ಶುಭ ಸಂದರ್ಭಗಳಲ್ಲಿ ಮಾವಿನ ತೋರಣ ಕಟ್ಟೋದರ ಹಿಂದಿದೆ ವೈಜ್ಞಾನಿಕ ಕಾರಣ!

ಮಾವಿನ ಹಣ್ಣು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ಗೊತ್ತು. ಅದರೆ ಮಾವಿನ ಎಲೆಗಳಿಂದಲೂ ಹಲವು ಪ್ರಯೋಜನಗಳಿದೆ ಎಂಬುದು ಕೂಡ ಸತ್ಯವೆ. ಹೌದು ಮಾವಿನ ಎಲೆಗಳು ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ ಮಧುಮೇಹ (ಟೈಪ್ 1 ಮತ್ತು 2) ಚಿಕಿತ್ಸೆಯಲ್ಲಿ ಎಳೆಯ ಮಾವಿನ ಎಲೆಗಳು ತುಂಬಾ ಉಪಯಕ್ತ. ಇದು ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಕಾಪೌಂಡ್ಗಳನ್ನು ಒಳಗೊಂಡಿದೆ. ಈ ಮಾವಿನ ಎಲೆ ಕಷಾಯ ಮಾಡಬಹುದು. ಎಳೆ ಎಲೆಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ ಅದರ ನೀರು ಕುಡಿಯಬಹುದು. ಮಧುಮೇಹ ಆಂಜಿಯೋಪತಿ, ರೆಟಿನೋಪತಿ ಮತ್ತು ಹೈಪರ್ ಗ್ಲೈಸೆಮಿಯಾಗಳಿಗೆ ಒಣಗಿದ ಮಾವಿನ ಎಲೆ ಪುಡಿಯನ್ನು ಸಹ ಸೇವಿಸಬಹುದು.

ಮಾವಿನ ಎಲೆಗಳಿಂದ ತಯಾರಿಸಿದ ಚಹಾವನ್ನು ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಿಣದಲ್ಲಿರುತ್ತದೆ. ಮಾವಿನ ಎಲೆಗಳಲ್ಲಿರುವ ಪಾಲಿಫಿನಾಲ್ ರಕ್ತನಾಳಗಳನ್ನು ಬಲಪಡಿಸುತ್ತದೆ ಮತ್ತು ಉಬ್ಬಿರುವ ರಕ್ತನಾಳಗಳಿಂದ (varicose veins) ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲು ಸೂಕ್ತ.

ಮಾವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಮಾಡಿದ ಕಷಾಯದಿಂದ ಆಸ್ತಮಾ ಸೇರಿ ವಿವಿಧ ಉಸಿರಾಟದ ಸಮಸ್ಯೆಗಳಿಗೆ ಮದ್ದು ವೂಪಿಂಗ್ ಕೆಮ್ಮಿಗೆ ಚಿಕಿತ್ಸೆ ನೀಡಲು ಕಷಾಯವನ್ನು ಸ್ವಲ್ಪ ಜೇನುತುಪ್ಪದೊಂದಿಗೆ ಸಹ ತೆಗೆದುಕೊಳ್ಳಬಹುದು. ನೆಗಡಿ ಮತ್ತು ಬ್ರಾಂಕೈಟಿಸ್ಗೆ ಇದು ಹೆಲ್ಪ್ಫುಲ್. ಮಾವಿನ ಎಲೆ ಪುಡಿಯನ್ನು ಪ್ರತಿದಿನ ಸೇವಿಸುವುದರಿಂದ ಮೂತ್ರಪಿಂಡದ ಕಲ್ಲು ಮತ್ತು ಪಿತ್ತಜನಕಾಂಗದ ಕಲ್ಲುಗಳನ್ನು ಕರಗಿಸಬಹುದು. ಎಲೆಯನ್ನು ನೆರಳಿನಲ್ಲಿ ಒಣಗಿಸಿ, ನಂತರ ನುಣ್ಣಗೆ ಪುಡಿ ಮಾಡಿ ರಾತ್ರಿ ನೀರಿನಲ್ಲಿ ನೆನೆಸಿ, ಬೆಳಗ್ಗೆ ಕುಡಿಯಬೇಕು. ಭೇದಿಗೂ ಇದನ್ನು ದಿನಕ್ಕೆ ಎರಡು ಮೂರು ಬಾರಿ ನೀರಿನೊಂದಿಗೆ ತೆಗೆದುಕೊಳ್ಳಬಹುದು. ಮಾವಿನೆಲೆಯಲ್ಲಿ ಪಾಲಿಫಿನಾಲ್ ಎಂಬ ಅಂಶವಿದ್ದು, ಕಡಿಮೆ ರಕ್ತದೊತ್ತಡ ಇರೋರಿಗೆ ರಾಮಬಾಣ. ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು ಇದರಲ್ಲಿ ಸಮೃದ್ಧವಾಗಿದೆ. ಮಾವಿನ ಎಲೆಗಳನ್ನು ಅಗಿಯುವುದರಿಂದ ಒಸಡು ಸಮಸ್ಯೆ ನಿವಾರಿಬಹುದು. ಆ್ಯಂಟಿ ಬ್ಯಾಕ್ಟೀರಿಯಲ್ ಅಂಶಗಳು ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ. ಮಾವಿನ ಎಲೆಯ ರಸ ಹೊಟ್ಟೆಗೆ ಸಂಬಂಧಿಸಿದ ವಿವಿಧ ಕಾಯಿಲೆಗಳನ್ನು ಗುಣಪಡಿಸುತ್ತದೆ. ಮಾವಿನ ಎಲೆಗಳು ಬಿಕ್ಕಳಿಕೆ ಮತ್ತು ಗಂಟಲಿನ ಸಮಸ್ಯೆಗಳಿಗೆ ಒಳ್ಳೆಯದು. ಮಾವಿನ ಎಲೆಗಳನ್ನು ಸುಟ್ಟು ಹೊಗೆಯನ್ನು ಗಂಟಲಿನ ತೊಂದರೆ ಮತ್ತು ಬಿಕ್ಕಳಿಕೆ ಗುಣಪಡಿಸುತ್ತದೆ ಎಂದು ನಂಬಲಾಗಿದೆ. ಈ ಎಲೆಗಳಲ್ಲಿರುವ ಕಾಂಪೌಂಡ್ ಆತಂಕದ ಮಟ್ಟವನ್ನು ತಗ್ಗಿಸಲು ಹೆಲ್ಪ್ ಮಾಡುತ್ತದೆ. ಮಾವಿನ ಚಹಾದಲ್ಲಿ ಸ್ನಾನ ಮಾಡುವುದರಿಂದ ಮನಸ್ಸು ಮತ್ತು ದೇಹವು ರಿಲ್ಯಾಕ್ಸ್ ಆಗಿ ರಿಫ್ರೆಶ್ ಆಗುತ್ತದೆ.

ಮರಗಳ ಹಸಿರು ಎಲೆಗಳು ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ ಇಂಗಾಲದ ಡೈಆಕ್ಸೈಡನ್ನು ಹೀರಿಕೊಂಡು ಅದರ ಬದಲಿಗೆ ಶುಧ್ಧವಾದ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಶುಭ-ಸಮಾರಂಭಗಳಲ್ಲಿ ಅತಿ ಹೆಚ್ಚಿನ ಜನರು ಒಂದೆಡೆ ಸೇರಿದಾಗ, ಜನದಟ್ಟಣೆಯಿಂದ ಆಮ್ಲಜನಕದ ಕೊರತೆ ಉಂಟಾಗಬಹುದು ಹಾಗಾಗಿ ಅಂತಹ ಆಮ್ಲಜನಕದ ಕೊರತೆಯನ್ನು ನೀಗಿಸಲು ಸಮಾರಂಭದ ಮಂಟಪದ ಸುತ್ತಮುತ್ತಲೂ ತೋರಣ ಕಟ್ಟುವ ಸಂಪ್ರದಾಯವಿದೆ. ಅದರಲ್ಲೂ ಮಾವಿನ ಎಲೆಗಳು ಉಳಿದೆಲ್ಲಾ ಎಲೆಗಳಿಗಿಂತ ಅತ್ಯಂತ ಹೆಚ್ಚು ಕಾಲ ಹಚ್ಚ ಹಸಿರಾಗಿರುತ್ತದೆ ಮತ್ತು ಮರದಿಂದ ಕಿತ್ತು ತಂದ ಬಹಳ ಕಾಲಗಳ ನಂತರವೂ ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ ಆಮ್ಲಜನಕವವನ್ನು ಉತ್ಪತ್ತಿ ಮಾಡುವ ಶಕ್ತಿಯನ್ನು ಹೊಂದಿದೆ. ಹಾಗಾಗಿ ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಗಳನ್ನೇ ತೋರಣಕ್ಕಾಗಿ ಬಳೆಸುತ್ತೇವೆ.

ಮನೆಯ ಮುಂಬಾಗಿಲು ಮತ್ತು ದೇವರ ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟುವುದರಿಂದ ಮನೆಯಲ್ಲಿ ಹಬ್ಬದ ವಾತಾವರಣ ಮೂಡಿ ಎಲ್ಲರ ಮನಸ್ಸು ಉತ್ಸಾಹ ಮತ್ತು ಆಹ್ಲಾದಕರವಾಗಿಡಲು ಸಹಾಯ ಮಾಡುತ್ತದೆ. ಅದೆ ರೀತಿ ಮನೆಯನ್ನು ಪ್ರವೇಶಿಸುತಿದ್ದಂತೆಯೇ ಹಚ್ಚ ಹಸಿರ ತೋರಣ ಕಣ್ಣಿಗೆ ತಂಪನ್ನು ನೀಡುತ್ತದೆ ಮತ್ತು ಮನೆಯ ವಾತವಾರಣ ಶುಭ್ರವಾಗಿಗಿದ್ದು ಆ ವ್ಯಕ್ತಿಯ ಮನಸ್ಸು ತಾಜಾತನವಾಗಿ ಮತ್ತು ಧನಾತ್ಮಕವಾಗಿ ಯೋಚಿಸಲು ಸಹಕಾರಿಯಾಗಿರುತ್ತದೆ. ಮಾವಿನ ತೋರಣ ಮನೆಯೊಳಗೆ ಪ್ರವೇಶಿಸುವ ಸಣ್ಣ ಸಣ್ಣ ಕ್ರಿಮಿ ಕೀಟಗಳನ್ನು ಆಕರ್ಷಿಸಿ ಅವುಗಳನ್ನು ತೋರಣದ ತುದಿಯಲ್ಲಿಯೇ ಇರುವಂತೆ ಮಾಡಿ, ಅವುಗಳು ಮನೆಯೊಳಗೆ ಪ್ರವೇಶಿಸದಂತೆ ಬಾಗಿಲಿನ ಹೊರಗೇ ತಡೆಗಟ್ಟುತ್ತವೆ.

ಮಾವಿನ ತಳಿರು ತೋರಣದ ಜೊತೆಗೆ ಬೇವಿನ ಸೊಪ್ಪಿನ ಎಲೆ ಅಥವಾ ಟೊಂಗೆಗಳನ್ನು ಸಿಕ್ಕಿಸುವುದರಿಂದ, ಮಾವು ಮತ್ತು ಬೇವಿನ ಎಲೆಯಲ್ಲಿ ಔಷಧೀಯ ಗುಣಗಳು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ, ಮನೆಯ ದ್ವಾರದ ಮೂಲಕ ಪ್ರವೇಶಿಸುವ ಗಾಳಿಯೊಂದಿಗೆ ಮನೆಯೊಳಗೆಲ್ಲಾ ಹರಡಿ ಆರೋಗ್ಯ ದೃಷ್ಟಿಯಿಂದ ಮನೆಯಲ್ಲಿ ಉತ್ತಮ ವಾತಾವರಣ ಮೂಡಿಸುತ್ತದೆ.

 

Leave a Reply

Your email address will not be published. Required fields are marked *

11 − 8 =