶ್ವರ ಅಲ್ಲಾ ತೇರೋ ನಾಮ್’ ಕೋಮು ಸೌಹಾರ್ದತೆ ಬಗ್ಗೆ ಕಾರ್ಟೂನು ರಚನೆ – ಪ್ರಥಮ ಬಹುಮಾನ 8000/- ದ್ವಿತೀಯ ರೂ.6000/-, ತೃತೀಯ ರೂ. 3000/- ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಕೂಡ ’ಈಶ್ವರ ಅಲ್ಲಾ ತೇರೋ ನಾಮ್’ ಕೋಮು ಸೌಹಾರ್ದತೆ ಬಗ್ಗೆ ಚಿತ್ರರಚನೆ ಇದ್ದು – ಪ್ರಥಮ ರೂ. 10000/-, ದ್ವಿತೀಯ ರೂ. 7000/-, ತೃತೀಯ ರೂ. 4000/- ಆಗಿರುತ್ತದೆ.

Click here

Call us

Call us

ಖ್ಯಾತ ಕಾರ್ಟೂನಿಸ್ಟ್ ದಿ. ಮಾಯಾ ಕಾಮತ್ ಅವರ ಸ್ಮರಣಾರ್ಥವಾಗಿ ಅವರ ಕುಟುಂಬದ ಸಹಯೋಗದೊಂದಿಗೆ ಹೆಣ್ಣು ಮಕ್ಕಳಲ್ಲಿ ಕಾರ್ಟೂನು ಕಲೆಯ ಬಗ್ಗೆ ಆಸಕ್ತಿ ಹೆಚ್ಚಿಸಲು ವಿದ್ಯಾರ್ಥಿನಿಯರಿಗಾಗಿಯೇ ಆಯೋಜಿಸಲಾಗಿದೆ. ಮುಖ್ಯ ಸ್ಪರ್ದೆಯಿಂದ ಆಯ್ದ ಮೂರು ಅತ್ಯುತ್ತಮ ಕಾರ್ಟೂನುಗಳಿಗೆ ಪ್ರಥಮ ಬಹುಮಾನವಾಗಿ ರೂ. 7000/-, ದ್ವತೀಯ ರೂ. 5000/-, ತೃತೀಯ ರೂ. 3000/- ನೀಡಲಾಗುವುದು. ಪ್ರತೀ ಬಹುಮಾನದ ಜೊತೆಗೆ ಟ್ರೋಫಿ, ಸರ್ಟಿಫಿಕೇಟ್ ಮತ್ತು ಕಾರ್ಟೂನು ಪುಸ್ತಕ ಒಳಗೊಂಡಿರುತ್ತದೆ. ನವೆಂಬರ್ 24ರಂದು ಸಂಜೆ 4 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ವಿಜೇತ ಶಾಲೆ ಅಥವಾ ಕಾಲೇಜುಗಳಿಗೆ ಟ್ರೋಫಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಳಿಗಾಗಿ ಮೊಬೈಲ್ ಸಂಖ್ಯೆ 9686109573ನ್ನು ಸಂಪರ್ಕಿಸಬಹುದೆಂದು ಕಾರ್ಟೂನ್ ಹಬ್ಬದ ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

five × 3 =