ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಯಡ್ತರೆ ಸಂಕದಬಾಗಿಲು ಎಂಬಲ್ಲಿ ಸುಮಾರು 7 ಅಡಿ ಉದ್ದದ ಹೆಬ್ಬಾವು 8 ಕೋಳಿ ನುಂಗಿ ಆತಂಕ ಮೂಡಿಸಿತ್ತು.
ಮನೆ ಹಿತ್ತಲಿನಲ್ಲಿದ್ದ ಕೋಳಿ ಗೂಡಿನಲ್ಲಿ ಭಾನುವಾರ ಬೆಳಗ್ಗೆ ಹೆಬ್ಬಾವು ಪತ್ತೆಯಾಗಿದ್ದು, ಅಲ್ಲಿಯೇ ಇದ್ದ 8 ಕೋಳಿಗಳನ್ನು ನುಂಗಿತ್ತು. ಉಳಿದ ಕೋಳಿಗಳು ಸತ್ತು ಬಿದ್ದಿದ್ದವು. ಹೆಬ್ಬಾವು ಕೋಳಿ ಗೂಡಿನಲ್ಲಿ ಇರುವುದು ಗೊತ್ತಾಗುತ್ತಿದ್ದಂತೆ ಮನೆಯ ಸದಸ್ಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಬೈಂದೂರು ಉಪ ವಲಯ ಅರಣ್ಯಾಧಿಕಾರಿಗಳಾದ ಬಂಗಾರಪ್ಪ ಜಿ. ಆಚಾರಿ ಹಾಗೂ ರವಿರಾಜ್ ಬಿ, ಸ್ಥಳಕ್ಕಾಗಮಿಸಿ ಹೆಬ್ಬಾವನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ತಗೆದುಕೊಂಡು ಹೋಗಿ ಬಿಟ್ಟಿದ್ದಾರೆ.