ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತೀವ್ರವಾಗಿ ಗಾಯಗೊಂಡಿದ್ದ ಕಡಲಾಮೆಯನ್ನು ಬುಧವಾರ ಕೋಡಿ ಕಿನಾರ ಬಳಿಯ ಕಡಲ ತಡಿಯಲ್ಲಿ ರಕ್ಷಿಸಲಾಗಿದೆ.
ವಲಯ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಅವರ ನೇತೃತ್ವದಲ್ಲಿ ಕ್ಲೀನ್ ಕುಂದಾಪುರ ಪ್ರಾಜೆಕ್ಟ್‌ನ ಭರತ್ ಬಂಗೇರ, ರೀಫ್ ವಾಚ್ ಇಂಡಿಯಾದ ಶಂತನು, ತೇಜಸ್ವಿನಿ, ಎಫ್.ಎಸ್.ಎಲ್ ಇಂಡಿಯಾದ ದಿನೇಶ್ ಸಾರಂಗ ಅವರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು.