ಇಪ್ಪತ್ತು ಸಾವಿರ ರೂ. ಬಾಡಿಗೆ ಕಟ್ಟಡದಲ್ಲಿರುವ ಮೆಸ್ಕಾಂ ಕಛೇರಿಯಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿಯೇ ಇಲ್ಲ!

Call us

ಕುಂದಾಪ್ರ ಡಾಟ್ ಕಾಂ ವರದಿ
ಶಂಕರನಾರಾಯಣ: ಮೆಸ್ಕಾಂ ಕಛೇರಿ ಆರಂಭಿಸಿ ನಾಲ್ಕು ತಿಂಗಳುಗಳೇ ಕಳೆದಿವೆ. ತಿಂಗಳಿಗೆ ಬರೊಬ್ಬರಿ ಇಪ್ಪತ್ತು ಸಾವಿರ ರೂ. ಬಾಡಿಗೆಯನ್ನು ನೀಡಲಾಗುತ್ತಿದೆ. ಆದರೆ ಅಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂಧಿಗಳೇ ನೇಮಕಗೊಳ್ಳದೇ ದಿನವಿಡಿ ಮುಚ್ಚಿಯೇ ಇರುವ ಪರಿಸ್ಥಿತಿ. ಇದು ಶಂಕರನಾರಾಯಣದ ಬಾಡಿಗೆ ಕಟ್ಟಡವೊಂದರಲ್ಲಿ ಆರಂಭಗೊಂಡ ಮೆಸ್ಕಾಂ ಇಲಾಖೆಯ ವಿದ್ಯುತ್ ಉಪವಿಭಾಗದ ಕೇಂದ್ರದ ದುಸ್ಥಿತಿ.

Call us

Call us

ಶಂಕರನಾರಾಯಣ ತಾಲೂಕು ರಚನಾ ಹೋರಾಟ ಸಮಿತಿ ಸತತ ಹೋರಾಟದ ಫಲವಾಗಿ ಶಂಕರನಾರಾಯಣಕ್ಕೆ ವಿದ್ಯುತ್ ಉಪವಿಭಾಗ ಕೇಂದ್ರ ಬಂದಿತ್ತು. ಸುಮಾರು 27 ಗ್ರಾಮಗಳ ವ್ಯಾಪ್ತಿ ಹೊಂದಿರುವ ಮೆಸ್ಕಾಂ ಇಲಾಖೆ ವಿದ್ಯುತ್ ಉಪವಿಭಾಗ ನಾಲ್ಕು ತಿಂಗಳ ಹಿಂದೆ ಶಂಕರನಾರಾಯಣದಲ್ಲಿ ಲೋಕಾರ್ಪಣೆಗೊಂಡಿತ್ತು. ಆದರೆ ಈವರೆಗೂ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜನೆಯಾಗದೇ ಶಂಕರನಾರಾಯಣ ಪರಿಸರದ ಜನರಿಗೆ ಕಚೇರಿ ನೆರವಿಗೆ ಬಂದಿಲ್ಲ ಎನ್ನೋದು ದುರಂತ.

ಶಂಕರನಾರಾಯಹಣ ಹೆ.ಬಿ.ಆರ್. ಕಾಂಪ್ಲೆಕ್ಸ್‌ನ ಬಾಡಿಗೆ ಕಟ್ಟಡದಲ್ಲಿ ಕಛೇರಿಯಿದ್ದು, ಕೇವಲ ವಿದ್ಯುತ್ ಬಿಲ್ಲು ತೆಗೆದುಕೊಳ್ಳಲು ಮಾತ್ರ ಒಬ್ಬ ಸಿಬ್ಬಂದಿ ಬೆಳಿಗ್ಗೆ ಹೊತ್ತು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಉಳಿದ ಸಮಯದಲ್ಲಿ ಈ ಉಪವಿಭಾಗದ ಬಾಗಿಲು ಹಾಕಿಯೇ ಇರುತ್ತದೆ. ಆದರೆ ವಿದ್ಯುತ್ ಬಿಲ್ ಪಾವತಿಗೋಸ್ಕರ ಉಪವಿಭಾಗ ಬೇಕಿಲ್ಲ. ಅಂಚೆ ಕಚೇ ರಿಯಲ್ಲೂ ವಿದ್ಯುತ್ ಬಿಲ್ಲು ಪಾವತಿ ವ್ಯವಸ್ಥೆ ಇದೆ ಎನ್ನೋದು ಮೆಸಾಂ ಗಮನಕ್ಕಿಲ್ಲವಾ ಎಂದು ಸ್ಥಳಿಯರು ಪ್ರಶ್ನಿಸುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ

Call us

Call us

ಚಿಮಣಿ ದೀಪ ಹಿಡಿದು ಪ್ರತಿಭಟಿಸುವ ಎಚ್ಚರಿಕೆ
ತತ್‌ಕ್ಷಣ ವಿದ್ಯುತ್ ಉಪವಿಭಾಗಕ್ಕೆ ಸಂಬಂಧಪಟ್ಟ 27 ಗ್ರಾಮಗಳ ಕಡತ ಕುಂದಾಪುರದ ವಿದ್ಯುತ್ ಕಚೇರಿಯಿಂದ ಶಂಕರನಾರಾಯಣಕ್ಕೆ ವರ್ಗಾಯಿಸುವುದು ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಒಬ್ಬ ಟೆಕ್ನಿಕಲ್ ಆಫೀಸರ್ ಹಾಗೂ ಸಿಬ್ಬಂದಿ ಮೆಸ್ಕಾಂ ಅಧಿಕಾರಿಗಳು ಶಂಕರನಾರಾಯಣ ವಿದ್ಯುತ್ ಉಪವಿಭಾಗಕ್ಕೆ ನಿಯೋಜನೆ ಮಾಡುವುದು, ಈ ಭಾಗದ ವಿದ್ಯುತ್ ಬಳಕೆದಾರರು ಹಾಗೂ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವುದು. ಈ ಮೂರು ಬೇಡಿಕೆಗಳಿಗೆ ಇಲಾಖೆ ಸ್ಪಂದಿಸದಿದ್ದಲ್ಲಿ ವಿದ್ಯುತ್ ಬಳಕೆದಾರರು ಮತ್ತು ಶಂಕರನಾರಾಯಣ ತಾಲೂಕ್ ರಚನಾ ಹೋರಾಟ ಸಮಿತಿ ಚಿಮಣಿ ದೀಪ ಹಿಡಿದುಕೊಂಡು ಉದ್ಘಾಟನೆಯಾಗಿಯೂ ಬಾಗಿಲು ಮುಚ್ಚಿದ ವಿದ್ಯುತ್ ಉಪವಿಭಾಗದ ಎದುರು ಹೋರಾಟಕ್ಕೆ ಅಣಿಯಾಗಲಿದ್ದಾರೆ ಎಂದು ಶಂಕರನಾರಾಯಣ ತಾಲೂಕ್ ಹೋರಾಟ ಸಮಿತಿ ಪದಾಧಿಕಾರಿಗಳ ಚಿಟ್ಟೆ ರಾಜಗೋಪಾಲ ಹೆಗ್ಡೆ, ಆವರ್ಸೆ ರತ್ನಾಕರ ಶೆಟ್ಟಿ, ತಲಾರಿ ಹರಿಹರ ಭಟ್ಟ, ಬಿ.ಕೆ. ಶ್ರೀನಿವಾಸ, ತಲಾರಿ ನರಸಿಂಹ ಭಟ್ಟ, ನಾರಾಯಣ ಶೆಟ್ಟಿಗಾರ್, ಉಮೇಶ್ ರಾವ್, ನಾಗೇಶ್ಚಂದ್ರ ಭಟ್ಟ ರಮೇಶ ಕನ್ನಂತ, ರಾಮಚಂದ್ರ ಐತಾಳ, ಸುಧಾಕರ ಕುಲಾಲ್ ತಿಳಿಸಿದ್ದಾರೆ. / ಕುಂದಾಪ್ರ ಡಾಟ್ ಕಾಂ ವರದಿ /

Leave a Reply

Your email address will not be published. Required fields are marked *

four × four =