ಯಡ್ತರೆ: ದುರ್ಗಾಂಬಾ ಪ್ರಿಂಟರ್ಸ್ ನೂತನ ಕಛೇರಿ ಉದ್ಘಾಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉದ್ಯಮದಲ್ಲಿ ಪ್ರತಿದಿನವೂ ಹೊಸ ಸವಾಲುಗಳು ಎದುರಾಗುತ್ತಿರುತ್ತವೆ. ಸವಾಲು ಹಾಗೂ ಗೆಲುವನ್ನು ಸಮಚಿತ್ತದಿಂದ ನಿಭಾಯಿಸಿ ಮುಂದುವರಿದವರು ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮುತ್ತಾರೆ ಎಂದು ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

Call us

Call us

Visit Now

ಅವರು ಭಾನುವಾರ ಯಡ್ತರೆ ರಾಹುತನಕಟ್ಟೆ ಶ್ರೀ ಗುರುರಾಘವೇಂದ್ರ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡ ದುರ್ಗಾಂಬಾ ಪ್ರಿಂಟರ‍್ಸ್‌ನ ನೂತನ ಕಛೇರಿ ಉದ್ಘಾಟಿಸಿ ಮಾತನಾಡಿ ದಿನಗಳದಂತೆ ವ್ಯವಹಾರದ ಸ್ವರೂಪ ಬದಲಾಗುತ್ತಿದ್ದು, ನವ ತಂತ್ರಜ್ಞಾನ ಹಾಗೂ ವೇಗಕ್ಕೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ.

Click here

Call us

Call us

ಪ್ರಿಂಟಿಂಗ್ ಪ್ರೆಸ್ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ ಉದ್ಯಮವನ್ನು ಲಾಭದ ದೃಷ್ಟಿಯಿಂದ ಕಂಡವರು ಹಣವನ್ನಷ್ಟೇ ಗಳಿಸುತ್ತಾರೆ. ಲಾಭದ ಜೊತೆಗೆ ಜನರ ವಿಶ್ವಾಸ ಗಳಿಸಿದವರು ಸ್ವರ್ಧೆಯ ನಡುವೆಯೂ ಬಹುಕಾಲ ಚಲಾವಣೆಯಲ್ಲಿರುತ್ತಾರೆ. ೨೨ ವರ್ಷಗಳ ಹಿಂದೆ ಮುದ್ರಣ ಕ್ಷೇತ್ರದಲ್ಲಿ ಸ್ವರ್ಧೆ ಇದ್ದ ಸಂದರ್ಭದಲ್ಲಿಯೂ ತಿಮ್ಮಪ್ಪ ಪೂಜಾರಿ ಅವರು ಆರಂಭಿಸಿದ ದುರ್ಗಾಂಬ ಪ್ರಿಂಟರ‍್ಸ್ ಇಂದು ಸ್ವಂತ ಕಟ್ಟಡದಲ್ಲಿ ಕಾರ್ಯಾರಂಭ ಮಾಡುತ್ತಿರುವುದರ ಹಿಂದೆ ಅವರ ಶ್ರಮ ದೊಡ್ಡದಿದೆ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ಪೂಜಾರಿ, ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ, ಉಪ್ಪುಂದ ಮೂರ್ತೇದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮೋಹನ ಪೂಜಾರಿ ಉಪ್ಪುಂದ,  ಗ್ರಾಮ ಪಂಚಾಯತ್ ಸದಸ್ಯ ಸುಧಾಕರ ದೇವಾಡಿಗ, ಉದ್ಯಮಿಗಳಾದ ಮುತ್ತಯ್ಯ ಪೂಜಾರಿ, ಅಣ್ಣಪ್ಪ ಪೂಜಾರಿ ಯಡ್ತರೆ, ರಾಘವೇಂದ್ರ ದೇವಾಡಿಗ, ಮಂಜುನಾಥ ಪೂಜಾರಿ, ಅಂಬಿಕಾ ತಿಮ್ಮಪ್ಪ ಪೂಜಾರಿ ಮೊದಲಾದವರು ಇದ್ದರು.

ದುರ್ಗಾಂಬಾ ಪ್ರಿಂಟರ‍್ಸ್‌ನ ಮಾಲಿಕ ತಿಮ್ಮಪ್ಪ ಪೂಜಾರಿ ಸ್ವಾಗತಿಸಿದರು. ಸಂಘಟಕ ನಾಗರಾಜ ಪಿ. ಯಡ್ತರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *

twenty + 17 =